ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ: ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ

Chamarajanagar: ನ್ಯಾ. ಎ.ಎನ್.ವೇಣುಗೋಪಾಲ ಗೌಡ, ನ್ಯಾ. ಕೆ.ಎನ್.ಕೇಶವ ನಾರಾಯಣ, ಎಸ್.ಟಿ.ರಮೇಶ್, ವಿ.ಪಿ.ಬಳಿಗಾರ್ ಸಮಿತಿ ವರದಿ ಸಲ್ಲಿಸಿದೆ.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ: ಹೈಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ
ಚಾಮರಾಜನಗರ ಡಿಸಿ ಎಂ.ಆರ್.ರವಿ ಮತ್ತು ಮೈಸೂರು ಡಿಸಿ ರೋಹಿಣಿ ಸಿಂಧೂರಿ
Follow us
guruganesh bhat
| Updated By: ಡಾ. ಭಾಸ್ಕರ ಹೆಗಡೆ

Updated on:May 13, 2021 | 5:55 PM

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ಕೊರತೆ ದುರಂತದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪಕ್ಕೆ ಆಧಾರಗಳಿಲ್ಲ. ಮೈಸೂರಿನಿಂದ ಆಕ್ಸಿಜನ್ ಪೂರೈಕೆಯಲ್ಲಿ ಡಿಸಿ ನಿಯಂತ್ರಣವಿಲ್ಲ ಎಂದು ನ್ಯಾ. ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಹೈಕೋರ್ಟ್​ಗೆ ವರದಿ ಸಲ್ಲಿಸಿದೆ.

ಮೈಸೂರಿನಿಂದ ಆಕ್ಸಿಜನ್ ಪೂರೈಕೆಯಲ್ಲಿ ಡಿಸಿ ನಿಯಂತ್ರಣವಿಲ್ಲ. ಮೈಸೂರಿನಲ್ಲಿ ಆಕ್ಸಿಜನ್ ಪೂರೈಕೆ ಪ್ಲಾಂಟ್ ಗಳಿವೆ. ಸಿಐಎಂಎಸ್ ಡೀನ್, ಪ್ಲಾಂಟ್ ಜೊತೆ ಎಂಒಯು ಮಾಡಿಕೊಂಡಿದ್ದಾರೆ. ಖಾಲಿ ಸಿಲಿಂಡರ್ ಕಳಿಸಿ ಆಕ್ಸಿಜನ್ ತುಂಬಿಸಿಕೊಳ್ಳಬೇಕಿರುವುದು ಚಾಮರಾಜನಗರ ಜಿಲ್ಲಾಸ್ಪತ್ರೆ ಹೊಣೆಯಾಗಿತ್ತು. ಮೈಸೂರು ಡಿಸಿಗೆ ಆಕ್ಸಿಜನ್ ತಡೆಯುವ ಅಧಿಕಾರವಿರಲಿಲ್ಲ.. ಮೇ 1 ರಂದು ಆಕ್ಸಿಜನ್ ಘಟಕಗಳಿಗೆ ಕೈಗಾರಿಕಾ ಉದ್ದೇಶಕ್ಕೆ ಆಕ್ಸಿಜನ್ ಬಳಕೆ ಮಾಡದಂತೆ ತಿಳಿಸಲು ಭೇಟಿ ಕೊಟ್ಟಿದ್ದರು. ಮೇ.2 ರ ಸಭೆಯ ನಡಾವಳಿಯಲ್ಲೂ ಆಕ್ಸಿಜನ್ ಅಡ್ಡಿ ಚರ್ಚೆಯಾಗಿಲ್ಲ. ಚಾಮರಾಜನಗರ ಡಿಸಿ ಪಾಲ್ಗೊಂಡಿದ್ದ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ನ್ಯಾ. ಎ.ಎನ್.ವೇಣುಗೋಪಾಲ ಗೌಡ, ನ್ಯಾ. ಕೆ.ಎನ್.ಕೇಶವ ನಾರಾಯಣ, ಎಸ್.ಟಿ.ರಮೇಶ್, ಬಿ.ಪಿ.ಬಳಿಗಾರ್ ಸಮಿತಿ ವರದಿ ಸಲ್ಲಿಸಿದೆ.

ಇದನ್ನೂ ಓದಿ: ಹೋಂ ಐಸೋಲೇಶನ್​ನಲ್ಲಿ ಇರುವವರು ಮತ್ತು ಅವರ ಮನೆಯವರು ಹೇಗಿರಬೇಕು? ಇಲ್ಲಿದೆ ಮಾರ್ಗಸೂಚಿ

ಹೈಕೋರ್ಟ್​ ಚಾಟಿ: ನಾವು ನೇಣು ಹಾಕಿಕೊಳ್ಳಬೇಕಾ ಎಂದು ಕೇಳಿದ ಸದಾನಂದ ಗೌಡ, ನ್ಯಾಯಾಧೀಶರು ಸರ್ವಜ್ಞರಲ್ಲ ಎಂದ ಸಿ.ಟಿ.ರವಿ

(there is no evidense against Mysuru DC Rohini Sindhuri in Chamarajanagar Oxygen shortage death case says Commitee to Karnataka High Court)

Published On - 4:15 pm, Thu, 13 May 21