ಬೆಂಗಳೂರು: ಬಹುತೇಕ ಜಿಲ್ಲಾ ಕೋರ್ಟ್ಗಳ ಕೋವಿಡ್ ಮಾರ್ಗಸೂಚಿ ಸಡಿಲಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕಕ್ಷಿದಾರರಿಗೆ ಕೋರ್ಟ್ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸುವ ಬಗ್ಗೆ ನಿರ್ಧರಿಸಲಾಗಿದೆ.
ಅದರ ಅನ್ವಯ, ಕೋವಿಡ್ ಲಕ್ಷಣಗಳಿಲ್ಲದಿದ್ದರೆ ನ್ಯಾಯಾಲಯ ಪ್ರವೇಶಕ್ಕೆ ಅನುಮತಿ ಸಿಗಲಿದೆ. ತಾಪಮಾನ ಪರೀಕ್ಷೆ ನಂತರ ಕೋರ್ಟ್ ಪ್ರವೇಶಕ್ಕೆ ಅನುಮತಿ ದೊರಕಲಿದೆ. ಆದರೆ, ದೈಹಿಕ ಅಂತರ, ಮಾಸ್ಕ್ ಕಡ್ಡಾಯ ನಿಯಮಗಳು ಮೊದಲಿನಂತೆ ಮುಂದುವರಿಯಲಿದೆ. ಕ್ಯಾಂಟೀನ್, ಜೆರಾಕ್ಸ್, ಟೈಪಿಂಗ್, ನೋಟರಿಗೂ ಅವಕಾಶ ಲಭ್ಯವಾಗಲಿದೆ. ಈ ಬಗ್ಗೆ, ಮುಖ್ಯ ನ್ಯಾಯಾಧೀಶರ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಪ್ರಕಟಣೆ ಹೊರಡಿಸಿದ್ದಾರೆ. ಜನವರಿ 18ರಿಂದ ಪರಿಷ್ಕೃತ ಮಾರ್ಗಸೂಚಿ ಜಾರಿಯಾಗಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾ ಕೋರ್ಟ್ಗಳಲ್ಲಿ ನಿರ್ಬಂಧ ಮುಂದುವರಿಯಲಿದೆ. ಕ್ಯಾಂಟೀನ್ನಲ್ಲಿ ಪ್ಯಾಕೆಟ್ ಅಹಾರ, ಕಾಫಿ, ಟೀ ಬಿಸ್ಕತ್ ಪೂರೈಕೆ ಬಗ್ಗೆ ಬಾರ್ ಅಸೋಸಿಯೇಷನ್ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ಲಭ್ಯವಾಗಿದೆ.
ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊವಿಶೀಲ್ಡ್ ಲಸಿಕೆ.. DCGI ಮಾರ್ಗಸೂಚಿ
Published On - 8:32 pm, Wed, 13 January 21