ಬೆಂಗಳೂರು ಏರ್‌ಪೋರ್ಟ್‌ನಲ್ಲಿ 1 ವರ್ಷದಲ್ಲಿ ಅತಿಹೆಚ್ಚು ಸೀಜ್‌ ಆದ ವಸ್ತುಗಳಾವುವು ಗೊತ್ತಾ?

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊನ್ನೇ ಅಷ್ಟೇ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಸಿಕ್ಕಿಬಿದ್ದಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಬೆಂಗಳೂರು ಏರ್​ಪೋರ್ಟ್​​ನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚಾಗಿ ಸೀಜ್​ ಆದ ಆದ ವಸ್ತುಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, 2024ರಲ್ಲಿ ಅತಿ ಹೆಚ್ಚು ಸೀಜ್​ ಆಗಿರುವ ವಸ್ತುಗಳಾವುವು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 1 ವರ್ಷದಲ್ಲಿ ಅತಿಹೆಚ್ಚು ಸೀಜ್‌ ಆದ ವಸ್ತುಗಳಾವುವು ಗೊತ್ತಾ?
ಬೆಂಗಳೂರು ವಿಮಾನ ನಿಲ್ದಾಣ

Updated on: Mar 12, 2025 | 5:05 PM

ಬೆಂಗಳೂರು, (ಮಾರ್ಚ್​ 12): ಕಳೆದೊಂದು ವರ್ಷದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಅತಿಹೆಚ್ಚು ಸೀಜ್‌ ಆದ ವಸ್ತು ಅಂದ್ರೆ ಅದು ಮೊಬೈಲ್​ ಪವರ್ ಬ್ಯಾಂಕ್​. ಹೌದು…ಬೆಂಗಳೂರು ಏರ್‌ಪೋರ್ಟ್‌ನಲ್ಲಿ 2024ರ ಜನವರಿಯಿಂದ 2025ರ ಫೆಬ್ರವರಿವರೆಗೆ ಅತಿಹೆಚ್ಚು ಸೀಜ್‌ ಆದ ವಸ್ತುಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು. ಚೆಕ್‌ ಇನ್‌ ಲಗೇಜ್‌ ಹಾಗೂ ಹ್ಯಾಂಡ್ ಬ್ಯಾಗ್​ಗಳಿಂದ ಸೀಜ್‌ ಮಾಡಲಾದ ವಸ್ತುಗಳ ಪಟ್ಟಿಯನ್ನು ನೋಡುವುದಾದರೆ ಮೊಬೈಲ್​ ಪವರ್ ಬ್ಯಾಂಕ್​​ಗಳೇ ಹೆಚ್ಚು. ಒಂದೇ ವರ್ಷದಲ್ಲಿ ಬರೋಬ್ಬರಿ 1,412 ಕೆಜಿಯಷ್ಟು ಪವರ್ ಬ್ಯಾಂಕ್​ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಪವರ್ ಬ್ಯಾಂಕ್ ಅತಿ ಹೆಚ್ಚು ಸೀಜ್​ ಆದ ವಸ್ತುವಾಗಿದ್ದರೆ, ನಂತರದ ಸ್ಥಾನದಲ್ಲಿ ಲೈಟರ್​​ಗಳಿದ್ದು,  ಬರೋಬ್ಬರಿ 556 ಕೆಜಿ ಲೈಟರ್‌ಗಳನ್ನು ಸೀಜ್‌ ಮಾಡಲಾಗಿದೆ. ಇನ್ನು 576 ಕೆಜಿ ಇ ಸಿಗರೇಟ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕ್ಯಾಬಿನ್ ಬ್ಯಾಗ್​ಗಳ ಮೂಲಕ ಈ ಪವರ್ ಬ್ಯಾಂಕ್‌ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇದೆ. ಆದ್ರೆ ಹ್ಯಾಂಡ್​​ ಬ್ಯಾಗ್‌ಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ಕೊಂಡೊಯ್ಯುವಂತಿಲ್ಲ. ಯಾಕಂದರೆ ಅವುಗಳಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಇರುತ್ತೆ. ಹೀಗಾಗಿ ಅದು ಅಪಾಯಕಾರಿ ಮತ್ತು ಹೆಚ್ಚು ಬಿಸಿಯಾದಾಗ ಸ್ಫೋಟವಾಗುತ್ತೆ. ಹೀಗಾಗಿ ಹ್ಯಾಂಡ್​ ಬ್ಯಾಗ್​ಗಳಲ್ಲಿ ಈ ಪವರ್​ ಬ್ಯಾಂಕ್​ಗಳನ್ನು ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ.

