ವಾಸ ಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ; ಟಾಪ್​ 10ರಲ್ಲಿ ದೆಹಲಿ ಹೆಸರಿಲ್ಲ

ಬೆಂಗಳೂರು: ನಗರಾಭಿವೃದ್ಧಿ ಸಚಿವಾಲಯ ಸಿದ್ಧಪಡಿಸಿದ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EOLI) ಅಂದರೆ, ದೇಶದಲ್ಲಿ ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಸಾಲಿನಲ್ಲಿ ಬೆಂಗಳೂರು ಮೊದಲನೇ ಸ್ಥಾನ ಪಡೆದಿದೆ.

ವಾಸ ಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ; ಟಾಪ್​ 10ರಲ್ಲಿ ದೆಹಲಿ ಹೆಸರಿಲ್ಲ
ಬೆಂಗಳೂರು ವಿಧಾನಸೌದ
Follow us
ಪೃಥ್ವಿಶಂಕರ
|

Updated on:Mar 04, 2021 | 4:15 PM

ಬೆಂಗಳೂರು: ನಗರಾಭಿವೃದ್ಧಿ ಸಚಿವಾಲಯ ಸಿದ್ಧಪಡಿಸಿದ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EOLI) ಅಂದರೆ, ದೇಶದಲ್ಲಿ ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಸಾಲಿನಲ್ಲಿ ಬೆಂಗಳೂರು ಮೊದಲನೇ ಸ್ಥಾನ ಪಡೆದಿದೆ. ಪುಣೆ, ಅಹಮದಾಬಾದ್‌ ನಗರಗಳೂ ಸಹ ಈ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇಒಎಲ್ಐ 2020 ರ ಈ ಶ್ರೇಯಾಂಕಗಳನ್ನು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳು ಮತ್ತು 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳು ಎಂಬ ಎರಡು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ.

2020ರಲ್ಲಿ 111 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ, ಬೆಂಗಳೂರು ವಾಸಿಸಲು ಉತ್ತಮವಾದ ನಗರವೆಂದು ಸಮೀಕ್ಷೆ ಹೇಳಿದೆ. ಅದರ ನಂತರ ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವೀ ಮುಂಬೈ, ಕೊಯಮತ್ತೂರು, ವಡೋದರಾ, ಇಂದೋರ್ ಮತ್ತು ಗ್ರೇಟರ್ ಮುಂಬೈ ನಗರಗಳಿವೆ. ಹಾಗೆಯೇ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಶಿಮ್ಲಾ ಅತ್ಯುತ್ತಮ ನಗರವಾಗಿದೆ. ಅದರ ನಂತರ ಭುವನೇಶ್ವರ, ಸಿಲ್ವಾಸ್ಸ, ಕಾಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ, ಗುರುಗ್ರಾಮ್, ದಾವಣಗೆರೆ ಮತ್ತು ತಿರುಚಿರಾಪಳ್ಳಿ ನಗರಗಳಿವೆ.

ನಗರಾಡಳಿತ ಸಂಸ್ಥೆಗಳ ಕಾರ್ಯಕ್ಷಮತೆ ಸಮೀಕ್ಷೆ ಈಸ್ ಆಫ್ ಲಿವಿಂಗ್ 2020ರ ಅಡಿಯಲ್ಲಿ ನಗರಾಡಳಿತ ಸಂಸ್ಥೆಗಳ ಕಾರ್ಯಕ್ಷಮತೆಯ ಪಟ್ಟಿಯನ್ನು ಎರಡು ಭಾಗಗಳಾಗಿ ಮಾಡಲಾಗಿದೆ. ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಮತ್ತು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಾಡಳಿತ ಸಂಸ್ಥೆಗಳಿಗೆ ಪ್ರತ್ಯೇಕ ಷರತ್ತುಗಳ ಅನ್ವಯ ಪರಿಶೀಲಿಸಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಭಾಗದಲ್ಲಿ ಇಂದೋರ್ ಪ್ರಥಮ ಸ್ಥಾನದಲ್ಲಿದೆ. ಸೂರತ್ ಮತ್ತು ಭೋಪಾಲ್ ನಂತರದ ಸ್ಥಾನದಲ್ಲಿವೆ. 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ವಿಭಾಗದಲ್ಲಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ತಿರುಪತಿ ಮತ್ತು ಗಾಂಧಿನಗರ ಪಾಲಾಗಿದೆ.

ಅಗ್ರ 10 ನಗರಗಳಲ್ಲಿ ದೆಹಲಿ ಇಲ್ಲ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಈ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ದೇಶದ ರಾಜಧಾನಿಯಾದ ದೆಹಲಿಗೆ ಈ ಎರಡು ವಿಭಾಗಗಳಲ್ಲಿ ಟಾಪ್​ 10 ರೊಳಗೆ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ರಾಷ್ಟ್ರರಾಜಧಾನಿ ದೆಹಲಿ 13 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರ್‍ಯಾಂಕಿಂಗ್ ಕ್ರಮ ಆರಂಭವಾಗಿದ್ದು 2018ರಲ್ಲಿ ನಗರಗಳಿಗೆ ರ್‍ಯಾಂಕಿಂಗ್​ ನೀಡುವ ಪದ್ಧತಿಯನ್ನು 2018ರಲ್ಲಿ ಪ್ರಾರಂಭಿಸಲಾಯಿತು. ಈ ರ್‍ಯಾಂಕಿಂಗ್​ ನೀಡುವ ಪದ್ಧತಿಯಲ್ಲಿ ಮುಖ್ಯವಾಗಿ ಮೂರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಮೊದಲನೇ ಅಂಶ ಜೀವನಮಟ್ಟ, ಇದಕ್ಕಾಗಿ 35 ಪ್ರತಿಶತ ಅಂಕಗಳನ್ನು ಇರಿಸಲಾಗಿದೆ. ಎರಡನೇ ಅಂಶ ಆರ್ಥಿಕ ಅರ್ಹತೆ ಅದಕ್ಕೆ 15 ಶೇಕಡಾ ಅಂಕಗಳು ಮತ್ತು ಅಭಿವೃದ್ಧಿಯ ಸ್ಥಿರತೆ ಹೇಗೆ ಎಂಬುದಕ್ಕೆ 20 ಶೇಕಡಾ ಅಂಕಗಳನ್ನು ಮೀಸಿಲಿರಿಸಲಾಗಿದೆ. ಉಳಿದ 30 ಪ್ರತಿಶತ ಅಂಕವನ್ನು ಜನರ ಸಮೀಕ್ಷೆಯ ಮೂಲಕ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: ಪರೀಕ್ಷೆಯ ಸನಿಹದಲ್ಲಿರುವ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಈ ಆಹಾರ ಪದ್ಧತಿ ಮತ್ತು ಜೀವನಶೈಲಿ ಸಹಕಾರಿ

Published On - 4:14 pm, Thu, 4 March 21

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