1670 ಪ್ರಶ್ನೆ ಮುಂದಿಟ್ಟಿದ್ದೇವೆ; ಕೊವಿಡ್ ನೆಪವೊಡ್ಡಿ ಕಲಾಪ ಮೊಟಕುಗೊಳಿಸಬಾರದು -ಡಿ.ಕೆ.ಶಿ ಆಗ್ರಹ

| Updated By: ಸಾಧು ಶ್ರೀನಾಥ್​

Updated on: Sep 21, 2020 | 11:44 AM

ಬೆಂಗಳೂರು: ಇಂದಿನಿಂದ ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗಿದ್ದು ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಕಲಾಪವನ್ನು ಆರಂಭಿಸಲಾಯಿತು. ಇಂದಿನಿಂದ ಆರಂಭವಾಗುವ ಕಲಾಪಕ್ಕೆ ಹಾಜರಾಗುವ ಸದಸ್ಯರು ಕೊವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ. ಜೊತೆಗೆ, ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಸಹ ಮಾಡಲಾಗಿದ್ದು ಸದಸ್ಯರ ಆಸನಗಳ ನಡುವೆ ಶೀಲ್ಡ್ ಕವರ್ ಸಹ ಅಳವಡಿಸಲಾಗಿದೆ. ಮೊದಲನೇ ದಿನವಾದ ಇಂದು ವಿಧಾನಸಭೆಯಲ್ಲಿ ಶೇ.30ರಷ್ಟು ಶಾಸಕರು ಮಾತ್ರ ಉಪಸ್ಥಿತಿರಾಗಿದ್ದು ಕೊರೊನಾ ಹಿನ್ನೆಲೆಯಲ್ಲಿ ಶೇ.70ರಷ್ಟು ಶಾಸಕರು ಕಲಾಪಕ್ಕೆ ಗೈರು ಆಗಿದ್ದಾರೆ. ಆಡಳಿತ ಮತ್ತು ವಿಪಕ್ಷಗಳ ಹಲವು ಶಾಸಕರು ಗೈರಾಗಿದ್ದಾರೆ. […]

1670 ಪ್ರಶ್ನೆ ಮುಂದಿಟ್ಟಿದ್ದೇವೆ; ಕೊವಿಡ್ ನೆಪವೊಡ್ಡಿ ಕಲಾಪ ಮೊಟಕುಗೊಳಿಸಬಾರದು -ಡಿ.ಕೆ.ಶಿ ಆಗ್ರಹ
Follow us on

ಬೆಂಗಳೂರು: ಇಂದಿನಿಂದ ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗಿದ್ದು ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಕಲಾಪವನ್ನು ಆರಂಭಿಸಲಾಯಿತು. ಇಂದಿನಿಂದ ಆರಂಭವಾಗುವ ಕಲಾಪಕ್ಕೆ ಹಾಜರಾಗುವ ಸದಸ್ಯರು ಕೊವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ. ಜೊತೆಗೆ, ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಸಹ ಮಾಡಲಾಗಿದ್ದು ಸದಸ್ಯರ ಆಸನಗಳ ನಡುವೆ ಶೀಲ್ಡ್ ಕವರ್ ಸಹ ಅಳವಡಿಸಲಾಗಿದೆ.

ಮೊದಲನೇ ದಿನವಾದ ಇಂದು ವಿಧಾನಸಭೆಯಲ್ಲಿ ಶೇ.30ರಷ್ಟು ಶಾಸಕರು ಮಾತ್ರ ಉಪಸ್ಥಿತಿರಾಗಿದ್ದು ಕೊರೊನಾ ಹಿನ್ನೆಲೆಯಲ್ಲಿ ಶೇ.70ರಷ್ಟು ಶಾಸಕರು ಕಲಾಪಕ್ಕೆ ಗೈರು ಆಗಿದ್ದಾರೆ. ಆಡಳಿತ ಮತ್ತು ವಿಪಕ್ಷಗಳ ಹಲವು ಶಾಸಕರು ಗೈರಾಗಿದ್ದಾರೆ.

ಈ ನಡುವೆ, ವಿಧಾನಮಂಡಲದ ಕಲಾಪವನ್ನು ಮೊಟಕುಗೊಳಿಸಬಾರದು. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತೆ ಎಂದು ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಜೊತೆಗೆ, ಯಾವುದೇ ತಪ್ಪು ಮಾಡಿಲ್ಲಾಂದ್ರೆ ಅಧಿವೇಶನ ನಡೆಸಿ. ತಪ್ಪು ಮಾಡಿದ್ದೇ ಆದ್ರೆ ಅಧಿಕಾರದಿಂದ ಕೆಳಕ್ಕೆ ಇಳಿಯಿರಿ ಎಂದು ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಿದ್ದಾರೆ.

‘ನಾವು ಸುಮಾರು 1,670 ಪ್ರಶ್ನೆಗಳನ್ನು ಮುಂದಿಟ್ಟಿದ್ದೇವೆ’
ನಾವು ಸುಮಾರು 1,670 ಪ್ರಶ್ನೆಗಳನ್ನು ಮುಂದಿಟ್ಟಿದ್ದೇವೆ. ಎಲ್ಲದಕ್ಕೂ ಸರ್ಕಾರ ಉತ್ತರವನ್ನು ನೀಡಬೇಕು. ಸದನದಲ್ಲಿ 30 ವಿಧೇಯಕಗಳ ಮೇಲೆ ಚರ್ಚೆ ಆಗಬೇಕು. ಒಂದೊಂದು ವಿಧೇಯಕದ ಚರ್ಚೆಗೆ ಕನಿಷ್ಟ 2 ಗಂಟೆ ಬೇಕು. ಜೊತೆಗೆ, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪವಿದೆ. ಇದರ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಎಲ್ಲ ವಿಚಾರಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಆಗಬೇಕಿದೆ. ಕೊವಿಡ್ ಕಾರಣ ನೀಡಿ ಕಲಾಪ ಮೊಟಕುಗೊಳಿಸಬಾರದು ಅಂತಾ ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.