Redmi Note 10 ಸೀರಿಸ್​ ಮೊಬೈಲ್​ಗೆ 103 MP ಕ್ಯಾಮೆರಾ! ಕೈಗೆಟುಕುವ ದರ

ರೆಡ್​ಮಿ ನೋಟ್​ 10 ಪ್ರೋ ಹಾಗೂ ರೆಡ್​ಮಿ ನೋಟ್​ 10 ಪ್ರೋ ಮ್ಯಾಕ್ಸ್​ ರಿಫ್ರೆಶ್​ ರೇಟ್​ 120Hz ಇದ್ದು, 108 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ ಇದೆ.

Redmi Note 10 ಸೀರಿಸ್​ ಮೊಬೈಲ್​ಗೆ 103 MP ಕ್ಯಾಮೆರಾ! ಕೈಗೆಟುಕುವ ದರ
ರೆಡ್​ಮಿ ನೋಟ್​ 10
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 04, 2021 | 4:39 PM

ಭಾರತದ ಮಾರುಕಟ್ಟೆಗೆ ರೆಡ್​ಮಿ ನೋಟ್​ 10, ರೆಡ್​ಮಿ ನೋಟ್​ 10 ಪ್ರೋ, ರೆಡ್​ಮಿ ನೋಟ್​ 10 ಪ್ರೋ  ಮ್ಯಾಕ್ಸ್ ಗುರುವಾರ ಲಾಂಚ್​ ಆಗಿದೆ. ಕಳೆದ ವರ್ಷ ರಿಲೀಸ್​ ಆಗಿದ್ದ ರೆಡ್​ಮಿ ನೋಟ್​ 9 ಭಾರತದಲ್ಲಿ ಯಶಸ್ಸು ಕಂಡಿತ್ತು, ಇದಾದ ಬೆನ್ನಲ್ಲೇ ರೆಡ್​ಮಿ ನೋಟ್​ 10 ಸರಣಿ ರಿಲೀಸ್​ ಆಗಿದೆ. ಈ ಸೀರೀಸ್​ ಮೊಬೈಲ್​​ಗಳಲ್ಲಿ AMOLED ಡಿಸ್​ಪ್ಲೇ ಇರೋದು ವಿಶೇಷ. ರೆಡ್​ಮಿ ನೋಟ್​ 10 ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. ರಿಫ್ರೆಶ್​ ರೇಟ್ ​60Hz ಮತ್ತು 48 ಮೆಗಾಪಿಕ್ಸೆಲ್​ ಪ್ರೈಮರಿ ಕ್ಯಾಮೆರಾ, 13 ಮೆಗಾ ಪಿಕ್ಸೆಲ್​ ಫ್ರಂಟ್​ ಕ್ಯಾಮೆರಾವನ್ನು ಇದು ಹೊಂದಿದೆ. ಇದರ ಜತೆಗೆ, 6.43 ಇಂಚಿನ ಎಚ್​​ಡಿ ಡಿಸ್​​ಪ್ಲೇ ಇದೆ. ರೆಡ್​ಮಿ ನೋಟ್​ 10 ಪ್ರೋ ಹಾಗೂ ರೆಡ್​ಮಿ ನೋಟ್​ 10 ಪ್ರೋ ಮ್ಯಾಕ್ಸ್​ ರಿಫ್ರೆಶ್​ ರೇಟ್​ 120Hz ಇದ್ದು, 108 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ ಇದೆ. ರೆಡ್​ಮಿ ನೋಟ್​ 10 ಸೀರಿಸ್​ 33ಡಬ್ಲ್ಯು ವೇಗದ ಚಾರ್ಜಿಂಗ್​ ಮತ್ತು ಭವಿಷ್ಯದಲ್ಲಿ MIUI 12.5 ಸಾಫ್ಟ್​ವೇರ್​ ಅಪ್​ಡೇಟ್ ಆಯ್ಕೆ ಸಿಗಲಿದೆ.

