ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮದುವೆಯ ದಿನಾಂಕ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಅಸೆಂಬ್ಲಿ ಕಲಾಪದ ನಡುವೆಯೂ ಡಿಕೆಶಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಭೇಟಿಯಾಗಿ ಪುತ್ರಿಯ ವಿವಾಹಕ್ಕೆ ಆಮಂತ್ರಣ ನೀಡಿದ್ದಾರೆ. ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾಗೂ ಮತ್ತು ಕಾಫಿ ಡೇ ಸ್ಥಾಪಕ ದಿ. ವಿ.ಜಿ. ಸಿದ್ದಾರ್ಥ್ರ ಪುತ್ರ ಅಮರ್ಥ್ಯಗೂ ಕಂಕಣ ಭಾಗ್ಯ ಕೂಡಿ ಬಂದಿದ್ದು ಇದೇ ತಿಂಗಳ ಬುಧವಾರ 17ರಂದು ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್ ಶೈರ್ನಲ್ಲಿ ಮದುವೆ ಆರತಕ್ಷತೆ ನಿಶ್ಚಯವಾಗಿದೆ.
ಒಂದು ಕಡೆ ಕಲಾಪ ನಡೆಯುತ್ತಿದ್ದು ಮತ್ತೊಂದು ಕಡೆ ಡಿ.ಕೆ. ಶಿವಕುಮಾರ್ ಮಗಳ ಮದುವೆ ಓಡಾಟದಲ್ಲಿ ಬಿಜಿಯಾಗಿದ್ದಾರೆ. ಸ್ನೇಹಿತರಿಗೆ, ಗಣ್ಯರಿಗೆ ಆಮಂತ್ರಣ ನೀಡಿ ಮಗಳ ಮದುವೆಗೆ ಕರೆಯುತ್ತಿದ್ದಾರೆ. ಈ ವೇಳೆ ಇಂದು ಸಿಎಂ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಡಿಕೆಶಿ, ಬಿ.ಎಸ್. ಯಡಿಯೂರಪ್ಪರನ್ನು ಮಗಳ ಮದುವೆಗೆ ಆಮಂತ್ರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಅವರ ನಿಶ್ಚಿತಾರ್ಥ ಕಳೆದ ವರ್ಷ ನವೆಂಬರ್ 19 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ತಾಜ್ ಹೋಟೆಲ್ನಲ್ಲಿ ನೆರವೇರಿತ್ತು.
Photo Album ಡಿಕೆಶಿ ಪುತ್ರಿ ಐಶ್ವರ್ಯಾ, ಅಮರ್ತ್ಯ ನಿಶ್ಚಿತಾರ್ಥದ ಒಂದು ಝಲಕ್!
Published On - 12:25 pm, Thu, 4 February 21