10 ಸಾವಿರ ರೂಪಾಯಿ ಒಳಗೆ ಸಿಗೋ ಅತ್ಯುತ್ತಮ ಮೊಬೈಲ್​​ಗಳು ಯಾವುವು? ಇಲ್ಲಿದೆ ಮಾಹಿತಿ

Best smartphones Under 10,000: ಇತ್ತೀಚೆಗೆ ಆ್ಯಂಡ್ರಾಯ್ಡ್​ ಬಳಕೆ ಹೆಚ್ಚುತ್ತಿದೆ. 10 ಸಾವಿರ ರೂಪಾಯಿ ಒಳಗೆ ಸಾಕಷ್ಟು ಮೊಬೈಲ್​ಗಳು ಸಿಗುತ್ತವೆ. ಹಾಗಾದರೆ, ಈ ರಿತಿ ಸಿಗುವ ಅತ್ಯುತ್ತಮ ಮೊಬೈಲ್​ಗಳು ಯಾವವು? ಆ ಬಗ್ಗೆ ಇಲ್ಲಿದೆ ಮಾಹಿತಿ.

10 ಸಾವಿರ ರೂಪಾಯಿ ಒಳಗೆ ಸಿಗೋ ಅತ್ಯುತ್ತಮ ಮೊಬೈಲ್​​ಗಳು ಯಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಸಾಧು ಶ್ರೀನಾಥ್​

Updated on: Feb 04, 2021 | 3:29 PM

ಆ್ಯಂಡ್ರಾಯ್ಡ್​ ಮೊಬೈಲ್​ಗಳ ಬೆಲೆ ದಿನ ಕಳೆದಂತೆ ಕಡಿಮೆ ಆಗುತ್ತಲೇ ಇದೆ. ಅಧಿಕ ಫೀಚರ್​ ಇರುವ ಮೊಬೈಲ್​ಗಳು ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಹೀಗಾಗಿಯೇ ಇತ್ತೀಚೆಗೆ ಆ್ಯಪಲ್​ಗಿಂತ ಆ್ಯಂಡ್ರಾಯ್ಡ್​ ಮೊಬೈಲ್​ಗೆ ಬೇಡಿಕೆ ಹೆಚ್ಚು. ಕೆಲವರು 10 ಸಾವಿರ ರೂಪಾಯಿ ಒಳಗೆ ಸಿಗುವ ಮೊಬೈಲ್​ ಕೊಂಡುಕೊಳ್ಳಲು ಆದ್ಯತೆ ನೀಡುತ್ತಾರೆ. ಆದರೆ, ಯಾವ ಮೊಬೈಲ್​ ಉತ್ತಮ ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರ ಇರುವುದಿಲ್ಲ. ಹಾಗಾದರೆ, 10 ಸಾವಿರ ರೂಪಾಯಿ ಒಳಗೆ ಸಿಗುವ ಅತ್ಯುತ್ತಮ ಮೊಬೈಲ್​ಗಳು ಯಾವುವು? ಆ ಬಗ್ಗೆ ಇಲ್ಲಿದೆ ಮಾಹಿತಿ.

Poco M2

10 ಸಾವಿರ ರೂಪಾಯಿ ಒಳಗೆ ಸಿಗುತ್ತಿರುವ ಅತ್ಯುತ್ತಮ ಮೊಬೈಲ್​ಗಳ ಪೈಕಿ Poco M2 ಕೂಡ ಒಂದು. ಈ ಮೊಬೈಲ್​ ಬೆಲೆ 9,999 ರೂಪಾಯಿ. 6.53 ಇಂಚಿನ ಡಿಸ್​ಪ್ಲೇ, ಎಫ್​ಎಚ್​ಡಿ+ಐಪಿಎಸ್​ ಎಲ್​ಸಿಡಿ ಸ್ಕ್ರೀನ್​ ಈ ಮೊಬೈಲ್​ಗೆ ಇದೆ. 6 ಜಿಬಿ RAM ಮತ್ತು 64 ಜಿಬಿ ಸ್ಟೋರೆಜ್​ ಈ ಮೊಬೈಲ್​ನಲ್ಲಿದೆ. 128 ಜಿಬಿ ಸ್ಟೋರೆಜ್​ ಬೇಕಾದರೆ, ನೀವು ಒಂದು ಸಾವಿರ ರೂಪಾಯಿ ಹೆಚ್ಚು ಪಾವತಿಸಬೇಕು.

