ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಠಾಣೆ ಎದುರು ಪ್ರತಿಭಟನೆ; ನಿವಾಸಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ

| Updated By: Rakesh Nayak Manchi

Updated on: Jan 01, 2024 | 9:47 PM

ರಾಮ ಜನ್ಮಭೂಮಿ ವಿಚಾರವಾಗಿ ಹೋರಾಟದಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಅವರನ್ನು ಶಹರ ಠಾಣಾ ಪೊಲೀಸರು 31 ವರ್ಷಗಳ ನಂತರ ಕೇಸ್ ವಾಪಸ್ ತೆರೆದು ಬಂಧಿಸಿದ್ದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ, ಶಾಸಕ ಮಹೇಶ್ ಟೆಂಗಿನಕಾಯಿ ಅವರು ಶ್ರೀಕಾಂತ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಠಾಣೆ ಎದುರು ಪ್ರತಿಭಟನೆ; ನಿವಾಸಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ
ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿ ಬಂಧಿತನಾಗಿರುವ ಶ್ರೀಕಾಂತ್ ಪೂಜಾರಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ
Follow us on

ಹುಬ್ಬಳ್ಳಿ, ಜ.1: ರಾಮ ಜನ್ಮಭೂಮಿ ವಿಚಾರವಾಗಿ ಹೋರಾಟದಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ (Hubballi) ಶ್ರೀಕಾಂತ್ ಪೂಜಾರಿ ಅವರನ್ನು ಶಹರ ಠಾಣಾ ಪೊಲೀಸರು 31 ವರ್ಷಗಳ ನಂತರ ಕೇಸ್ ವಾಪಸ್ ತೆರೆದು ಬಂಧಿಸಿದ್ದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ, ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಅವರು ಶ್ರೀಕಾಂತ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಹಿಂದೂ ಮುಖಂಡ ಜಯತೀರ್ಥ ಕಟ್ಟಿ, ಸಂಜೀವ ಬಡಸ್ಕರ್ ನೇತೃತ್ವದಲ್ಲಿ ಠಾಣೆ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 31 ವರ್ಷಗಳ ಬಳಿಕ ಯಾಕೆ ನೀವ ಬಂಧನ ಮಾಡಿದ್ದೀರಿ ಎಂದು ಆಕ್ರೋಶ ಹಾಕುತ್ತಿದ್ದಾರೆ. ನೀವು ಹಿಂದೂಗಳನ್ನ ಟಾರ್ಗೆಟ್ ಮಾಡಿದ್ದೀರಿ ಎಂದು ಆರೋಪಿಸುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕಾನೂನು ಸುವ್ಯವಸ್ಥೆ ಡಿಸಿಪಿ ಎಂ ರಾಜೀವ್ ಅವರನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು, ಹಳೇ ಹುಬ್ಬಳ್ಳಿ ಗಲಾಟೆ ಯಾದಗ ಎಷ್ಟು ಜನರನ್ನು ಅರೆಸ್ಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ನ್ಯಾಯಕ್ಕಾಗಿ ಘೋಷಣೆ ಕೂಗುತ್ತಿರುವ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರನ್ನು ಬೆದರಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಠಾಣೆ ಮುಂಭಾಗ ಜೈ ಶ್ರೀರಾಮ್ ಘೋಷಣೆ ಕೂಗಿ ಶ್ರೀರಾಮ ಭಜನೆ ಮಾಡುತ್ತಿದ್ದಾರೆ.

