ಕಟ್ ಮಾಡುವ ಮುನ್ನವೇ ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ಬೆಲೆ ಏರಿಕೆ!

| Updated By: ವಿವೇಕ ಬಿರಾದಾರ

Updated on: Jun 23, 2024 | 2:57 PM

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ‌ಈ ಮಧ್ಯೆ ತರಕಾರಿಗಳ ಬೆಲೆಯಲ್ಲಿ ಹಾವು-ಏಣಿ ಆಟ ಶುರುವಾಗಿದೆ. ಟೊಮೆಟೊ ಒಂದು ವಾರದ ಹಿಂದೆ ಶತಕ ಭಾರಿಸಿತ್ತು. ಇದೀಗ ಕೊಂಚ ಕಡಿಮೆಯಾಗಿದೆ. ಈ ಮಧ್ಯೆ ಈರುಳ್ಳಿ ಬೆಲೆ ಏರಿಕರಯಾಗುತ್ತುದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

ಕಟ್ ಮಾಡುವ ಮುನ್ನವೇ ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ಬೆಲೆ ಏರಿಕೆ!
ಈರುಳ್ಳಿ
Follow us on

ಬೆಂಗಳೂರು, ಜೂನ್​ 23: ಒಂದು ವಾರದ ಹಿಂದೆ ಟೊಮೆಟೊ (Tomato) ಬೆಲೆ ಶತಕ ಭಾರಿಸಿತ್ತು. ಇದೀಗ ಸ್ವಲ್ಪ ಬೆಲೆ ಕಡಿಮೆಯಾಗಿದೆ. ಆದರೆ ಟೊಮೆಟೊ ಬೆಲೆ ಮಧ್ಯೆ ಈರುಳ್ಳಿ (Onion) ಬೆಲೆ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಟೊಮೆಟೊ ಜೊತೆ ಜೊತೆಗೆ ಈರುಳ್ಳಿಯ ಬೆಲೆ ಏರಿಕೆಯಾಗುತ್ತಿದ್ದು, ಒಂದು ಕೆಜಿ ಈರುಳ್ಳಿಯ ಬೆಲೆ ಕೆಆರ್ ಮಾರುಕಟ್ಟೆಯಲ್ಲಿ 55 ರೂ. ಆಗಿದೆ. ಹೊರಗಡೆ 60 ರೂ. ಇದೆ.

ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಬರುತ್ತಿಲ್ಲ, ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 100 ರ ಗಡಿ ದಾಟುವ ಸಾಧ್ಯತೆ ಇದೆ. ಅಲ್ಲದೇ. ರಾಜ್ಯಕ್ಕೆ ಮುಂಗಾರು ಅವಧಿಗು ಮುನ್ನ ಪ್ರವೇಶಿಸಿದ್ದರಿಂದ ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ ರಾಜ್ಯದ ಗೋಡೌನ್​​​ನಲ್ಲಿ ಈರುಳ್ಳಿ ಕಡಿಮೆ ಸ್ಟಾಕ್​ ಇದೆ. ಹೀಗಾಗಿ ನಾಸಿಕ್​ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರು ಈರುಳ್ಳಿ ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಾಪಾರಸ್ಥ ಮುಬಾರಕ್ ಹೇಳಿದರು.

ಇದನ್ನೂ ಓದಿ: ಈರುಳ್ಳಿ ತಿಂದ ನಂತರ ಬಾಯಿ ವಾಸನೆ ಬರುವುದೇಕೆ? ಇದನ್ನು ತಡೆಯುವುದು ಹೇಗೆ?

ಬೆಲೆ ಏರಿಕೆಯಿಂದಾಗಿ ಬಡ ಜನರು ರೋಸಿಹೋಗಿದ್ದಾರೆ. ಜೀವನ ಮಾಡುವುದು ಕಷ್ಟ ಇದೆ. ಕಳೆದ ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆ ಜಾಸ್ತಿಯಾಗಿತ್ತು. ಈ ವಾರ ಈರುಳ್ಳಿಯ ಬೆಲೆ ಜಾಸ್ತಿಯಾಗುತ್ತಿದೆ. ಬರುವ ಕಡಿಮೆ ಸಂಬಳದಲ್ಲಿ ಹೇಗೆ ಜೀವನ ನಡೆಸುವುದು. ತರಕಾರಿಯ ಬೆಲೆ ಕೇಳಿಯೇ ಭಯವಾಗುತ್ತಿದೆ ಎಂದು ಗ್ರಾಹಕರಾದ ವನಿತಾ ಹೇಳಿದರು.

ಕೆಆರ್​ ಮಾರುಕಟ್ಟೆ

ತರಕಾರಿಗಳ ಬೆಲೆ
ತರಕಾರಿ ಹಿಂದಿನ ಬೆಲೆ (ರೂ.) ಇಂದಿನ ಬೆಲೆ (ರೂ.)
ನಾಟಿ ಬೀನ್ಸ್ 120 180
ಟೊಮೆಟೊ 100 80
ಬಿಳಿ ಬದನೆ 100 100
ಮೆಣಸಿನಕಾಯಿ 80 100
ನುಗ್ಗೆಕಾಯಿ (ಕೆಜಿಗೆ) 240 240
ಗಜ್ಜರಿ 80 85
ನವಿಲುಕೋಸು 80 110
ಮೂಲಂಗಿ 70 70
ಹೀರೆಕಾಯಿ 80 85
ಆಲೂಗಡ್ಡೆ 40 50
ಈರುಳ್ಳಿ 54 60
ಕ್ಯಾಪ್ಸಿಕಂ 60 108
ಹಾಗಲಕಾಯಿ 60 80
ಕೊತ್ತಂಬರಿ ಸೊಪ್ಪು (ಕೆಜಿ) 40 100
ಶುಂಠಿ 160 198
ಬೆಳ್ಳುಳ್ಳಿ 220 338
ಪಾಲಕ್ (ಕೆಜಿ) 50 50
ಪುದಿನ (ಕೆಜಿ) 130 130

ಒಟ್ಟಿನಲ್ಲಿ, ಮಳೆ ಕಾರಣದಿಂದಾಗಿ ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಜಾಸ್ತಿಯಾಗುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದರೆ ಟೊಮೆಟೊ ಹಾಗೂ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:56 pm, Sun, 23 June 24