ವಿಡಿಯೋದಲ್ಲಿರುವ ಮಹಿಳೆ ಯಾರು ಎಂದು ನನಗೆ ಗೊತ್ತಿಲ್ಲ, ಆಕೆಯ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿದ್ದರು: ದಿನೇಶ್​ ಕಲ್ಲಹಳ್ಳಿ

|

Updated on: Mar 05, 2021 | 5:40 PM

Ramesh Jarkiholi CD Controversy: ಆ ವಿಡಿಯೋದಲ್ಲಿ ಇರುವ ಮಹಿಳೆ ನನಗೆ ಪರಿಚಯವಿಲ್ಲ. ಆಕೆಯ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿದ್ದರು. ನನಗೆ ಯಾರು ಪರಿಚಯ ಅಂತ ಬಹಿರಂಗಪಡಿಸಲು ಆಗಲ್ಲ. ಎಫ್​ಐಆರ್ ಮಾಡ್ತಾರಾ ಇಲ್ವಾ ಅಂತ ಗೊತ್ತಿಲ್ಲ.

ವಿಡಿಯೋದಲ್ಲಿರುವ ಮಹಿಳೆ ಯಾರು ಎಂದು ನನಗೆ ಗೊತ್ತಿಲ್ಲ, ಆಕೆಯ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿದ್ದರು: ದಿನೇಶ್​ ಕಲ್ಲಹಳ್ಳಿ
ದಿನೇಶ್​ ಕಲ್ಲಹಳ್ಳಿ
Follow us on

ಬೆಂಗಳೂರು: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 4 ಗಂಟೆಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿ ಹೊರಗೆ ಬಂದಿರುವ ದಿನೇಶ್​ ಕಲ್ಲಹಳ್ಳಿ, ಪೊಲೀಸರಿಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೇನೆ. ತನಿಖೆಗೆ ಪೂರಕವಾಗಿ ಮಾಹಿತಿ ಕೊಟ್ಟಿದ್ದೀನಿ. ತನಿಖೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳಲು ಬರುವುದಿಲ್ಲ. ಮುಚ್ಚಿದ ಲಕೋಟೆಯಲ್ಲಿ ನನಗೆ ಕೊಟ್ಟ ಸಿಡಿಯನ್ನೇ ಪೊಲೀಸರಿಗೆ ಕೊಟ್ಟಿದ್ದೇನೆ. ಅವತ್ತು ಕೊಟ್ಟ ದೂರಿಗೆ ನಾನು ಬದ್ಧನಾಗಿದ್ದೇನೆ. ನನ್ನ ದೂರಿನಲ್ಲಿ ಮೊದಲ ದಿನವೇ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದೇನೆ. ಈ ಸಿಡಿಯ ಸತ್ಯಾಸತ್ಯತೆ ಬಯಲಿಗೆಳೆಯಿರಿ ಅಂತ ಪೊಲೀಸರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಆ ವಿಡಿಯೋದಲ್ಲಿ ಇರುವ ಮಹಿಳೆ ನನಗೆ ಪರಿಚಯವಿಲ್ಲ. ಆಕೆಯ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿದ್ದರು. ನನಗೆ ಯಾರು ಪರಿಚಯ ಅಂತ ಬಹಿರಂಗಪಡಿಸಲು ಆಗಲ್ಲ. ಎಫ್​ಐಆರ್ ಮಾಡ್ತಾರಾ ಇಲ್ವಾ ಅಂತ ಗೊತ್ತಿಲ್ಲ. ಪೊಲೀಸರು ತನಿಖೆ ಮಾಡ್ತೀವಿ ಅಂತ ಹೇಳಿದ್ದಾರೆ. ಕೆಲವು ವಿಷಯಗಳನ್ನು ಮಾಧ್ಯಮಗಳ ಮೂಲಕ ಹೇಳಲು ಆಗುವುದಿಲ್ಲ. ನನಗೆ ಗೊತ್ತಿರುವುದನ್ನು ಪೊಲೀಸರಿಗೆ ಹೇಳಿದ್ದೇನೆ ಎಂದು ಕಬ್ಬನ್​ ಪಾರ್ಕ್​ ಠಾಣೆ ಪೊಲೀಸರಿಂದ ಸುದೀರ್ಘ ವಿಚಾರಣೆಯ ನಂತರ ಮಾಧ್ಯಮಗಳಿಗೆ ದಿನೇಶ್ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೆ ಸಹಮತವಿದೆ. ಬ್ಲಾಕ್​ಮೇಲ್ ಆಗಿದೆ ಆಂದ್ರೆ ತನಿಖೆ ಆಗಲಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಈ ಬಗ್ಗೆ ಇಂದು ಬೆಳಗ್ಗೆ ವಿಚಾರಣೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ದಿನೇಶ್ ಕಲ್ಲಹಳ್ಳಿ, ಅಶ್ಲೀಲ ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿಯನ್ನ ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹೇಳಿರುವುದನ್ನು ಸ್ವಾಗತಿಸುತ್ತೇನೆ. ಯಾರು ಬ್ಲ್ಯಾಕ್​ಮೇಲ್ ಮಾಡ್ತಿದ್ದಾರೋ ಅವರನ್ನ ಬಂಧಿಸಲಿ ಎಂದು ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆ ಬಳಿ ಪ್ರತಿಕ್ರಿಯೆ ನೀಡಿದ್ದರು. ಇಂದು ತನಿಖೆಗೆ ಬೇಕಾದ ಪೂರಕ ದಾಖಲೆಗಳನ್ನು ನಾನು ಒದಗಿಸುತ್ತೇನೆ. ಪೊಲೀಸರ ವಿಚಾರಣೆಗೆ ಸಹಕಾರ ನೀಡುತ್ತೇನೆ. ನನಗೆ ಭದ್ರತೆ ನೀಡಿಲ್ಲವಾದರೂ ತನಿಖೆಗೆ ಸಹಕಾರವಾಗಲಿ ಎಂಬ ಕಾರಣಕ್ಕೆ ಬಂದಿದ್ದೇನೆ. ದೂರಿನಲ್ಲಿರುವ ಸತ್ಯಾಸತ್ಯತೆಯ ಬಗ್ಗೆ ತನಿಖೆ ಆಗಬೇಕು. ಈ ವಿಚಾರದಲ್ಲಿ ಯಾರೇ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರೂ ಅವರನ್ನು ಬಂಧಿಸಬೇಕು ಎಂದು ತಿಳಿಸಿದ್ದರು.

ಇದನ್ನೂ ಓದಿ:
ಸಿಡಿ ಇಟ್ಕೊಂಡು ಬ್ಲ್ಯಾಕ್​ಮೇಲ್​ ಮಾಡೋರನ್ನು ಬಂಧಿಸಲಿ, ನಾನು ತನಿಖೆಗೆ ಸಹಕಾರ ಕೊಡ್ತೀನಿ: ದಿನೇಶ್ ಕಲ್ಲಹಳ್ಳಿ

ಸಂತ್ರಸ್ತ ಯುವತಿ ತಮ್ಮದು ಸಹಮತ ಸೆಕ್ಸ್​ ಎಂದು ಹೇಳಿದರೆ.. ನಾನು ಕಾನೂನು ಹೋರಾಟ ನಡೆಸುತ್ತೇನೆ -ದಿನೇಶ್ ಕಲ್ಲಹಳ್ಳಿ

Published On - 5:21 pm, Fri, 5 March 21