ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಹಂದಿ ಮಾಂಸ ತಿಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸುವುದಕ್ಕೆ ಇವರು ಯಾರು? ಯಡಿಯೂರಪ್ಪಗೆ ಇದರ ಬಗ್ಗೆ ಗೊತ್ತಿಲ್ಲ ಅಂತಾ ಹೇಳ್ತಿನಿ ಕೇಳಿ. I am making it very clear ನಾನು ಈವರೆಗೆ ಗೋಮಾಂಸ ತಿಂದಿಲ್ಲ, ನಾನು ಹಂದಿ ಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನ್ನಿಸಿದರೆ ಖಂಡಿತಾ ತಿಂತೀನಿ.

ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಹಂದಿ ಮಾಂಸ ತಿಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on:Jan 13, 2021 | 2:21 PM

ಮೈಸೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನವನ್ನು ವಿರೋಧಿಸುತ್ತ ಬಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮತ್ತೆ ಅದೇ ವಿಚಾರವನ್ನಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸುವುದಕ್ಕೆ ಇವರು ಯಾರು? ಇಲ್ಲಿಯವರೆಗೆ ನಾನು‌ ಗೋಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನಿಸಿದ್ರೆ ತಿಂತೀನಿ. ಅದನ್ನ ಕೇಳೋಕೆ ಇವರು ಯಾರು? ಎಂದು ಗೋಮಾಂಸ ಸೇವನೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಬಿಜೆಪಿಗೆ ಕುಟುಕಿದ್ದಾರೆ.

ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸುವುದಕ್ಕೆ ಇವರು ಯಾರು? ಯಡಿಯೂರಪ್ಪಗೆ ಇದರ ಬಗ್ಗೆ ಗೊತ್ತಿಲ್ಲ ಅಂತಾ ಹೇಳ್ತಿನಿ ಕೇಳಿ. I am making it very clear ನಾನು ಈವರೆಗೆ ಗೋಮಾಂಸ ತಿಂದಿಲ್ಲ, ನಾನು ಹಂದಿ ಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನ್ನಿಸಿದರೆ ಖಂಡಿತಾ ತಿಂತೀನಿ.

ನಾನು ತಿಂದಿರುವುದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ. ಯಡಿಯೂರಪ್ಪ ಗೋಮಾಂಸ ತಿನ್ನುವುದೇ ಸಾಧನೆ ಅಂತ ಹೇಳಿದ್ದಾನೆ. ಆದರೆ ನಾನೇನು ಅವನ ಥರ ಸೊಪ್ಪು ತಿನ್ನಲೇ? ನಾನು ಸೋಪ್ಪು ಬೇಕು ಅಂದರೆ ಸೋಪ್ಪು ತಿಂತೀನಿ, ಮಾಂಸ ಬೇಕು ಅಂದ್ರೆ ಮಾಂಸ ತಿಂತೀನಿ. ನಾನೇನಾದ್ರು ನಿಂಗೆ ಹೇಳಿದ್ದೀನಾ ಮಾಂಸ ತಿನ್ನು ಅಂತಾ? ಮತ್ತೆ ಸುಮ್ಮನೆ ತಿನ್ನುವವರಿಗೆ ಯಾಕೆ ಪ್ರಶ್ನೆ ಮಾಡ್ತೀಯಾ? ಎಂದು ಬಿಎಸ್‌ವೈಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಜಗತ್ತಿನಲ್ಲಿ ಮಾಂಸಹಾರಿಗಳೆ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ‌ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ ? ಅಮೇರಿಕಾದಲ್ಲಿ ಇರುವವರು ಗೋಮಾಂಸ ತಿಂತಾರೆ ಅವರೆಲ್ಲಾ ಪ್ರಾಣಿಗಳಾ? ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋರು ದನ ತಿಂತಾರೆ. ಹಾಗಾದ್ರೆ ಅವರೇಲ್ಲ ಪ್ರಾಣಿಗಳಾ? ನಿಮಗೆ ಸೋಪ್ಪು ಇಷ್ಟ ಇದ್ದರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನುವುದಕ್ಕೆ ಬಿಡಿ. ಎಂದು ಮೈಸೂರಿನಲ್ಲಿ ಬಿಎಸ್‌ವೈ ವಿರುದ್ದ ಏಕವಚನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಭಾರತದಲ್ಲಿ ತಿಂದರಷ್ಟೇ ಗೋವು ಮಾತೆಯೇ? ವಿದೇಶಗಳಿಗೆ ರಫ್ತಾಗುತ್ತಿರುವ ಗೋವುಗಳು ಮಾತೆಯಲ್ಲವೇ?’

Published On - 1:59 pm, Wed, 13 January 21