2023ನೇ ವರ್ಷದ ಕೊನೆಯ ದಿನದಂದು ದಾಖಲೆಯ ಮದ್ಯ ಮಾರಾಟ: 18.85 ಕೋಟಿ ರೂ. ಮದ್ಯ ಬಿಕರಿ
2024ರ ಹೊಸ ವರ್ಷವನ್ನ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. 2023ನೇ ವರ್ಷದ ಕೊನೆಯ ದಿನದಂದು ದಾಖಲೆ ಪ್ರಮಾಣದಲ್ಲಿ ಮದ್ಯ ವಹಿವಾಟು ಮಾಡಲಾಗಿದೆ. ರಾಜ್ಯದ 1031 ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ ಭಾನುವಾರ 18.85 ಕೋಟಿ ರೂ. ಮೊತ್ತದ ಮದ್ಯ ಮಾರಾಟ ಮಾಡಲಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 4.34 ಕೋಟಿ ರೂ. ಹೆಚ್ಚಳವಾಗಿದೆ.
ಬೆಂಗಳೂರು, ಜನವರಿ 01: 2024ರ ಹೊಸ ವರ್ಷವನ್ನ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. 2023ನೇ ವರ್ಷದ ಕೊನೆಯ ದಿನದಂದು ದಾಖಲೆ ಪ್ರಮಾಣದಲ್ಲಿ ಮದ್ಯ (liquor) ವಹಿವಾಟು ಮಾಡಲಾಗಿದೆ. ಡಿ.31 ರಂದು ರಾಜ್ಯದ 1031 ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ ಭಾನುವಾರ 18.85 ಕೋಟಿ ರೂ. ಮೊತ್ತದ ಮದ್ಯ ಮಾರಾಟ ಮಾಡಲಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 4.34 ಕೋಟಿ ರೂ. ಹೆಚ್ಚಳವಾಗಿದೆ.
2022ರ ಡಿ. 31ರಂದು 14.51 ಕೋಟಿ ರೂ. ಮೊತ್ತದ ಮದ್ಯ ಮಾರಾಟ ಆಗಿತ್ತು. 2022ರ ಡಿ. 31 ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ 1.35 ಕೋಟಿ ರೂ. ಮೊತ್ತದ ಮದ್ಯ ಮಾರಾಟವಾಗಿತ್ತು. ಬೇರೆ ರಾಜ್ಯದ ಎಲ್ಲಾ ಎಂಎಸ್ಐಎಲ್ ಮಳಿಗೆಗಳಿಂದ ಮದ್ಯ ಮಾರಾಟದ ವಹಿವಾಟು 8 ಕೋಟಿ ರೂ. ಆಗಿತ್ತದೆ. ಈ ಭಾರಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು 18.8 ಕೋಟಿ ರೂ.ಗೆ ಏರಿಕೆ ಆಗಿದೆ.
ಇದನ್ನೂ ಓದಿ: ಗ್ಯಾರಂಟಿ ನಷ್ಟ ಭರಿಸೋಕ್ಕೆ ಸರ್ಕಾರದಿಂದ ಹೊಸ ಪ್ಲಾನ್; ಮಾಲ್, ಸೂಪರ್ ಮಾರ್ಕೆಟ್‌ನಲ್ಲೂ ಮದ್ಯ ಮಾರಾಟ
ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಎಂಎಸ್ಐಎಲ್ ಮಳಿಗೆಯಲ್ಲಿ ಅತ್ಯಂತ ಹೆಚ್ಚು ಅಂದರೆ 11.66 ಲಕ್ಷ ರೂ. ಮದ್ಯ ಮಾರಾಟ ಮಾಡಲಾಗಿದೆ. ರಾಯಚೂರು ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ 9.96 ಲಕ್ಷ ರೂ. ಮೊತ್ತದ ಮದ್ಯ ಬಿಕರಿ ಆಗಿದ್ದು, ಜಿಲ್ಲಾವಾರು ಮಾರಾಟದಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ ಅಂದರೆ 1.82 ಕೋಟಿ ರೂ. ಮೊತ್ತದ ಮದ್ಯ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಬೆಂಗಳೂರು ಎಂಜಿ ರಸ್ತೆ ಬಂದ್, ಪಬ್ಗಳ ಮುಂದೆ ಕ್ಯೂನಿಂತ ಜನರು
ನಿನ್ನೆ ಹೊಸ ವರ್ಷಾಚರಣೆ ಹಿನ್ನೆಲೆ ಚರ್ಚ್ಸ್ಟ್ರೀಟ್ನ ಬಹುತೇಕ ಪಬ್ಗಳು ಹೌಸ್ಫುಲ್ ಆಗಿದ್ದವು. ಪಬ್ಗಳ ಮುಂದೆ ಗ್ರಾಹಕರು ಕ್ಯೂನಿಂತಿದ್ದರು. ಮಾಸ್ಕ್ ಧರಿಸಿ, ಮುಖ ಮುಚ್ಚಿಕೊಂಡು ಕೆಲವರು ಓಡಾಡುತ್ತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.