ತ್ರಿವೇಣಿ ಸಂಗಮದಲ್ಲಿ ಸಂಕ್ರಾಂತಿ ಪುಣ್ಯ ಸ್ನಾನ ರದ್ದು.. ಆದ್ರೆ ದೇವಸ್ಥಾನಕ್ಕೆ ಹೋಗಬಹುದು

|

Updated on: Jan 13, 2021 | 1:35 PM

ಕೂಡಲಸಂಗಮ ಸುಕ್ಷೇತ್ರದಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ತ್ರಿವೇಣಿ ಸಂಗಮವಾಗುತ್ತೆ. ಇಲ್ಲಿ ಪ್ರತಿ ವರ್ಷ ಸಂಕ್ರಾಂತಿಯಂದು ಒಂದು ಲಕ್ಷಕ್ಕೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡ್ತಿದ್ರು. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಕ್ತರು ನೀರಿಗೆ ಇಳಿಯದಂತೆ ನದಿದಡದಲ್ಲಿ ತಗಡಿನ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ತ್ರಿವೇಣಿ ಸಂಗಮದಲ್ಲಿ ಸಂಕ್ರಾಂತಿ ಪುಣ್ಯ ಸ್ನಾನ ರದ್ದು.. ಆದ್ರೆ ದೇವಸ್ಥಾನಕ್ಕೆ ಹೋಗಬಹುದು
ಕೂಡಲಸಂಗಮ
Follow us on

ಬಾಗಲಕೋಟೆ: ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿರುವ ತ್ರಿವೇಣಿ ಸಂಗಮದಲ್ಲಿ ಸಂಕ್ರಾಂತಿ ಪುಣ್ಯ ಸ್ನಾನ ರದ್ದು ಮಾಡಲಾಗಿದೆ. ಜಿಲ್ಲೆಯ ಹುನಗುಂದ ತಾಲೂಕು ವ್ಯಾಪ್ತಿ

ಅಣ್ಣ ಬಸವಣ್ಣನ ಐಕ್ಯ ಸ್ಥಳ, ಪ್ರಸಿದ್ಧ ಸಂಗಮೇಶ್ವರ ದೇವಸ್ಥಾನ ಇರುವ ಕೂಡಲಸಂಗಮ ಸುಕ್ಷೇತ್ರದಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ತ್ರಿವೇಣಿ ಸಂಗಮವಾಗುತ್ತೆ. ಇಲ್ಲಿ ಪ್ರತಿ ವರ್ಷ ಸಂಕ್ರಾಂತಿಯಂದು ಒಂದು ಲಕ್ಷಕ್ಕೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡ್ತಿದ್ರು.

ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಕ್ತರು ನೀರಿಗೆ ಇಳಿಯದಂತೆ ನದಿದಡದಲ್ಲಿ ತಗಡಿನ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಸ್ಥಳದಲ್ಲಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಖುಷಿಯ ವಿಚಾರ ಅಂದ್ರೆ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕಟ್ಟುನಿಟ್ಟಿನ ಕೊರೊನಾ ನಿಯಮಗಳನ್ನು ಅನುಸರಿಸಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತೆ.

ಆಷಾಢ ಏಕಾದಶಿ ಪುಣ್ಯಸ್ನಾನ: ಗೋದಾವರಿ ನದಿಗಿಳಿದ ನಾಲ್ವರು ಯುವಕರು ಕೊಚ್ಚಿಹೋದರು

Published On - 1:34 pm, Wed, 13 January 21