ವೆಲ್ಡಿಂಗ್ ವೇಳೆ ಎಥೆನಾಲ್ ಟ್ಯಾಂಕರ್ ಸ್ಫೋಟ, ಇಬ್ಬರ ದುರ್ಮರಣ

|

Updated on: Dec 21, 2019 | 2:16 PM

ವಿಜಯಪುರ: ನಾಡಗೌಡ ರೋಡಲೈನ್ಸ್​ನಲ್ಲಿ ವೆಲ್ಡಿಂಗ್ ಮಾಡುವ ವೇಳೆ ಎಥಿನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಮೃತಪಟ್ಟಿದ್ದಾರೆ. ರಾಜೂ ಹಾಗೂ ಪ್ರಕಾಶ ಟೋನಿ ಮೃತ ಕಾರ್ಮಿಕರು. ರೈಲ್ವೆ ನಿಲ್ದಾಣ ಬಳಿಯ ನಾಡಗೌಡ ರೋಡ್​ಲೈನ್ಸ್​ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಥಿನಾಲ್ ಖಾಲಿ‌ ಮಾಡಿದ ಬಳಿಕ ಗ್ಯಾರೇಜ್​ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕಾರ್ಮಿಕರು ಮೃತಪಟ್ಟಿದ್ದಾರೆ. ಭಾರೀ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಗೋಳಗುಮ್ಮಟ‌ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ವೆಲ್ಡಿಂಗ್ ವೇಳೆ ಎಥೆನಾಲ್ ಟ್ಯಾಂಕರ್ ಸ್ಫೋಟ, ಇಬ್ಬರ ದುರ್ಮರಣ
Follow us on

ವಿಜಯಪುರ: ನಾಡಗೌಡ ರೋಡಲೈನ್ಸ್​ನಲ್ಲಿ ವೆಲ್ಡಿಂಗ್ ಮಾಡುವ ವೇಳೆ ಎಥಿನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಮೃತಪಟ್ಟಿದ್ದಾರೆ. ರಾಜೂ ಹಾಗೂ ಪ್ರಕಾಶ ಟೋನಿ ಮೃತ ಕಾರ್ಮಿಕರು.

ರೈಲ್ವೆ ನಿಲ್ದಾಣ ಬಳಿಯ ನಾಡಗೌಡ ರೋಡ್​ಲೈನ್ಸ್​ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಥಿನಾಲ್ ಖಾಲಿ‌ ಮಾಡಿದ ಬಳಿಕ ಗ್ಯಾರೇಜ್​ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕಾರ್ಮಿಕರು ಮೃತಪಟ್ಟಿದ್ದಾರೆ. ಭಾರೀ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಗೋಳಗುಮ್ಮಟ‌ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.