ಬಾಗಲಕೋಟೆ: ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್, ಕುಡುಕರ ಅಡ್ಡೆಯಾಗುತ್ತಿದೆ ಐತಿಹಾಸಿಕ ದೇವಾಲಯಗಳು

| Updated By: ಆಯೇಷಾ ಬಾನು

Updated on: Jun 09, 2021 | 9:27 AM

ಐದುನೂರು ವರ್ಷಗಳ ಐತಿಹಾಸಿಕ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ನವನಗರದ ಕೆಂಚಮ್ಮನ ದೇವಿ ದೇವಸ್ಥಾನದ ಹಿಂಬದಿ ಬೆಟ್ಟ ಕುಡುಕರ ತಾಣವಾಗುತ್ತಿದೆ. ದೇವಸ್ಥಾನದ ಹಿಂಬದಿ ಸಾರಾಯಿ ಪ್ಯಾಕೆಟ್, ಬಾಟಲಿಗಳು ಸ್ವಚ್ಛತೆಯನ್ನು ಹಾಳು ಮಾಡಿದೆ.

ಬಾಗಲಕೋಟೆ: ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್, ಕುಡುಕರ ಅಡ್ಡೆಯಾಗುತ್ತಿದೆ ಐತಿಹಾಸಿಕ ದೇವಾಲಯಗಳು
ದೇವಸ್ಥಾನದ ಆವರಣದಲ್ಲಿ ಬಿದ್ದಿರುವ ಮದ್ಯದ ಪಾಕೆಟ್​ಗಳು
Follow us on

ಬಾಗಲಕೋಟೆ: ಕೊರೊನಾ ಲಾಕ್ಡೌನ್ನಿಂದಾಗಿ ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್ ನೀಡಲಾಗುತ್ತಿದೆ. ಇದರ ಎಫೆಕ್ಟ್ನಿಂದ ಬಾಗಲಕೋಟೆ ನಗರದಲ್ಲಿನ ಖಾಲಿ ಜಾಗಗಳು, ದೇವಸ್ಥಾನದ ಬಳಿಯ ಜಾಗಗಳು ಕುಡುಕರ ಅಡ್ಡೆಯಾಗಿ ಬದಲಾಗುತ್ತಿವೆ.

ಐದುನೂರು ವರ್ಷಗಳ ಐತಿಹಾಸಿಕ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ನವನಗರದ ಕೆಂಚಮ್ಮನ ದೇವಿ ದೇವಸ್ಥಾನದ ಹಿಂಬದಿ ಬೆಟ್ಟ ಕುಡುಕರ ತಾಣವಾಗುತ್ತಿದೆ. ದೇವಸ್ಥಾನದ ಹಿಂಬದಿ ಸಾರಾಯಿ ಪ್ಯಾಕೆಟ್, ಬಾಟಲಿಗಳು ಸ್ವಚ್ಛತೆಯನ್ನು ಹಾಳು ಮಾಡಿದೆ. ಕಾಲಿಟ್ಟ ಕಡೆಯಲಿಲ್ಲ ಬಾಟಲಿಗಳು ಕುಡುಕರ ದರ್ಬಾರನ್ನು ತೋರಿಸುತ್ತಿವೆ. ಕುಡಿದು‌ ಮನಬಂದಂತೆ ಮದ್ಯಪ್ರಯರು ಬಾಟಲಿಗಳು ಎಸೆದು ಹೋಗಿದ್ದಾರೆ. ಇದೊಂದೇ ದೇವಸ್ಥಾನವಲ್ಲ. ನಗರದ ಆಂಜನೇಯಸ್ವಾಮಿ ಹಾಗೂ ಈಶ್ವರ ದೇವಸ್ಥಾನದಲ್ಲೂ ಇದೇ ಪರಿಸ್ಥಿತಿ ಇದೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಲ್ಲಿರುವ ಬೆಟ್ಟದ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಸೂಕ್ತ ಕ್ರಮ ಕೈಕೊಳ್ಳುವಂತೆ ಸಾಮಾಜಿಕ ಹೋರಾಟಗಾರ ಘನಶ್ಯಾಮ ಬಾಂಡಗೆ ಒತ್ತಾಯಿಸಿದ್ದಾರೆ. ಅಧಿಕಾರಿಗಳು ಆದಷ್ಟು ಬೇಗ ಬಾಗಲಕೋಟೆಯ ನವನಗರ ಬೈಪಾಸ್ ರಸ್ತೆಯ ಎಡಭಾಗದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಾಗುತ್ತಿರುವ ಕುಡುಕರ ಹಾವಳಿಯನ್ನು ಕಡಿಮೆ ಮಾಡಬೇಕಿದೆ.

ಕೊರೊನಾ ಸೋಂಕಿನಿಂದ ಲಾಕ್ಡೌನ್ ಹೇರಲಾಗಿದ್ದು ಅಂಗಡಿಗಳು ಬಂದ್ ಆಗಿವೆ. ಮದ್ಯ ಅಂಗಡಿಗಳಲ್ಲಿ ಕೇವಲ ಪಾರ್ಸಲ್ ಮಾತ್ರ ನೀಡಲಾಗುತ್ತಿದ್ದು ಕುಡುಕರು ಇತ್ತ ಮನೆಗೆ ಮದ್ಯ ತೆಗೆದುಕೊಂಡು ಹೋಗಲಾಗದೆ ರಸ್ತೆಯಲ್ಲೇ ಕುಡಿಯಲಾಗದೆ ಇಂತಹ ಖಾಲಿ ಜಾಗಗಳಲ್ಲಿ ಕುಡಿದು ಎಲ್ಲೆಂದರಲ್ಲಿ ಬಿಸಾಡಿ ಅಸಡ್ಡೆ ತೋರಿಸುತ್ತಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಬಿದ್ದಿರುವ ಮದ್ಯದ ಪಾಕೆಟ್​ಗಳು

ಇದನ್ನೂ ಓದಿ: ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