Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಗಲಭೆ ಪ್ರಕರಣ ರೀ ಓಪನ್​​: ಹಳೆ ಕೇಸ್​​​ಗಳನ್ನು ಕ್ಲಿಯರ್ ಮಾಡಲು ಸೂಚನೆ: ಜಿ. ಪರಮೇಶ್ವರ್

ಹಳೇ ಕೇಸ್​ ಕ್ಲಿಯರ್ ಮಾಡುವಂತೆ ಸ್ಟ್ಯಾಂಡಿಂಗ್ ಆದೇಶ ಕೊಟ್ಟಿದ್ದೇವೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಅವರನ್ನು ಬಂಧಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಪ್ರಕರಣಕ್ಕೆ ಹಿಂದೂ ಕಾರ್ಯಕರ್ತರ ಬಣ್ಣವನ್ನು ಕಟ್ಟುವುದು ಸೂಕ್ತವಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಹುಬ್ಬಳ್ಳಿ ಗಲಭೆ ಪ್ರಕರಣ ರೀ ಓಪನ್​​: ಹಳೆ ಕೇಸ್​​​ಗಳನ್ನು ಕ್ಲಿಯರ್ ಮಾಡಲು ಸೂಚನೆ: ಜಿ. ಪರಮೇಶ್ವರ್
ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್
Follow us
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ

Updated on: Jan 01, 2024 | 5:29 PM

ಬೆಂಗಳೂರು, ಜನವರಿ 01: ಹಳೇ ಕೇಸ್​ ಕ್ಲಿಯರ್ ಮಾಡುವಂತೆ ಸ್ಟ್ಯಾಂಡಿಂಗ್ ಆದೇಶ ಕೊಟ್ಟಿದ್ದೇವೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಅವರನ್ನು ಬಂಧಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಪ್ರಕರಣಕ್ಕೆ ಹಿಂದೂ ಕಾರ್ಯಕರ್ತರ ಬಣ್ಣವನ್ನು ಕಟ್ಟುವುದು ಸೂಕ್ತವಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಹೇಳಿದ್ದಾರೆ. ರಾಮಜನ್ಮಭೂಮಿ‌ ಹೋರಾಟ ಕೇಸ್​ನಲ್ಲಿ ಹಿಂದೂ ಕಾರ್ಯಕರ್ತರ ಬಂಧನ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಪೊಲೀಸ್ ಕಮಿಷನರ್ ಜತೆ ಮಾತಾಡುತ್ತೇನೆ. ರಾಮಮಂದಿರ ಉದ್ಘಾಟನೆ ವೇಳೆ ಪ್ರಕರಣ ಚರ್ಚೆಯಾಗ್ತಿರುವ ವಿಚಾರ, ಉದ್ದೇಶ ಪೂರ್ವಕವಾಗಿ ಈ ಸಮಯದಲ್ಲಿ ಯಾರಾದರೂ ಮಾಡ್ತಾರಾ. ಆ ರೀತಿ ಏನೂ ಇಲ್ಲ ಇದೊಂದು ಆಕಸ್ಮಿಕ ಅಷ್ಟೇ ಎಂದು ಹೇಳಿದ್ದಾರೆ.

ಇದು ಲಾಂಗ್ ಪೆಂಡಿಂಗ್ ಕೇಸ್ ಎಂದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ

ಹುಬ್ಬಳ್ಳಿಯಲ್ಲಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಲಾಂಗ್ ಪೆಂಡಿಂಗ್ ಕೇಸ್. ಹಳೆ ಆರೋಪಿಗಳನ್ನ ಪತ್ತೆ ಹಚ್ಚುವ ಕೆಲಸ ಯಾವಾಗಲೂ ನಡೆಯತ್ತೆ. ಅದೇ ರೀತಿ ಈ ಪ್ರಕರಣ. ತಲೆ ಮರೆಸಿಕೊಂಡ ಆರೋಪಿಗಳನ್ನ ಪತ್ತೆ ಮಾಡಿದ್ದೇವೆ. 199 ರ ಪ್ರಕರಣದಲ್ಲಿ ಭಾಗಿಯಾದ ಪ್ರಕರಣ. ಕಳೆದ ಎರಡು ತಿಂಗಳಲ್ಲಿ 37 ಪ್ರಕರಣದಲ್ಲಿ ನಾವು ಆರೋಪಿಯನ್ನ ಅರೆಸ್ಟ್ ಮಾಡಿದ್ದೇವೆ. ಕಳೆದ ಶುಕ್ರುವಾರ ನಾವು ಅರೆಸ್ಟ್ ಮಾಡಿದ್ದೇವೆ. ಅವತ್ತು ಕೆಲವು ಜನ ಬಂಧನವಾಗಿದ್ದರು. ಆದರೆ ಕೆಲ ಜನ ಬಂಧನವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ‌ ಹೋರಾಟ ಕೇಸ್​ಗೆ ಮರುಜೀವ: 31 ವರ್ಷದ ಬಳಿಕ ಆರೋಪಿಯ ಬಂಧನ

ಒಂಬತ್ತು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆ ಪೈಕಿ ಮೂವರು ಸಾವಿನಪ್ಪಿದ್ದಾರೆ. ಅವರ ಡೆತ್ ನೋಟ್ ಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಬಂಧಿತ ವ್ಯಕ್ತಿ ಮುವ್ವತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಈಗ ಪತ್ತೆಯಾಗಿದ್ದು, ಬಂಧಿಸಲಾಗಿದೆ. ಇದರಲ್ಲಿ ವಿಶೇಷತೆ ಏನು ಇಲ್ಲ. ಸಾಮಾನ್ಯ ಪ್ರಕರಣಗಳಂತೆ ಇದನ್ನು ಸಹ ತನಿಖೆ ಮಾಡಿದ್ದೇವೆ.

ಇದು ಬಾಕಿ ಉಳಿದ ಪ್ರಕರಣಗಳಲ್ಲಿ ಒಂದು ಹೀಗಾಗಿ ಆರೋಪಿ ಸಿಕ್ಕಿದ್ದು ಅವರ ಬಂಧನ ಮಾಡಿದ್ದೇವೆ. ಇದೇ ರೀತಿ 37 ಪ್ರಕರಣಗಳಲ್ಲೂ ಆರೋಪಿಗಳನ್ನ ಪತ್ತೆ ಹಚ್ಚುವ ಕೆಲಸ ಮಾಡಲಾಗಿದೆ. ಇದರಲ್ಲಿ ಡ್ರಗ್ಸ್, ಗಾಂಜಾ, ಕಳ್ಳತನ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸಿದ್ದೇವೆ. 45 ವರ್ಷಗಳ ನಡೆದ ಪ್ರಕರಣಗಳಲ್ಲಿಯೂ ಸಹ ಆರೋಪಿಗಳ‌ ಬಂಧನ ಮಾಡಿದ್ದೇವೆ. ಪ್ರತಿಯೊಂದು ಪ್ರಕರಣಗಳಲ್ಲೂ ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.