Textbook Row: ರೋಹಿತ್ ಚಕ್ರತೀರ್ಥ ಅಧ್ಯಕ್ಷರಾಗಿರುವುದು ನೋವಿನ ಸಂಗತಿ ಎಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್; ಶಿಕ್ಷಣ ಸಚಿವ ಬಿಸಿ ನಾಗೇಶ್ ಕೊಟ್ಟ ಉತ್ತರ ಏನು?

Rohith Chakratheertha: ಯಾರು ನಾಡಗೀತೆ ಬಗ್ಗೆ ಒರಿಜಿನಲ್ ಬರೆದಿದ್ದರೋ ಅವರ ತನಿಖೆ ಮಾಡಿ ಕಂಡು ಹಿಡಿಯಿರಿ ಅಂತಾ ಸ್ವಾಮೀಜಿ ಹೇಳಿದ್ದಾರೆ. 2017 ರಲ್ಲಿಯೇ ಅಂದಿನ ಸರ್ಕಾರ ಇದನ್ನು ಕಂಡು ಹಿಡಿದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ!

Textbook Row: ರೋಹಿತ್ ಚಕ್ರತೀರ್ಥ ಅಧ್ಯಕ್ಷರಾಗಿರುವುದು ನೋವಿನ ಸಂಗತಿ ಎಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್; ಶಿಕ್ಷಣ ಸಚಿವ ಬಿಸಿ ನಾಗೇಶ್ ಕೊಟ್ಟ ಉತ್ತರ ಏನು?
ರೋಹಿತ್ ಚಕ್ರತೀರ್ಥ ಅಧ್ಯಕ್ಷರಾಗಿರುವುದು ನೋವಿನ ಸಂಗತಿ ಎಂದ ಮಾಜಿ ಸ್ಪೀಕರ್; ಶಿಕ್ಷಣ ಸಚಿವ ಬಿಸಿ ನಾಗೇಶ್ ಕೊಟ್ಟ ಉತ್ತರ ಏನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 31, 2022 | 5:45 PM

ಕೋಲಾರ, ಬೆಂಗಳೂರು: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಕುರಿತು ಮುಖ್ಯಮಂತ್ರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ (K R Ramesh Kumar, Ex speaker of Karnataka Legislative Assembly) ಪತ್ರ ಬರೆದಿದ್ದಾರೆ. ರೋಹಿತ್ ಚಕ್ರತೀರ್ಥರನ್ನು ಮರು ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು (Karnataka textbook revision committee chairman Rohit Chakratirtha) ನೋವಿನ ಸಂಗತಿ, ಮಹಾನ್ ಚೇತನ ಕುವೆಂಪು ಬಗ್ಗೆ ಅಗೌರವ ತೋರಿಸಿರುವ ಈ ವಿಕೃತರು ಸಮಿತಿಯ ಅಧ್ಯಕ್ಷರಾಗಿರುವುದು ಬೇಸರದ ವಿಷಯ, ಗಾಂಧೀಜಿಯನ್ನ ಬಲಿ‌ ಪಡೆದ ದೇಶ ಭಕ್ತರಿಗೆ ಸಹಜವಾಗಿಯೇ ಕೇಶವ್ ಬಲಿರಾಮ್ ಹೆಗ್ಗಡೆರವರು ಸ್ವತಂತ್ರ್ಯ ಹೋರಾಟಗಾರರಾಗಿ ಕಾಣಿಸುವುದು ತಪ್ಪೇನಿಲ್ಲ. ಪ್ರಾಥಮಿಕ ಹಂತದ ಪಠ್ಯಪುಸ್ತಕದಲ್ಲಿ ವಿಷ ಪ್ರಾಶನ ಮಾಡಲು ಹೊರಟಿದ್ದಾರೆ. ಚಕ್ರತೀರ್ಥರಿಗೆ, ಚಕ್ರವರ್ತಿಗಳಿಗೆ, ