ಧಾರವಾಡ: ಕಳ್ಳತನವಾಗಿದ್ದ ಒಂದು ಕೋಟಿ ಮೌಲ್ಯದ ಮೊಬೈಲ್ ಫೋನ್ (Mobile Phone) ಗಳನ್ನು ಹುಬ್ಬಳ್ಳಿ – ಧಾರವಾಡ ಅವಳಿ ನಗರದ ಜನರಿಗೆ ವಾಪಸ್ ಕೊಡಿಸುವಲ್ಲಿ ಪೊಲೀಸರ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಳೆದು ಹೋಗಿದ್ದ ಒಂದು ಕೋಟಿ ರೂಪಾಯಿಯಷ್ಟು ಮೌಲ್ಯದ 400 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ್ದ ಅವಳಿನಗರದ (Hubballi and Dharwad) ಪೊಲೀಸರು, ಅವುಗಳನ್ನ ಇಂದು ವಾರಸುದಾರರಿಗೆ ಹಿಂದಿರುಗಿಸಿದರು. ಪೊಲೀಸರ ಕಾರ್ಯವನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಸಮಾಜಕ್ಕೆ ಪೊಲೀಸರ ಇಂತಹ ಕಾರ್ಯ ಅಗತ್ಯವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ
ಮೊಬೈಲ್ ಕಳೆದುಕೊಂಡವರು ಇ – ಸ್ಪಂದನ ಹಾಗೂ ಸಿ ಐ ಇ ಆರ್ ಮೂಲಕ ( (Mobile Theft and Central Equipment Identity Register) ದೂರು ಸಲ್ಲಿಸಿದ್ದರು. ಅವಳಿ ನಗರದ ಡಿ ಜಿ ಹಾಗೂ ಐ ಜಿ ಪಿ ಪ್ರವೀಣ್ ಸೂದ್ ಅವರ ಸಮ್ಮುಖದಲ್ಲಿ ವಾರಸುದಾರರು ಕಳೆದುಹೋದ ತಮ್ಮ ಫೋನ್ ಗಳನ್ನು ವಾಪಸ್ ಪಡೆದುಕೊಂಡರು.
ಸಿ ಇ ಐ ಆರ್ ಕೇಂದ್ರ ದೂರಸಂಪರ್ಕ ಇಲಾಖೆಯ ಯೋಜನೆಯಾಗಿದ್ದು ಕಳೆದು ಹೋದ ಮೊಬೈಲ್ ಡಿವೈಸ್ನ ಐ ಎಂ ಇ ಐ ಸಂಖ್ಯೆಯ ಸಹಾಯದಿಂದ ಅದನ್ನು ಪತ್ತೆ ಮಾಡಬಹುದಾಗಿದೆ. ಇ – ಸ್ಪಂದನದ ಮೂಲಕ ಸಾರ್ವಜನಿಕರು ತಮ್ಮ ದೂರು ಸಲ್ಲಿಸಬಹುದಾಗಿದ್ದು, ಶೀಘ್ರದಲ್ಲಿ ಅವುಗಳಿಗೆ ಸ್ಪಂದಿಸುವ ವ್ಯವಸ್ಥೆ ತರಲಾಗಿದೆ.
ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಿದ ಅವಳಿ ನಗರದ ಪೊಲೀಸರಿಗೆ ಅಭಿನಂದನೆ ಹೇಳಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮೊಬೈಲ್ ಕಳೆದುಕೊಂಡ ಜನರು ಇ ಸ್ಪಂದನದ ಮೂಲಕ ದೂರು ಸಲ್ಲಿಸುವಂತೆ ಕರೆ ನೀಡಿದ್ದಾರೆ. Central Equipment Identity Register -CEIR ವೆಬ್ ಸೈಟ್ಗೆ ಭೇಟಿ ನೀಡಿ ದೂರು ಸಲ್ಲಿಸಬಹುದು ಅಥವಾ 02-8277952828 ಈ ಮೊಬೈಲ್ ಸಂಖ್ಯೆಗೆ Hi ಎಂದು ವಾಟ್ಸಪ್ ಸಂದೇಶ ಕಳುಹಿಸಿ ಸಾರ್ವಜನಿಕರು ದೂರ ದಾಖಲಿಸಬಹುದಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Fri, 7 April 23