ಹುಬ್ಬಳ್ಳಿ: ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಕೊಡಿಸುವುದಾಗಿ ಹುಬ್ಬಳ್ಳಿಯ ಸುರೇಶ್ ಕುಮಾರ್ ಎಂಬುವವರಿಗೆ ಅಪರಿಚಿತ ವ್ಯಕ್ತಿಗಳು ಆನ್ಲೈನ್ (Online) ವಂಚನೆ ಮಾಡಿದ್ದಾರೆ. ಸುರೇಶ್ ಕುಮಾರ್ಗೆ ಆನ್ಲೈನ್ ವಂಚಕರು ಸುಮಾರು ಒಂದು ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. ಸುರೇಶ್ ಕುಮಾರ್ 499 ರೂಪಾಯಿ ತುಂಬಿ ಕೋಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿದ್ದರು. ಅದೇ ದಿನ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮಾತನಾಡಿದ್ದರು. ಡಿಸ್ಕೌಂಟ್ ಕೊಡಿಸುವುದಾಗಿ ಹೇಳಿ ವಿವಿಧ ಶುಲ್ಕದ ಹೆಸರಲ್ಲಿ ಒಂದು ಲಕ್ಷ ರೂಪಾಯಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿ ಅರೆಸ್ಟ್!:
ಬೆಂಗಳೂರು: ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. ಜಯಂತಿ ಅಲಿಯಾಸ್ ಕುಟ್ಟಿಯಮ್ಮ ಬಂಧಿತ ಆರೋಪಿತೆ. ನಗರದ ಒಟ್ಟು ಇಪ್ಪತ್ತು ಮೂರು ಕಳ್ಳತನ ಪ್ರಕರಣದಲ್ಲಿ ಈಕೆ ಅರೋಪಿತೆಯಾಗಿದ್ದಾಳೆ. ಮಹಿಳೆ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತಿದ್ದಳಿ. ಬಳಿಕ ಒಂಟಿಯಾಗಿ ಮನೆಗೆಳಿಗೆ ಹೋಗಿ, ಮನೆ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಳು.
ಬಂಧಿತ ಮಹಿಳೆ ಒಂದೆ ಏರಿಯಾದಲ್ಲಿ ಎರಡು ಕಳ್ಳತನ ಮಾಡಿದ್ದಾಳೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಎರಡು ಹೊಸ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಂಬೇಡ್ಕರ್ ಬ್ಯಾನರ್ ವಿರೂಪಗೊಳಿಸಿ ಆರೋಪಿಗಳು ಸೆರೆ:
ಅಂಬೇಡ್ಕರ್ ಬ್ಯಾನರ್ ವಿರೂಪಗೊಳಿಸಿದ ಆರೋಪದ ಹಿನ್ನೆಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೋಣಾಜೆ ಪೊಲೀಸರು ಶರಣ್ (24), ಸುಜಿತ್ (26) ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳು ಮಂಗಳೂರು ಹೊರವಲಯದ ಅಸ್ಶೆಗೋಳಿಯಲ್ಲಿ ಅಳವಡಿಸಿದ ಅಂಬೆಡ್ಕರ್ ಜಯಂತಿ ಫ್ಲೆಕ್ಸ್ಗೆ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
ಅರಿವಿನ ಜ್ಯೋತಿ ಎಂದರೇನು? ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹೇಳ್ತಾರೆ ಕೇಳಿ
Published On - 8:57 am, Thu, 24 March 22