ಶಹರ ಠಾಣೆ ಇನ್ಸ್ಪೆಕ್ಟರ್ ಎಂ ಎಂ ತಹಶಿಲ್ದಾರರ ಮೇಲೆ ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದಾರೆ. ಟಿವಿ9 ಜೊತೆ ಅಸಮಾಧಾನ ಹೊರಹಾಕಿದ ಪ್ರತಿಭಟನಾಕಾರರು, ಠಾಣೆಯ ಇನ್ಸ್ಪೆಕ್ಟರ್ ಓಬ್ಬ ಮುಸ್ಲಿಂ ಇದ್ದಾರೆ. ಇನ್ಸ್ಪೆಕ್ಟರ್ ಮುಸ್ಲಿಂ ಆಗಿ ಹಿಂದೂಗಳ ಟಾರ್ಗೆಟ್ ಮಾಡಿದ್ದಾರೆ. 31 ವರ್ಷ ಹಿಂದಿನ ಪ್ರಕರಣ ಈಗ ರೀ ಓಪನ್ ಮಾಡುವ ಅಗತ್ಯ ಏನಿದೆ? ಈ ಬಗ್ಗೆ ಕೇಳಿದರೆ ಇನ್ಸ್ಪೆಕ್ಟರ್ ಉಡಾಫೆ ಉತ್ತರ ನೀಡುತ್ತಾರೆ. ಅವರು ಸ್ಥಳಕ್ಕೆ ಬರಬೇಕು ನಮ್ಮ ಪ್ರಶ್ನೆ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಪರೋಮಚ್ಚ ಹಂತಕ್ಕೆ ಹೋದ ಕಾಂಗ್ರೆಸ್ ಅಲ್ಪ ಸಂಖ್ಯಾತರ ತುಷ್ಟೀಕರಣ

ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಾಪನೆ ಆಗುತ್ತಿದೆ. ಇದಕ್ಕೆ ಇಡೀ ಹಿಂದೂ ಸಮಾಜ ಸಂತೋಷಗೊಂಡಿದೆ. ಆದರೆ ಹುಬ್ಬಳ್ಳಿಯಲ್ಲಿ ವಿಚಿತ್ರ ಘಟನೆ ನಡೆದಿದೆ. 31 ವರ್ಷದ ಹಿಂದಿನ ಪ್ರಕರಣವನ್ನು ಗೃಹ ಇಲಾಖೆ ಈಗ ಓಪನ್‌ ಮಾಡಿದೆ. ರಾಮ ಮೂರ್ತಿ ಪ್ರತಿಷ್ಠಾಪನೆಗೆ ನಿಮ್ಮ ಸಹಮತಿ‌ ಇಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಲ್ಪ ಸಂಖ್ಯಾತರ ತುಷ್ಟೀಕರಣ ಪರೋಮಚ್ಚ ಹಂತಕ್ಕೆ ಹೋಗಿದೆ. ಕಾಂಗ್ರೆಸ್​ನವರಿಗೆ ಹುಬ್ಬಳ್ಳಿ ಅಂದರೆ ಬಹಳ ಪ್ರೀತಿ. ಒಂದು ಕಡೆ ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುತ್ತೇನೆ ಅಂತ ಘೋಷಿಸಿದ್ದಾರೆ. ಮತ್ತೊಂದು ಕಡೆ ಹಿಂದೂ ಕಾರ್ಯಕರ್ತನನ್ನು ಬಂಧನ ಮಾಡಿದ್ದಾರೆ. ಇನ್ನೊಂದು ಕಡೆ ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರ ಪರ ಮಾತನಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ‌ ಹೋರಾಟ ಕೇಸ್​ಗೆ ಮರುಜೀವ: 31 ವರ್ಷದ ಬಳಿಕ ಆರೋಪಿಯ ಬಂಧನ

