ನಿಮ್ಮ ಮೊಬೈಲನ್ನು ಸದಾ ಎಚ್ಚರದಿಂದಿಡಲು ಈ ಪವರ್ ಬ್ಯಾಂಕ್ಗಳು ಉತ್ತಮ ಆಯ್ಕೆ
Power Bank: ಈಗಂತೂ ನಾನಾ ಕಂಪೆನಿಗಳು ಪವರ್ ಬ್ಯಾಂಕ್ ತಯಾರಿಕೆ ಆರಂಭಿಸಿರುವ ಕಾರಣ ಯಾವುದನ್ನು ಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವುದೂ ಒಂದು ಸಮಸ್ಯೆಯಂತಾಗಿ ಹೋಗಿದೆ. ಈ ಕಾರಣದಿಂದಾಗಿಯೇ ಸದ್ಯ ಮಾರುಕಟ್ಟೆಯಲ್ಲಿರುವ ಪವರ್ ಬ್ಯಾಂಕ್ ಪೈಕಿ ಯಾವುದು ಉತ್ತಮ? ಎನ್ನುವ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಮನುಷ್ಯನ ಅನಿವಾರ್ಯತೆ ಮತ್ತು ಅವಶ್ಯಕತೆ ಸಹ ಬದಲಾಗುತ್ತಾ ಹೋಗುತ್ತದೆ. ದಶಕದ ಹಿಂದೆಯಷ್ಟೇ ಹೊಸ ವಸ್ತುವಾಗಿ ನಮಗೆ ಪರಿಚಯಗೊಂಡಿದ್ದ ಮೊಬೈಲ್ ಈಗ ಬದಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಸ್ಮಾರ್ಟ್ಫೋನ್ ಬಂದಮೇಲಂತೂ ಕೇವಲ ಸಂಪರ್ಕ, ಸಂವಹನಕ್ಕಷ್ಟೇ ಅಲ್ಲದೇ ಬಹುತೇಕ ಎಲ್ಲಾ ವ್ಯವಹಾರಗಳಿಗೂ ಮೊಬೈಲ್ ಬೇಕೇಬೇಕು. ಆದರೆ, ಎಷ್ಟೋ ಸಂದರ್ಭಗಳಲ್ಲಿ ಮೊಬೈಲ್ ಚಾರ್ಜ್ ಕಡಿಮೆಯಾಗಿ ಮೊಬೈಲಿನ ಜೀವ ಹೋಗಿ ನಮ್ಮ ಕೆಲಸ ಕಾರ್ಯಗಳೆಲ್ಲಾ ಬುಡಮೇಲಾಗುತ್ತವೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲೆಂದೇ ಮೊಬೈಲಿಗೆ ಜೋಡಿಯಾಗಿ ಹೆಚ್ಚೂಕಡಿಮೆ ಅದರಷ್ಟೇ ಗಾತ್ರದ ಪವರ್ ಬ್ಯಾಂಕ್ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡವು. ಈಗಂತೂ ನಾನಾ ಕಂಪೆನಿಗಳು ಪವರ್ ಬ್ಯಾಂಕ್ ತಯಾರಿಕೆ ಆರಂಭಿಸಿರುವ ಕಾರಣ ಯಾವುದನ್ನು ಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವುದೂ ಒಂದು ಸಮಸ್ಯೆಯಂತಾಗಿ ಹೋಗಿದೆ. ಈ ಕಾರಣದಿಂದಾಗಿಯೇ ಸದ್ಯ ಮಾರುಕಟ್ಟೆಯಲ್ಲಿರುವ ಪವರ್ ಬ್ಯಾಂಕ್ ಪೈಕಿ ಯಾವುದು ಉತ್ತಮ? ಎನ್ನುವ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
1. ಪಿಟ್ರೋನ್ ಡೈನಮೋ ಲೈಟ್ 10000mAh (pTron Dynamo Lite 10000mAh Li-Polymer Power Bank) 2. ಇಂಟೆಕ್ಸ್ ಪವರ್ ಬ್ಯಾಂಕ್ (Intex Power Bank) 3. ರಿಯಲ್ ಮಿ 10000mAh ಪವರ್ ಬ್ಯಾಂಕ್ (Realme 10000mAH Power Bank) 4. ಎಂಐ ಪವರ್ ಬ್ಯಾಂಕ್ (Mi Power Bank) 5. ರೆಡ್ಮೀ ಪವರ್ ಬ್ಯಾಂಕ್ (Redmi Power Bank) 6. ಯುಆರ್ಬಿಎನ್ ಪವರ್ ಬ್ಯಾಂಕ್ (URBN Power Bank) 7. ಫಿಲಿಪ್ಸ್ ಫಾಸ್ಟ್ ಚಾರ್ಜಿಂಗ್ ಪವರ್ ಬ್ಯಾಂಕ್ (Philips Fast Charging Power Bank)
ಪಿಟ್ರೋನ್ ಡೈನಮೋ ಲೈಟ್: ಕಪ್ಪು ಬಣ್ಣದ ಆಕರ್ಷಕ ವಿನ್ಯಾಸ ಹೊಂದಿರುವ ಪಿಟ್ರೋನ್ ಡೈನಮೋ ಲೈಟ್ ಪವರ್ ಬ್ಯಾಂಕ್ 10000mAh ಸಾಮರ್ಥ್ಯದ ಲಿ-ಪಾಲಿಮರ್ ಬ್ಯಾಟರಿ ಮತ್ತು ಯುಎಸ್ಬಿ ಪೋರ್ಟ್ ಹೊಂದಿದ್ದು, ಏಕಕಾಲಕ್ಕೆ ಒಂದಕ್ಕಿಂತ ಹೆ್ಚ್ಚು ಮೊಬೈಲ್ ಚಾರ್ಜ್ ಮಾಡಬಹುದಾಗಿದೆ.