ಇದನ್ನೂ ಓದಿ: ನಿಮ್ಮ ಮೊಬೈಲನ್ನು ಸದಾ ಎಚ್ಚರದಿಂದಿಡಲು ಈ ಪವರ್​ ಬ್ಯಾಂಕ್​ಗಳು ಉತ್ತಮ ಆಯ್ಕೆ

ಮೊಬೈಲ್‌ ಚಾರ್ಜಿಂಗ್‌ಗೆ ದೊಡ್ಡ ಸಮಸ್ಯೆ. ಮೊಬೈಲ್‌ ಇಲ್ಲದೆ ಯಾವ ಕಾರ್ಯ ಕೂಡ ನಡೆಯದ ಕಾರಣ ಹೆಚ್ಚಿನವರು ಪವರ್‌ ಬ್ಯಾಂಕ್‌ಅನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಚಾರ್ಜ್​ ಖಾಲಿಯಾದ ತಕ್ಷಣವೇ ಬೇಕೆಂದು ಹಲವರು ಪವರ್​ ಬ್ಯಾಂಕ್​ಗಳನ್ನು ಲಗೇಜ್​ ಬ್ಯಾಗ್​ನಲ್ಲಿ ಇಟ್ಟುಕೊಳ್ಳದೇ ಹ್ಯಾಂಡ್​ ಬ್ಯಾಗ್​ನಲ್ಲಿ ಇಟ್ಟುಕೊಂಡು ಬಂದು ವಿಮಾನ ನಿಲ್ದಾಣದ ಅಧಿಕಾರಿಗಳ ಕೈಗೆ ಸಿಕ್ಕಿಬೀಳುತ್ತಾರೆ. ಚೆಕ್​ ಇನ್​ ಅಧಿಕಾರಿಗಳು ಪವರ್​ ಬ್ಯಾಂಕ್​ಗಳು ಇದ್ದರೆ ಮುಲಾಜಿಲ್ಲದೇ ಸೀಜ್​ ಮಾಡಿ ವಶಕ್ಕೆ ಪಡೆಯುತ್ತಾರೆ. ಅದರಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ವರ್ಷದಲ್ಲಿ 1,412 ಕೆಜಿಯಷ್ಟು ಪವರ್ ಬ್ಯಾಂಕ್​ಗಳನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ
ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 24/7 ಸಿಗಲಿದೆ ವೈದ್ಯಕೀಯ ಸೇವೆ
ಬೆಂಗಳೂರು ವಿಮಾನ ನಿಲ್ದಾಣ ಜಗತ್ತಿನಲ್ಲೇ ಅತಿದೊಡ್ಡದು
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಮುಡಿಗೆ ಮತ್ತೆರಡು ಪ್ರಶಸ್ತಿ
ನಿಮ್ಮ ಮೊಬೈಲನ್ನು ಸದಾ ಎಚ್ಚರದಿಂದಿಡಲು ಈ ಪವರ್​ ಬ್ಯಾಂಕ್​ಗಳು ಉತ್ತಮ ಆಯ್ಕೆ

