Gift Politics: ಬೆಳಗಾವಿಯಲ್ಲಿ ಅತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಪಾಲಿಟಿಕ್ಸ್, ಹುಬ್ಬಳ್ಳಿಯಲ್ಲಿ ಅಳಿಯನಿಂದ ದೋಸೆ ಹಂಚು, ಅಡುಗೆ ಪಾತ್ರೆ, ಶರ್ಟ್ ಗಿಫ್ಟ್

| Updated By: ಆಯೇಷಾ ಬಾನು

Updated on: Jan 09, 2023 | 9:45 AM

ಅತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಮಾದರಿಯಲ್ಲಿ ಗಿಫ್ಟ್ ಹಂಚಲು ಅಳಿಯ ರಜತ್ ಉಳ್ಳಾಗಡಿಮಠ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚುತ್ತಿದ್ದು ಹುಬ್ಬಳ್ಳಿಯಲ್ಲಿ ರಜತ್ ಉಳ್ಳಾಗಡಿಮಠ ಕುಕ್ಕರ್ ಜೊತೆಗೆ ದೋಸೆ ಹಂಚು, ಅಡುಗೆ ಪಾತ್ರೆ ಜೊತೆಗೆ ಶರ್ಟ್ ಗಿಫ್ಟ್ ಮಾಡುತ್ತಿದ್ದಾರೆ.

Gift Politics: ಬೆಳಗಾವಿಯಲ್ಲಿ ಅತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಪಾಲಿಟಿಕ್ಸ್, ಹುಬ್ಬಳ್ಳಿಯಲ್ಲಿ ಅಳಿಯನಿಂದ ದೋಸೆ ಹಂಚು, ಅಡುಗೆ ಪಾತ್ರೆ, ಶರ್ಟ್ ಗಿಫ್ಟ್
ರಜತ್ ಉಳ್ಳಾಗಡಿಮಠ ಗಿಫ್ಟ್ ರಾಜಕೀಯ
Follow us on

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023)ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಮತದಾರರಿಗೆ ಗಾಳ ಹಾಕುತ್ತಿವೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಕುಕ್ಕರ್ ಪಾಲಿಟಿಕ್ಸ್ ಶುರು ಮಾಡಿದ್ರೆ ಇತ್ತ ಹುಬ್ಬಳ್ಳಿಯಲ್ಲಿ ಅಳಿಯನಿಂದ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಚುನಾವಣೆಗೂ ಮುನ್ನವೇ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ರಜತ್ ಉಳ್ಳಾಗಡಿಮಠ(Rajat Ullagaddimath) ಗಿಫ್ಟ್ ರಾಜಕೀಯಕ್ಕೆ ಇಳಿದಿದ್ದಾರೆ. ಹುಬ್ಬಳ್ಳಿಯಲ್ಲೂ ‘ಕೈ’​ ಟಿಕೆಟ್ ಆಕಾಂಕ್ಷಿಯಿಂದ ಗಿಫ್ಟ್​ ಹಂಚಿಕೆ ಮಾಡಲಾಗುತ್ತಿದೆ.

ಅತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಮಾದರಿಯಲ್ಲಿ ಗಿಫ್ಟ್ ಹಂಚಲು ಅಳಿಯ ರಜತ್ ಉಳ್ಳಾಗಡಿಮಠ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚುತ್ತಿದ್ದು ಹುಬ್ಬಳ್ಳಿಯಲ್ಲಿ ರಜತ್ ಉಳ್ಳಾಗಡಿಮಠ ಕುಕ್ಕರ್ ಜೊತೆಗೆ ದೋಸೆ ಹಂಚು, ಅಡುಗೆ ಪಾತ್ರೆ ಜೊತೆಗೆ ಶರ್ಟ್ ಗಿಫ್ಟ್ ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಈಗ ಕುಕ್ಕರ್, ಅಡುಗೆ ಪಾತ್ರೆ ರಾಜಕೀಯ ಆರಂಭವಾಗಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿರುವ ರಜತ್ ಉಳ್ಳಾಗಡ್ಡಿಮಠ ಈ ಬಾರಿ ಜಗದೀಶ್ ಶೆಟ್ಟರ್ ಎದುರು ಚುನಾವಣೆಗೆ ನಿಲ್ಲಲು ತಯಾರಿ ನಡೆಸುತ್ತಿದ್ದಾರೆ. ಸೆಂಟ್ರಲ್ ಕ್ಷೇತ್ರದ ಎಲ್ಲಾ ಮನೆಗಳಿಗೆ ಕುಕ್ಕರ್, ದೋಸೆ ಹಂಚು, ಅಡುಗೆ ಪಾತ್ರೆಗಳು, ಶರ್ಟ್​ಗಳನ್ನು ನೀಡಿ ತಮಗೆ ಮತ ಹಾಕುವಂತೆ ಬೇಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ಷೇತ್ರದ ಎಲ್ಲಾ ಆಟೋಗಳಿಗೆ ಟಾಪ್ ಕವರ್ ಸಹ ಕೊಡುಗೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ದೇಶದ ಜನತೆ ಅವರನ್ನು ಆರಾಧಿಸಬೇಕೆಂದು ಬಯಸುತ್ತಾರೆ: ರಾಹುಲ್ ಗಾಂಧಿ

ಬೆಳಗಾವಿಯಲ್ಲಿ ಆಣೆ ಪ್ರಮಾಣ ಮಾಡಿಸಿಕೊಂಡು ಗಿಫ್ಟ್ ಪಾಲಿಟಿಕ್ಸ್; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಧನಂಜಯ ಜಾಧವ್ ವಾಗ್ದಾಳಿ

ಬೆಳಗಾವಿ: ಮುಂಬರುವ ವಿಧಾನ ಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಶುರು ಮಾಡಿವೆ. ತಮ್ಮ ಮತದಾರರನ್ನು ಸೆಳೆಯಲು ಹೊಸ ಹೊಸ ಆಫರ್​ಗಳ ಮೊರೆ ಹೋಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್(Gift Politics) ಬಗ್ಗೆ ಸುದ್ದಿಯಾಗಿತ್ತು. ಆದ್ರೆ ಈಗ ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮುಖಂಡ ಧನಂಜಯ ಜಾಧವ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿ, ಬಿಜೆಪಿ ಮುಖಂಡ ಧನಂಜಯ ಜಾಧವ್ ವಾಗ್ದಾಳಿ ನಡೆಸಿದ್ದಾರೆ. ನಿಜವಾದ ಅಭಿವೃದ್ಧಿ ಮಾಡಿದ್ರೆ ಆಣೆ ಪ್ರಮಾಣ ಏಕೆ ಮಾಡಿಸ್ತಿದ್ರಿ? ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚೇಲಾಗಳು ಪ್ರತಿ ಮನೆಗೆ ತೆರಳಿ ಆಣೆ ಮಾಡಿಸುತ್ತಿದ್ದಾರೆ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರು ವಿರೋಧ ಮಾಡುತ್ತಿದ್ದಾರೆ. ನಮಗೆ ವೋಟ್ ಹಾಕಬೇಕು ಅಂತಾ ಆಣೆ ಮಾಡಿಸುತ್ತಿದ್ದಾರೆ. ಈ ರೀತಿಯ ನೀಚ ರಾಜಕಾರಣ ವಿರೋಧ ಮಾಡುತ್ತಿದ್ದೇನೆ. ಇನ್ನೂರು ರೂ. ವಸ್ತು ನೀಡಿ ವೋಟ್ ಹಾಕಬೇಕೆಂದು ಆಣೆ ಮಾಡಿಸುತ್ತಿದ್ದೀರಾ? ಥೂ ಇಂತಹ ರಾಜಕಾರಣಕ್ಕೆ ಎಂದು ಧನಂಜಯ ಜಾಧವ್ ಕಿಡಿಕಾರಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:45 am, Mon, 9 January 23