ಹಿಂದೂ ಕಾರ್ಯಕರ್ತನ ಬಂಧಿಸೋದಕ್ಕೆ ಯಾರೂ ಸೊಪ್ಪು ಹಾಕಿಲ್ಲ. ಅನೇಕ ಕಾರ್ಯಕರ್ತರು ಹೋರಾಟದ ಮೂಲಕವೇ ರಾಮಮಂದಿರ ನಿರ್ಮಾಣ ಆಗುತ್ತಿದೆ. ಅಕಸ್ಮಾತ್ ಏನಾದರೂ ಆದರೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಒತ್ತಡ ತಂದು ಕಾರ್ಯಕರ್ತನನ್ನು ಬಂಧನ ಮಾಡಿಸಿದೆ. ಹಿಂದೆ ಅನೇಕ ಕಮೀಷನರ್ ಇದ್ದರು. ಅವತ್ತು ಯಾಕೆ ಅರೆಸ್ಟ್ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಹಳೇ ಹುಬ್ಬಳ್ಳಿ ಗಲಾಟೆ ಮಾಡಿದರ ಬಿಡುಗಡೆಗೆ ಪತ್ರ ಬರೆದಿದ್ದರು. ಅವರು ಅಮಾಯಕರು ಅಂತಾ ಮುದ್ರೆ ಹಾಕಿದ್ದಾರೆ. ಗಲಭೆಕೋರರ ಪರ ಮಾತನಾಡುತ್ತಿದ್ದಾಋಏ. ಕಾಂಗ್ರೆಸ್ ಅಂದರೆ ಹಿಂದೂ ವಿರೋಧಿ ಪಾರ್ಟಿ. ಅವರಿಗೆ ಅಲ್ಪ ಸಂಖ್ಯಾತರ ತುಷ್ಟೀಕರಣವೇ ಪರೋಮಚ್ಚವಾಗಿದೆ. ಕಳೆದ ಆರು ತಿಂಗಳಿಂದ ಸರಕಾರ ಹಿಟ್ಲರ್ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಎಲ್ಲದಕ್ಕೂ ಸರ್ಕಾರ ಅಂಕುಶ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆಯನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂದರು.

ಹಿಂದೂಗಳ ಮೇಲೆ ಅತ್ಯಾಚಾರ ಆಗುತ್ತಿದೆ ಎಂದು ಟೆಂಗಿನಕಾಯಿ ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಮಾಡುತ್ತಿದೆಯಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದೆ ತಾನೆ ಎಂದು ಹೇಳಿದರು. ಹಿಂದೂ ಸಮಾಜ ಶ್ರೀಕಾಂತ್ ಕುಟುಂಬದ ಜೊತೆ ಇರತ್ತದೆ ಎಂದರು.

ಶ್ರೀಕಾಂತ್ ಪೂಜಾರಿ ಮನೆಗೆ ಮಹೇಶ್ ಟೆಂಗಿನಕಾಯಿ ಭೇಟಿ

ಹುಬ್ಬಳ್ಳಿಯ ಪಾಂಡುರಂಗ ಕಾಲೋನಿಯಲ್ಲಿರುವ ಬಂಧಿತ ಶ್ರೀಕಾಂತ್ ಪೂಜಾರಿ ಮನೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು. ಶುಕ್ರವಾರ ಏಕಾಏಕಿ ಮನೆಗೆ ಬಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಶಾಸಕರಿಗೆ ಶ್ರೀಕಾಂತ್ ಪೂಜಾರಿ ಪುತ್ರ ಮಂಜುನಾಥ್ ತಿಳಿಸಿದ್ದಾರೆ.

ಶ್ರೀಕಾಂತ್​ ಅವರ ಎರಡೂ ಕೈಗಳು ಆಪರೇಷನ್ ಆಗಿದೆ ಎಂದು ಕುಟುಂಬಸ್ಥರು ಶಾಸಕರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಶಾಸಕರು, ಕೋರ್ಟ್​ ವಿಚಾರ ನಾವು ನೋಡಿಕೊಳ್ಳುತ್ತೇವೆ ಎಂದರು. ಅಲ್ಲದೆ, ನಿಮಗೆ ಯಾವುದೇ ಮಾಹಿತಿ ತಿಳಿಸಿಲ್ಲವೇ ಎಂದು ಶಾಸಕರು ಕೇಳಿದಾಗ ಯಾವುದೇ ಮಾಹಿತಿ ಇಲ್ಲದೆ ಕರೆದೊಯ್ದಿದ್ದಾರೆ ಎಂದ ಕುಟುಂಬದ ಸದಸ್ಯರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 pm, Mon, 1 January 24