ಇನ್ನು, ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಮುಖ್ಯ ಕ್ಯಾಮೆರಾ 13ಎಂಪಿ ಇದೆ. ಫ್ರಂಟ್​ ಕ್ಯಾಮೆರಾ 8ಎಂಪಿ ಇದೆ. ಹೀಗಾಗಿ ಉತ್ತಮ ಫೋಟೋಗಳನ್ನು ನೀವು ಇದರಲ್ಲಿ ನಿರೀಕ್ಷಿಸಬಹುದು. 5,000 Gadಎಂಎಎಚ್​ ಬ್ಯಾಟರಿ ಇದರಲ್ಲಿ ಲಭ್ಯವಿದೆ.

Realme Narzo 20A ರಿಯಲ್​ ಮಿ Narzo 20A ಉತ್ತಮ ಬಜೆಟ್​ ಫೋನ್​. ಗೇಮ್​ ಆಡಲು ಈ ಮೊಬೈಲ್​ ಹೇಳಿ ಮಾಡಿಸಿದಂತಿದೆ. ಈ ಮೊಬೈಲ್​ನ ಬೆಲೆ ಕೇವಲ 8,499 ರೂಪಾಯಿ. ಈ ಮೊಬೈಲ್​ 6.5 ಇಂಚಿನ ಎಚ್​​ಡಿ ಡಿಸ್​ಪ್ಲೇ ಹೊಂದಿದೆ. 3/4 RAM ಎರಡರಲ್ಲೂ ಮೊಬೈಲ್​ ಲಭ್ಯವಿದೆ. 3GB/32GB ಮೊಬೈಲ್​ಗೆ 8,499 ರೂಪಾಯಿ ಹಾಗೂ 4GB/64GBಗೆ 9,499 ರೂಪಾಯಿ.

Narzo 20A ಉತ್ತಮ ಕ್ಯಾಮೆರಾ ಹೊಂದಿದೆ. ಮುಖ್ಯ ಕ್ಯಾಮೆರಾ 12ಎಂಪಿ ಇದ್ದರೆ, ಫ್ರಂಟ್​ ಕ್ಯಾಮೆರಾ 8ಎಂಪಿ ಇದೆ. ವಿಶೇಷ ಎಂದರೆ ಈ ಮೊಬೈಲ್​ ಮೂಲಕ ನೀವು 4ಕೆ ವಿಡಿಯೋವನ್ನು ಶೂಟ್​ ಮಾಡಬಹುದು.

Samsung Galaxy M02s ಸ್ಯಾಮ್​ಸಂಗ್​ ಮೊಬೈಲ್​ನಲ್ಲಿ ಸಿಗುತ್ತಿರುವ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್​ಗಳ ಸಾಲಿನಲ್ಲಿ Galaxy M02s ಕೂಡ ಒಂದು. 3GB/32GB ಪಿಚರ್​ ಇರುವ ಮೊಬೈಲ್​ಗೆ 8,999 ರೂಪಾಯಿ ಇದ್ದರೆ, 4GB/64GB ಫೀಚರ್​ ಇರುವ ಮೊಬೈಲ್​ಗೆ 9,999 ರೂಪಾಯಿ. 6.5 ಇಂಚಿನ ಎಚ್​ಡಿ+ಪಿಎಲ್​ಎಸ್​ ಐಪಿಎಸ್​ ಸ್ಕ್ರೀನ್​ಅನ್ನು ಇದು ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ 13ಎಂಪಿ ಪ್ರೈಮರಿ ಕ್ಯಾಮೆರಾ ಜತೆಗೆ 2ಎಂಪಿ ಮ್ಯಾಕ್ರೋ ಸೆನ್ಸಾರ್​ ಮತ್ತು ಎಂಪಿ ಆಳ ಸೆನ್ಸಾರ್​ ಇದಕ್ಕಿದೆ. 5 ಎಂಪಿ ಫ್ರಂಟ್​ ಕ್ಯಾಮೆರಾ ಇದಕ್ಕಿದೆ. 5000ಎಂಎಎಚ್​ ಬ್ಯಾಟರಿ ಇದಕ್ಕಿದೆ.

ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