ಇಂಟೆಕ್ಸ್ ಪವರ್ ಬ್ಯಾಂಕ್: ಲಿ-ಐಯಾನ್ ಮಾದರಿಯ ಬ್ಯಾಟರಿ ಹೊಂದಿರುವ ಈ ಪವರ್ ಬ್ಯಾಂಕ್ ಚಿಕ್ಕದಾಗಿದ್ದು, ಜೊತೆಯಲ್ಲಿ ಕೊಂಡೊಯ್ಯಲು ಸಹಕಾರಿಯಾಗಿದೆ.
ರಿಯಲ್ ಮಿ 10000mAh ಪವರ್ ಬ್ಯಾಂಕ್: ಆಕರ್ಷಕ ಬಣ್ಣ ಮತ್ತು ಆಕಾರದಲ್ಲಿರುವ ಈ ಪವರ್ ಬ್ಯಾಂಕ್ 3,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 2.3 ಬಾರಿ ಮತ್ತು 4,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 1.8 ಸಲ ಚಾರ್ಜ್ ಮಾಡಬಲ್ಲದು.
ಎಂಐ ಪವರ್ ಬ್ಯಾಂಕ್: ವಿಭಿನ್ನ ಬಣ್ಣದಲ್ಲಿ ಲಭ್ಯವಿರುವ ಈ ಪವರ್ ಬ್ಯಾಂಕ್ 10000mAh ಸಾಮರ್ಥ್ಯದ ಲಿಥಿಯಮ್ ಪಾಲಿಮರ್ ಬ್ಯಾಟರಿ ಹೊಂದಿದ್ದು, 12 ಸುರಕ್ಷತಾ ಪದರಗಳಿಂದ ಮಾಡಲಾಗಿದೆ ಎಂಬುದು ಇದರ ಹೆಚ್ಚುಗಾರಿಕೆ. ತಲಾ ಎರಡು ಔಟ್ಪುಟ್ ಹಾಗೂ ಇನ್ಪುಟ್ ಹೊಂದಿರುವ ಈ ಪವರ್ ಬ್ಯಾಂಕ್ ಒಂದು ಮೈಕ್ರೋ ಯುಎಸ್ಬಿ ಮತ್ತು ಒಂದು ಸಿ ಟೈಪ್ ಇನ್ಪುಟ್ ಪೋರ್ಟ್ ಹೊಂದಿದೆ.
ರೆಡ್ಮೀ ಪವರ್ ಬ್ಯಾಂಕ್: 20000mAh ಸಾಮರ್ಥ್ಯದ ಪವರ್ ಬ್ಯಾಂಕ್ ಇದಾಗಿದ್ದು, ಎರಡು ಇನ್ಪುಟ್ ಪೋರ್ಟಲ್ಗಳನ್ನು ಹೊಂದಿದೆ.
ಯುಆರ್ಬಿಎನ್ ಪವರ್ ಬ್ಯಾಂಕ್: ವಿಭಿನ್ನ ಬಣ್ಣದಲ್ಲಿ ಲಭ್ಯವಿರುವ ಈ ಪವರ್ ಬ್ಯಾಂಕ್ 3000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 4.7 ಬಾರಿ ಮತ್ತು 4,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 3.5 ಬಾರಿ ಚಾರ್ಜ್ ಮಾಡಬಹುದಾಗಿದೆ.
ಫಿಲಿಪ್ಸ್ ಫಾಸ್ಟ್ ಚಾರ್ಜಿಂಗ್ ಪವರ್ ಬ್ಯಾಂಕ್: ಪವರ್ ಬ್ಯಾಂಕ್ 10000mAh ಸಾಮರ್ಥ್ಯದ ಲಿಥಿಯಮ್ ಪಾಲಿಮರ್ ಬ್ಯಾಟರಿ ಹೊಂದಿದ್ದು, ಚಾರ್ಜಿಂಗ್ ವೇಳೆ ಬಿಸಿಯಾಗದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: Redmi Note 10 ಸೀರಿಸ್ ಮೊಬೈಲ್ಗೆ 103 MP ಕ್ಯಾಮೆರಾ! ಕೈಗೆಟುಕುವ ದರ
ಮಹಿಳೆಯರೇ ಸುರಕ್ಷಿತವಾಗಿರಲಿ ನಿಮ್ಮ ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