ತಿಹಾರ್ ಜೈಲಿನಲ್ಲಿ ನನಗೆ ಒಂದು ಚೇರ್ ಸಹ ನೀಡಲಿಲ್ಲ. ನನ್ನನ್ನು ನಿಲ್ಲಿಸಿಯೇ ವಿಚಾರಣೆ ಮಾಡಿದ್ದಾರೆ. ನನಗೆ ಸೊಂಟ, ಬೆನ್ನು ನೋವು ಇದೆ. ಹೀಗಾಗಿ ನನಗೆ ಒಂದು ಕುರ್ಚಿ ಬೇಕೆಂದು ಜಡ್ಜ್ಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಬ್ಯಾರಕ್ ಹೊರಗೆ ಲೈಬ್ರರಿ ಇದೆ ಅಲ್ಲೂ ಕುರ್ಚಿ ಕೊಡ್ತಿಲ್ಲ. ಡಾಕ್ಟರ್ ಕುರ್ಚಿ ನೀಡಲು ಸಲಹೆ ನೀಡಿದ್ದಾರೆ. ನಾನು 30 ವರ್ಷದ ಹಿಂದೆ ಬಂಧಿಖಾನೆ ಸಚಿವನಾಗಿದ್ದೆ. ನನಗೂ ಬಂಧಿಖಾನೆ ವಿಚಾರಗಳ ಬಗ್ಗೆ ಗೊತ್ತಿದೆ. ನನಗೆ ಬೇರೆ ವಿನಾಯಿತಿ ಬೇಡ ಕುರ್ಚಿ ಬೇಕು. ಇಷ್ಟು ಅಮಾನವೀಯವಾಗಿ ನಡೆಸಿಕೊಳ್ಳಬಾರದು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದೆಲ್ಲ ನಡೆದಿದ್ದು ದೆಹಲಿಯ ಇಡಿ ನ್ಯಾಯಾಲಯದಲ್ಲಿ. ಡಿಕೆಶಿ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಇಡಿ ಕೋರ್ಟ್ಗೆ ಹಾಜರುಪಡಿಸಿದ್ದರು. ಈ ವೇಳೆ ಜಡ್ಜ್ ಎದುರು ಡಿಕೆಶಿ ತಮ್ಮ ನೋವನ್ನು ಈ ರೀತಿ ಹೇಳಿಕೊಂಡಿದ್ದಾರೆ.
ಮತ್ತೆ ನ್ಯಾಯಾಂಗ ಬಂಧನ ವಿಸ್ತರಿಸುತ್ತಿದ್ದಂತೆ ಡಿಕೆಶಿಗೆ ಶೇಕ್ ಹ್ಯಾಂಡ್ ಮಾಡಲು ಅಭಿಮಾನಿಗಳಿಗೆ ಜೈಲು ಸಿಬ್ಬಂದಿ ಅವಕಾಶ ನೀಡಲಿಲ್ಲ. ಹೀಗಾಗಿ ದೂರದಿಂದಲೇ ಡಿಕೆಶಿಯನ್ನು ನೋಡಿ ಅಭಿಮಾನಿಗಳು ವಾಪಸ್ ಆಗಿದ್ದಾರೆ. ಈ ವೇಳೆ ಡಿ.ಕೆ.ಶಿವಕುಮಾರ್ಗೆ ಕನಕಪುರದಿಂದ ಬಂದಿದ್ದ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ.
Published On - 2:07 pm, Tue, 15 October 19