ಮಳೆಗಾಲದಲ್ಲಿ ನೀರಿನ ತೊಟ್ಟಿಯಿಂದ ಮೀನಿನ ವಾಸನೆ ಬರುತ್ತಿದೆಯೇ? ಈ ಸಲಹೆಗಳನ್ನು ಅನುಸರಿಸಿ

| Updated By: ಸಾಧು ಶ್ರೀನಾಥ್​

Updated on: Jul 27, 2024 | 5:59 PM

water tank cleaning: ತೊಟ್ಟಿಯ ನೀರಿಗೆ ಕ್ಲೋರಿನ್ ಮಾತ್ರೆಗಳನ್ನು ಸೇರಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಅಲ್ಲದೆ, ಟ್ಯಾಪ್‌ಗೆ ತೆಳುವಾದ ಬಟ್ಟೆಯನ್ನು ಕಟ್ಟುವುದರಿಂದ ನೀರನ್ನು ಫಿಲ್ಟರ್ ಮಾಡಿಕೊಂಡು ಬಕೆಟ್‌ಗೆ ತುಂಬಬಹುದು. ಸ್ನಾನ ಮಾಡಲು, ಅಡುಗೆಗೆ ಅಥವಾ ಬಟ್ಟೆಗಳನ್ನು ತೊಳೆಯಲು ನೀವು ಇದನ್ನು ಬಳಸಬಹುದು.

ಮಳೆಗಾಲದಲ್ಲಿ ನೀರಿನ ತೊಟ್ಟಿಯಿಂದ ಮೀನಿನ ವಾಸನೆ ಬರುತ್ತಿದೆಯೇ? ಈ ಸಲಹೆಗಳನ್ನು ಅನುಸರಿಸಿ
ಮಳೆಗಾಲದಲ್ಲಿ ನೀರಿನ ತೊಟ್ಟಿಯಿಂದ ಮೀನಿನ ವಾಸನೆ ಬರುತ್ತಿದೆಯೇ?
Follow us on

ಮಳೆಗಾಲದಲ್ಲಿ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಆಹಾರ ಮತ್ತು ನೀರಿನಿಂದ ಹರಡುವ ರೋಗಗಳು ಮತ್ತು ಸೋಂಕುಗಳಿಂದ ಅಪಾಯ ಹೆಚ್ಚಾಗಿರುತ್ತದೆ. ಅದರಲ್ಲೂ ಮಳೆ ನೀರು ಶೇಖರಣೆಯಾಗುವ ಜಾಗದಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಹಾಗೂ ರೋಗಾಣುಗಳು ಬೆಳೆದು ದುರ್ವಾಸನೆಯೂ ಹೊರಸೂಸುತ್ತದೆ. ನಿಮ್ಮ ಮನೆಯಲ್ಲಿ ಸುತ್ತಮುತ್ತ ಯಾವಾಗಲೂ ನೀರು ನಿಂತಿರುವುದು ಅಥವಾ ನೀರಿನ ತೊಟ್ಟಿ ಇರುತ್ತದೆ ಅಂದಿಕೊಳ್ಳಿ. ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮಳೆಗಾಲದಲ್ಲಿ ನೀರು ಗಲೀಜು ಗಲೀಜು, ದುರ್ವಾಸನೆ ಬರುತ್ತದೆ. ರೋಗಾಣುಗಳು ಸೊಳ್ಳೆಗಳಿಗೆ ಪ್ರಶಸ್ತವಾದ ಆಶ್ರಯತಾಣಗಳಾಗುತ್ತವೆ… ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಇರುವ ನೀರಿನ ತೊಟ್ಟಿ ಅಂದುಕೊಳ್ಲಿ. ಛಾವಣಿಯ ಮೇಲೆ ಇರುವುದರಿಂದ ನೀರಿನ ತೊಟ್ಟಿಯನ್ನು ಆಗಾಗ್ಗೆ ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ಆದರೆ ಇದರಿಂದ ತೊಟ್ಟಿಯಲ್ಲಿ ಲೋಳೆ, ಪಾಚಿ ಮತ್ತು ಸೊಳ್ಳೆಗಳು ಅಥವಾ ಜಲಚರ ಕೀಟಗಳ ಸೃಷ್ಟಿಗೆ ಕಾರಣವಾಗಬಹುದು. ಈ ನೀರನ್ನು ಬಳಸಿದಾಗ ಕೆಟ್ಟ ವಾಸನೆಯೂ ಬರುತ್ತದೆ. ಮಳೆಗಾಲದಲ್ಲಿ ಹೀಗೆ ದುರ್ವಾಸನೆ ಬೀರುವ ತೊಟ್ಟಿಯ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ವಿಷಯಗಳನ್ನು ಪಾಲಿಸಿ (water tank).

