ಚೀನಾ ಆಪ್ ಮೂಲಕ ಸಾರ್ವಜನಿಕರಿಗೆ ವಂಚನೆ ಪ್ರಕರಣ; 76.67 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

ಸಾಲ ಮರುಪಾವತಿಸದವರಿಗೆ ರಿಕವರಿ ಏಜೆಂಟ್​ಗಳು ಕಿರುಕುಳ ನೀಡುತ್ತಿದ್ದರು. ಬಡ್ಡಿ, ಚಕ್ರ ಬಡ್ಡಿ, ಸರ್ವಿಸ್ ಚಾರ್ಜ್​ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರು.

ಚೀನಾ ಆಪ್ ಮೂಲಕ ಸಾರ್ವಜನಿಕರಿಗೆ ವಂಚನೆ ಪ್ರಕರಣ; 76.67 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ
Updated By: ganapathi bhat

Updated on: Aug 23, 2021 | 12:35 PM

ಬೆಂಗಳೂರು: ಚೀನಾ ಌಪ್ ಮೂಲಕ ಸಾರ್ವಜನಿಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆನ್​ಲೈನ್​ ಲೋನ್​ ಌಪ್ ಕಂಪನಿಗಳ ಆಸ್ತಿ ಪಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ. 76.67 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಸಿಐಡಿಯಲ್ಲಿ ದಾಖಲಾಗಿದ್ದ ಪ್ರಕರಣದ ಆಧಾರದಲ್ಲಿ ಇಡಿ ತನಿಖೆ ನಡೆಸಿತ್ತು. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿತ್ತು.

ಸಾಲ ಮರುಪಾವತಿಸದವರಿಗೆ ರಿಕವರಿ ಏಜೆಂಟ್​ಗಳು ಕಿರುಕುಳ ನೀಡುತ್ತಿದ್ದರು. ಬಡ್ಡಿ, ಚಕ್ರ ಬಡ್ಡಿ, ಸರ್ವಿಸ್ ಚಾರ್ಜ್​ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರು. ಕಂಪನಿಗಳು ಲೋನ್ ಪಡೆದವರನ್ನು ಸುಲಿಗೆ ಮಾಡುತ್ತಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ತನಿಖೆ ನಡೆಸಿದ್ದರು.

ಸಾಲ ಪಡೆದವರ ಮೊಬೈಲ್​ ನಂಬರ್, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದ ಕಂಪನಿ, ಆರ್​ಬಿಐ ನಿಯಮವನ್ನು ಉಲ್ಲಂಘಿಸಿ ಭಾರತದಲ್ಲಿ ವ್ಯವಹಾರ ನಡೆಸುತ್ತಿತ್ತು. ಮಧ್ಯಮ ವರ್ಗದವರಿಗೆ ಕಡಿಮೆ ಅವಧಿಯಲ್ಲಿ ಸಾಲಸೌಲಭ್ಯ ನೀಡುತ್ತೇವೆ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದವು.

ತುರ್ತು ಸಾಲ ನೀಡುವ ಆಪ್​ಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ
ತುರ್ತು ಸಾಲ ನೀಡುವ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಕನ್ನ ಹಾಕುವುದಲ್ಲದೇ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದ ಇನ್​ಸ್ಟಂಟ್​ ಲೋನ್​ ಆ್ಯಪ್​ಗಳ ವಿರುದ್ಧ ಜಾರಿ ನಿರ್ದೇಶನಾಲಯ ಕಾನೂನಾತ್ಮಕವಾಗಿ ದೂರು ದಾಖಲಿಸಿಕೊಂಡಿತ್ತು. ತೆಲಂಗಾಣ ಪೊಲೀಸರು ಮತ್ತು ಸೈಬರ್​ ವಿಭಾಗದವರು ಇದುವರೆಗೆ ಗುರುತಿಸಿದ್ದ ಆ್ಯಪ್​ಗಳ ವಿರುದ್ಧ ಮತ್ತು ಅದನ್ನು ನಿರ್ವಹಿಸುತ್ತಿದ್ದ ಚೀನಾ ಮೂಲದ ವ್ಯಕ್ತಿಗಳು ಹಾಗೂ ಅದಕ್ಕೆ ಸಹಕಾರ ನೀಡುತ್ತಿದ್ದವರ ಮೇಲೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾನೂನಿನಡಿ ದೂರು ದಾಖಲಿಸಿಕೊಂಡಿತ್ತು.

ಈ ಕುರಿತು ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು, ಕಾನೂನಿನ ಕಣ್ತಪ್ಪಿಸಿ ಅಕ್ರಮವಾಗಿ ಸಾಲ ನೀಡುತ್ತಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಹೈದರಾಬಾದ್​ ಪೊಲೀಸರು ದಾಖಲಿಸಿರುವ 27 ಎಫ್​ಐಆರ್​ಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಇನ್​ಸ್ಟಂಟ್​ ಲೋನ್​ ಆ್ಯಪ್​ಗಳ ವಿರುದ್ಧ ಕೊನೆಗೂ ತನಿಖೆಗೆ ಇಳಿದ ಜಾರಿ ನಿರ್ದೇಶನಾಲಯ

Published On - 10:40 pm, Tue, 11 May 21