ಗದಗ: ಗದಗನ (Gadag) ಜಿಲ್ಲಾ ಆಸ್ಪತ್ರೆ (ಜಿಮ್ಸ್) (GIMS) ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಈಗ ಆಸ್ಪತ್ರೆಯಲ್ಲಿ ವೃದ್ಧೆಯೊಬ್ಬರು ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಗದಗ ತಾಲೂಕಿನ ಕಣವಿಹೊಸೂರಿನ ಮಲ್ಲಮ್ಮ ಅವರು ಉಸಿರಾಟ ತೊಂದೆಯಿಂದ ಬಳಲುತ್ತಿದ್ದಾರೆ. ಇವರಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಬೆಳಗ್ಗೆ 6 ಗಂಟೆಗೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ ಆಪರೇಷನ್ ಮಾಡುತ್ತೇವೆ ನೀರು ಕುಡಿಯಬೇಡಿ ಎಂದು ಸೂಚಿಸಿದ್ದರು. ಆಪರೇಷನ್ ಹಿನ್ನೆಲೆ ವೃದ್ಧೆ ಮಲ್ಲಮ್ಮ ಬೆಳಗ್ಗೆಯಿಂದ ನೀರು ಕುಡಿಯದೆ ಮಧ್ಯಾಹ್ನದವರೆಗೆ ಉಪವಾಸ ಇದ್ದಾರೆ.
ಮಧ್ಯಾಹ್ನವಾದರು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಲ್ಲ. ಈಗ ಮಲ್ಲಮ್ಮ ನೀರು ನೀರು ಅಂತ ನರಳಾಡುತ್ತಿದ್ದಾರೆ. ಹೊಟ್ಟೆ ನೋವಿನಿಂದ ನರಳುತ್ತಿದ್ದರೂ ವೈದ್ಯರ ನಿರ್ಲಕ್ಷ್ಯವಹಿಸಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ಜಿಮ್ಸ್ ಆಸ್ಪತ್ರೆಯಲ್ಲಿ ಐಸಿಯು ವಾರ್ಡ್ ಕೂಡ ಖಾಲಿ ಇಲ್ಲವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ಗೆ ಕರೆದೊಯ್ಯುವಂತೆ ವೈದ್ಯರು ಸೂಚನೆ ನೀಡುತ್ತಿದ್ದಾರೆ. ವೈದ್ಯರ ಅಮಾನವೀಯ ವರ್ತನೆಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳನ್ನು ಸಾಗಿಸುವ ವ್ಹೀಲ್ ಚೇರ್, ಸ್ಟ್ರೆಚರ್ನಲ್ಲಿ ಸಿಬ್ಬಂದಿ ಕಸ ಸಾಗಿಸುತ್ತಿದ್ದಾರೆ. ಹೀಗಾಗಿ ರೋಗಿಗಳು ವ್ಹೀಲ್ ಚೇರ್, ಸ್ಟ್ರೆಚರ್ ಇಲ್ಲದೇ ಪರದಾಡುತ್ತಿದ್ದಾರೆ. ಜಿಮ್ಸ್ ಆಡಳಿತ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ. ಜಿಮ್ಸ್ ಆಸ್ಪತ್ರೆ ಆಡಳಿತಕ್ಕೆ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Fri, 23 September 22