ಬಳ್ಳಾರಿ: ಕೊರೊನಾ ಸೋಂಕನ್ನು ತಡೆಗಟ್ಟಲು ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಲಾಕ್ಡೌನ್ ಜಾರಿಗೊಳಿಸಿದೆ. ಅಗತ್ಯ ವಸ್ತುಗಳ ಖರೀದಿಸಲು ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆ ವರೆಗೆ ಅವಕಾಶ ನೀಡಿದೆ. ಬೇರೆ ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡುವಂತೆ ಸೂಚನೆ ನೀಡಿದೆ. ಹೀಗಿದ್ದೂ, ಬಳ್ಳಾರಿಯಲ್ಲಿ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ ಬಟ್ಟೆ ಅಂಗಡಿಯನ್ನು ತೆರೆದಿದ್ದಾರೆ.
ಗ್ರಾಹಕರನ್ನು ಒಳಗಡೆ ಕಳುಹಿಸಿ ವ್ಯಾಪಾರಸ್ಥರು ಅಂಗಡಿಯನ್ನು ಮುಚ್ಚಿದರು. ಈ ವೇಳೆ ಬಟ್ಟೆ ಅಂಗಡಿ ಮೇಲೆ ಬಳ್ಳಾರಿ ನಗರ ಡಿವೈಎಸ್ಪಿ ರಮೇಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಯಿತು. ಆಗ ಅಂಗಡಿ ಒಳಗಿದ್ದ ಗ್ರಾಹಕರು ಹೊರಗಡೆ ಬಂದರು. ನಿಯಮ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಡಿವೈಎಸ್ಪಿ ಸೂಚನೆ ನೀಡಿದರು.
ರಾಯಚೂರಿನ ಪೊಲೀಸರು ಫುಲ್ ಗರಂ
ರಾಯಚೂರು: ಲಾಕ್ಡೌನ್ ನಡುವೆಯೂ ವಾಹನಗಳು ಓಡಾಡುತ್ತಿರುವ ಹಿನ್ನೆಲೆ ರಾಯಚೂರಿನ ಪೊಲೀಸರು ಫುಲ್ ಗರಂ ಆಗಿದ್ದಾರೆ. ಅನಾವಶ್ಯಕವಾಗಿ ರಸ್ತಗೆ ಇಳಿದವರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಬಟ್ಟೆ ಬಜಾರ್ನಲ್ಲಿ ಬೇಕಾಬಿಟ್ಟಿಯಾಗಿ ಜನರು ಓಡಾಡುತ್ತಿದ್ದಾರೆ. ಜನರ ಓಡಾಟ ತಪ್ಪಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಪೊಲೀಸರು ಆಟೋ ಚಾಲಕರು ಹಾಗೂ ಬೈಕ್ ಸವಾರರ ವಿರುದ್ಧ ಗರಂ ಆಗಿದ್ದರೂ, ಕೇರ್ ಮಾಡದಂತೆ ಜನರು ಓಡಾಡುತ್ತಿದ್ದಾರೆ.
ಜೀವ ಉಳಿಯಲಿ ಎಂದ ವ್ಯಾಪಾರಸ್ಥರು
ಬೆಂಗಳೂರು: ಜನ ಕೊರೊನಾ ಬಂದು ಸಾಯುತ್ತಿದ್ದಾರೆ. ನಾವು ವ್ಯಾಪಾರ ಇಲ್ಲದೆ ಕೊರಗಿ ಕೊರಗಿ ಸಾಯುತ್ತಿದ್ದೀವಿ. 1000 ರೂಪಾಯಿ ಸೌತೆಕಾಯಿ ತಂದಿದ್ದೀನಿ. 200 ರೂಪಾಯಿ ವ್ಯಾಪಾರ ಕೂಡ ಆಗಿಲ್ಲ. ಹೀಗಾದರೆ ಜೀವನ ನಡೆಸುವುದು ಹೇಗೆ? ಎಂದು ಯಶವಂತಪುರ ಬಳಿ ವ್ಯಾಪಾರಸ್ಥರ ಅಳಲು ತೋಡಿಕೊಂಡಿದ್ದಾರೆ. ವ್ಯಾಪಾರ ಮೊದಲ ಹಾಗೆ ಇಲ್ಲ. ತುಂಬಾನೇ ಕಡಿಮೆ ಆಗೋಗಿದೆ. ಆದರು ಪರವಾಗಿಲ್ಲ. ಹೀಗೆ ಲಾಕ್ಡೌನ್ ಮಾಡಿದರು ಪರವಾಗಿಲ್ಲ. ವ್ಯಾಪಾರ ಮುಂದೆ ಒಂದಿನ ಮಾಡಬಹುದು. ಸದ್ಯಕ್ಕೆ ಈಗ ಜೀವ ಉಳಿಯಲಿ ಎಂದು ಕೆಲ ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ರೈತಹೋರಾಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಕೊವಿಡ್ ಸೋಂಕಿನಿಂದ ಸಾವು
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 12 ಜನ ಕೊರೊನಾ ಸೋಂಕಿಗೆ ಬಲಿ; ಜನರಲ್ಲಿ ಹೆಚ್ಚಾದ ಆತಂಕ
(DYSP raided an open clothing store in violation of lockdown rule at Bellary)