ಭಾರತದ ಮಾರುಕಟ್ಟೆಯಲ್ಲಿ ಬೆಲೆ.. Redmi Note 10 4GB RAM + 64GB ಸ್ಟೋರೆಜ್​ ಇರುವ ರೆಡ್​ಮಿ ನೋಟ್​ 10 ಬೆಲೆ ಭಾರತದಲ್ಲಿ 11,999 ರೂಪಾಯಿ. 6GB RAM + 128GB ಸ್ಟೋರೆಜ್​ ಮಾಡೆಲ್​ಗೆ 13,999 ರೂಪಾಯಿ. ಅಕ್ವಾ ಹಸಿರು, ಫ್ರಾಸ್ಟ್ ವೈಟ್ ಮತ್ತು ಶ್ಯಾಡೋ ಕಪ್ಪು ಬಣ್ಣದ ಆಯ್ಕೆ ಸಿಗಲಿದೆ. Redmi Note 10 Pro 6GB RAM + 64GB ಸ್ಟೋರೆಜ್​ 15,999 ರೂಪಾಯಿ. 6GB RAM + 128GB ಸ್ಟೋರೆಜ್​ 16,999. 8GB RAM + 128GB ಸ್ಟೋರೆಜ್​ 18,999 ರೂಪಾಯಿ ಇರಲಿದೆ. Redmi Note 10 Pro Max 6GB RAM + 64GB ಸ್ಟೋರೆಜ್​ 18,999 ರೂಪಾಯಿ. 6GB RAM + 128GB ಸ್ಟೋರೆಜ್​ 19,999 ರೂಪಾಯಿ. 8GB RAM + 128GB ಸ್ಟೋರೆಜ್​ 21,999 ರೂಪಾಯಿ.

ಎಲ್ಲೆಲ್ಲಿ ಲಭ್ಯ? ರೆಡ್​ಮಿ ಸೀರಿಸ್​ ಮೊಬೈಲ್​ಗಳು ಅಮೆಜಾನ್​, ಎಂಐ.ಕಾಮ್​, ಎಂಐ ಹೋಮ್​ ಸ್ಟೋರ್ಸ್​ ಮತ್ತು ಕೆಲ ಮೊಬೈಲ್​ ಅಂಗಡಿಗಳಲ್ಲಿ ಲಭ್ಯವಿದೆ. ಮಾರ್ಚ್​ 16ರಿಂದ ರೆಡ್​ಮಿ ನೋಟ್​ 10, ಮಾರ್ಚ್​ 17ರಿಂದ ರೆಡ್​​ಮಿ ನೋಟ್​ 10 ಪ್ರೋ ಹಾಗೂ ಮಾರ್ಚ್​​ 18ರಿಂದ ರೆಡ್​ಮಿ ನೋಟ್​ 10 ಪ್ರೋ ಮ್ಯಾಕ್ಸ್​ ಲಭ್ಯವಿದೆ.

ಭಾರೀ ಡಿಸ್ಕೌಂಟ್​.. ಆನ್​ಲೈನ್​ಲ್ಲಿ ಮೊಬೈಲ್​ ಖರೀದಿ ಮಾಡಿದರೆ ನಿಮಗೆ ಡಿಸ್ಕೌಂಟ್​ ಸಿಗಲಿದೆ. ಐಸಿಐಸಿಐ ಕ್ರೆಡಿಟ್​ ಕಾರ್ಡ್​ ಮೂಲಕ ಮೊಬೈಲ್​ ಖರೀದಿಸಿದರೆ ಗರಿಷ್ಠ 1,500 ರೂಪಾಯಿವರೆಗೆ ಡಿಸ್ಕೌಂಟ್​ ಸಿಗಲಿದೆ.

ಇದನ್ನೂ ಓದಿ: 10 ಸಾವಿರ ರೂಪಾಯಿ ಒಳಗೆ ಸಿಗೋ ಅತ್ಯುತ್ತಮ ಮೊಬೈಲ್​​ಗಳು ಯಾವುವು? ಇಲ್ಲಿದೆ ಮಾಹಿತಿ

Published On - 4:39 pm, Thu, 4 March 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