ಪವರ್​ ಬ್ಯಾಂಕ್​ಗಳ ಬ್ಯಾಟರಿ ಸಾಮರ್ಥ್ಯದ ಮೇಲೂ ನಿರ್ಬಂಧವಿದೆ. 100Wh ಗಿಂತ ಹೆಚ್ಚಿನ ಪವರ್ ಬ್ಯಾಂಕ್‌ಗಳಿಗೆ ವಿಮಾನಯಾನ ಸಂಸ್ಥೆಯಿಂದ ವಿಶೇಷ ಪರ್ಮಿಷನ್​ ಅಗತ್ಯವಿದೆ. ಆದರೆ 160Wh ಗಿಂತ ಹೆಚ್ಚಿನ ಬ್ಯಾಟರಿಯ ಪವರ್ ಬ್ಯಾಂಕ್‌ಗಳನ್ನು ವಿಮಾನಯಾನ ಸಂಸ್ಥೆಗಳ ಅನುಮತಿ ಪಡೆದುಕೊಂಡು ಕೊಂಡೊಯ್ಯಬಹುದು. ಇನ್ನು ವಿಮಾನ ಹಾರಾಟದ ಸಮಯದಲ್ಲಿ ಗಂಭೀರ ಬೆಂಕಿಯ ಅಪಾಯವನ್ನುಂಟುಮಾಡುವ ಕಾರಣ ಹಾನಿಗೊಳಗಾದ ಅಥವಾ ಊದಿಕೊಂಡ ಪವರ್ ಬ್ಯಾಂಕ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ . ಅನೇಕ ಪ್ರಯಾಣಿಕರಿಗೆ ಈ ನಿಯಮಗಳ ಬಗ್ಗೆ ತಿಳಿದಿಲ್ಲ. ಹೀಗಾಗಿ ಪವರ್ ಬ್ಯಾಂಕ್‌ಗಳನ್ನು ಭದ್ರತಾ ತಪಾಸಣೆಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

2023ರಲ್ಲಿ ತೈವಾನ್​ನ ವಿಮಾನ ನಿಲ್ದಾಣವೊಂದರಲ್ಲಿ ಇನ್ನೇನು ಫ್ಲೈಟ್​ ಟೇಕ್​​​ಆಪ್​ ಆಗುತ್ತಿದ್ದ ವೇಳೆ ಪ್ರಯಾಣಿಕರೊಬ್ಬರ ಬಳಿ ಇದ್ದ ಪವರ್​ ಬ್ಯಾಂಕ್ ಓವರ್​ ಹೀಟ್​ ಆಗಿ ಸ್ಫೋಟಗೊಂಡಿತ್ತು. ಇದರಿಂದ ವಿಮಾನದಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಬಳಿಕ ವಿಮಾನದಲ್ಲಿದ್ದ 189 ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿತ್ತು.

ಪವರ್​ ಬ್ಯಾಂಕ್​ಗಳಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಇರುವುದರಿಂದು ಇದು ಬಿಸಿಯಾಗಿ ಸ್ಫೋಟಗೊಳ್ಳುತ್ತೆ. ಆಗಾಗಿ ಈ ರೀತಿಯ ಅನಾಹುತಗಳು ಆಗುವುದರಿಂದಲೇ ಪವರ್​ ಬ್ಯಾಂಕ್​ಗಳನ್ನು  ಹ್ಯಾಂಡ್​ ಬ್ಯಾಗ್​ಗಳಲ್ಲಿ ಕ್ಯಾರಿ ಮಾಡಲು ಅವಕಾಶವಿಲ್ಲ. ಈ ಹಿನ್ನಲೆಯಲ್ಲಿ ವಿಮಾನ ಪ್ರಯಾಣಿಕರು ಪವರ್ ಬ್ಯಾಂಕ್​​ ಅನ್ನು ಹ್ಯಾಂಡ್​ ಬ್ಯಾಗ್​​ಗಳಲ್ಲಿ ಕೊಡೊಯ್ಯುವ ಬದಲು ಲಗೇಜ್ ಬ್ಯಾಗ್​ಲ್ಲಿ ಇಟ್ಟುಕೊಂಡು ಹೋಗುವುದು ಬೆಸ್ಟ್.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us