1. ಕೆಲವೊಮ್ಮೆ ನೀವು 15-20 ದಿನಗಳವರೆಗೆ ನಿಮ್ಮ ಮನೆಯಿಂದ ದೂರವಿರಬೇಕಾದ ಸಂದರ್ಭದ ಬಂದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀರು ತೊಟ್ಟಿಯಲ್ಲಿ ಕದಲದೇ ಹಾಗೆಯೇ ಉಳಿಯುತ್ತದೆ. ತೊಟ್ಟಿಯ ಮುಚ್ಚಳ ತೆರೆದಿದ್ದರೆ ನೀರು ಗಲೀಜು ಸಹ ಆಗುತ್ತದೆ. ದುರ್ವಾಸನೆಯೂ ಬರುತ್ತದೆ. ಸೊಳ್ಳೆಗಳು ವೃದ್ಧಿಯಾಗುತ್ತವೆ. ಆದ್ದರಿಂದ ನೀರನ್ನು ಸ್ವಚ್ಛವಾಗಿಟ್ಟು ಮುಚ್ಚಿಡುವುದು ಉತ್ತಮ.

2. ತೊಟ್ಟಿಯ ನೀರಿಗೆ ಕ್ಲೋರಿನ್ ಮಾತ್ರೆಗಳನ್ನು ಸೇರಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಅಲ್ಲದೆ, ಟ್ಯಾಪ್‌ಗೆ ತೆಳುವಾದ ಬಟ್ಟೆಯನ್ನು ಕಟ್ಟುವುದರಿಂದ ನೀರನ್ನು ಫಿಲ್ಟರ್ ಮಾಡಿಕೊಂಡು ಬಕೆಟ್‌ಗೆ ತುಂಬಬಹುದು. ಸ್ನಾನ ಮಾಡಲು, ಅಡುಗೆಗೆ ಅಥವಾ ಬಟ್ಟೆಗಳನ್ನು ತೊಳೆಯಲು ನೀವು ಇದನ್ನು ಬಳಸಬಹುದು.

3. ನೀರಿನ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾದ ನಂತರ ಅದನ್ನು ಸ್ವಚ್ಛಗೊಳಿಸಿ. ಪಾಚಿ ಮುಂತಾದವುಗಳಿದ್ದರೆ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ನಂತರ ತಾಜಾ ನೀರು ತೊಟ್ಟಿಯಲ್ಲಿ ತುಂಬಿದರೆ ವಾಸನೆ ಬರುವುದಿಲ್ಲ.

ಇದನ್ನೂ ಓದಿ: ಡೆಂಗ್ಯೂ ಪಾಸಿಟಿವ್ ಬಂದವರ ಮೇಲೆ 14 ದಿನ ನಿಗಾ ವಹಿಸಿ: ದಿನೇಶ್ ಗುಂಡೂರಾವ್

4. ನಿಮ್ಮ ಮನೆಯಲ್ಲಿ ನೀರಿನ ಕೊರತೆ, ವಿದ್ಯುತ್ ಸಮಸ್ಯೆ ಇದ್ದರೆ ಮತ್ತು ಟ್ಯಾಂಕ್‌ಗೆ ತಾಜಾ ನೀರು ತುಂಬಲು ಸಾಧ್ಯವಾಗದಿದ್ದರೆ, ವಾಸನೆ ಹೋಗಲಾಡಿಸಲು ಹಳೆಯ ನೀರನ್ನು ಕೊಳಾಯಿ ಮೂಲಕ ತುಂಬಿಸಿಕೊಂಡು ಕುದಿಸಿ, ಆ ನಂತರ ನೀರನ್ನು ತಣ್ಣಗಾಗಿಸಿ ಸ್ನಾನಕ್ಕೆ ಮತ್ತು ಮನೆಯ ಕೆಲಸಗಳಿಗೆ ಬಳಸುವುದರಿಂದ ನೀರು ವ್ಯರ್ಥವಾಗುವುದಿಲ್ಲ. ಬ್ಯಾಕ್ಟೀರಿಯಾಗಳು ಸಹ ಹೊರಹಾಕಲ್ಪಡುತ್ತವೆ.

5. ಟ್ಯಾಂಕ್ ಕೆಟ್ಟ ವಾಸನೆಯನ್ನು ಹೊಂದಿದ್ದರೆ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಕೊಳಕು ನೀರಿಗೆ ಸೇರಿಸಬಹುದು. ಈಗ ಮನೆಯಲ್ಲಿರುವ ಎಲ್ಲಾ ನಲ್ಲಿಗಳನ್ನು ತೆರೆದು ನೀರು ಬಿಡಿ. ಕ್ರಮೇಣ ಎಲ್ಲಾ ನೀರು ತೊಟ್ಟಿಯಿಂದ ಹೊರಬರುತ್ತದೆ. ಈಗ ಟ್ಯಾಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ನಂತರ ಅದನ್ನು ತಾಜಾ ನೀರಿನಿಂದ ತುಂಬಿಸಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:58 pm, Sat, 27 July 24