ಸರ್ಕಾರದ ಡಬಲ್ ಎಂಜಿನ್ ಈಗ ನಿಂತೋಗಿದೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

|

Updated on: May 13, 2021 | 4:54 PM

ಚಾಮರಾಜನಗರ ಆಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಡಿಕೆಶಿ, 24 ರೋಗಿಗಳ ಸಾವಿಗೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣ. ನಿವೃತ್ತ ನ್ಯಾಯಮೂರ್ತಿಗಳು ಕೂಡ ಇದೇ ವರದಿ ಕೊಟ್ಟಿದ್ದಾರೆ. ಈ ಸಾವುಗಳಿಗೆ ಯಾರು ಹೊಣೆ ಹೊರುತ್ತಾರೆಂದು ನೀವೆ ನಿರ್ಧರಿಸಬೇಕು ಎಂದು ಹೇಳಿದರು.

ಸರ್ಕಾರದ ಡಬಲ್ ಎಂಜಿನ್ ಈಗ ನಿಂತೋಗಿದೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಲಸಿಕಾ ಅಭಿಯಾನಕ್ಕೆ ಸಿಎಂ ಬಿಎಸ್​ವೈ ಚಾಲನೆ ನೀಡಿದರು. ಆಗ ಮುಖ್ಯಮಂತ್ರಿಗೆ ಎಷ್ಟು ಲಸಿಕೆ ಇದೆ ಎನ್ನುವುದು ಗೊತ್ತಿರಲಿಲ್ಲವಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಉಚಿತವಾಗಿ ಲಸಿಕೆ ನೀಡಲು ಸರ್ಕಾರಕ್ಕೆ ಆಗುವುದಿಲ್ವಾ. ಸರ್ಕಾರದಿಂದ ಆಗದಿದ್ದರೆ ನಾವೇ ವ್ಯವಸ್ಥೆ ಮಾಡುತ್ತೇವೆ. ಸರ್ಕಾರದ ಡಬಲ್ ಎಂಜಿನ್ ಈಗ ನಿಂತೋಗಿದೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇವರ ಕೈಯಲ್ಲಿ ಯಾವುದೇ ಪ್ಲ್ಯಾನ್ ಇಲ್ಲದೆ ಸರ್ಕಾರ ನಡೆಸಲು ಆಗುತ್ತಿಲ್ಲ ಎಂದು ಹೇಳಿದರು.

ಚಾಮರಾಜನಗರ ಆಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಡಿಕೆಶಿ, 24 ರೋಗಿಗಳ ಸಾವಿಗೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣ. ನಿವೃತ್ತ ನ್ಯಾಯಮೂರ್ತಿಗಳು ಕೂಡ ಇದೇ ವರದಿ ಕೊಟ್ಟಿದ್ದಾರೆ. ಈ ಸಾವುಗಳಿಗೆ ಯಾರು ಹೊಣೆ ಹೊರುತ್ತಾರೆಂದು ನೀವೆ ನಿರ್ಧರಿಸಬೇಕು ಎಂದು ಹೇಳಿದರು.

ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರತಿ ಕುಟುಂಬಕ್ಕೂ 10 ಸಾವಿರ ರೂಪಾಯಿ ಕೊಡಬೇಕು. ಲಾಕ್​ಡೌನ್​ನಿಂದ ಉದ್ಯೋಗ ಕಳೆದುಕೊಂಡವರಿಗೆ ಉಚಿತ ಹಣ ಸಿಗಬೇಕು. ತರಕಾರಿ, ಹೂವು ಬೆಳೆಗಾರರಿಗೆ ಹಣ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. ಕೊವಿಡ್ ಸಂಖ್ಯೆ ಕಡಿಮೆ ತೋರಿಸಲು ಟೆಸ್ಟ್ ಕಡಿಮೆ ಟೆಸ್ಟಿಂಗ್ ಅನ್ನೇ ಕಡಿಮೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ್ದೂ ತಪ್ಪಿದೆ, ಕೇಂದ್ರ ಸರ್ಕಾರದ್ದೂ ತಪ್ಪಿದೆ. ಸಿದ್ದರಾಮಯ್ಯ ಪತ್ರ ಬರೆದಿರುವುದು ಸರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ: ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ

Jugaad Ambulance: ಕೊವಿಡ್ ರೋಗಿಗಳಿಗೆ ಸಹಾಯ: ಪುಣೆ ಆಟೊ ಚಾಲಕರಿಂದ ‘ಜುಗಾಡ್ ಆಂಬುಲೆನ್ಸ್’ ಸೇವೆ

(DK Shivakumar says state government had failed completely)

Published On - 4:53 pm, Thu, 13 May 21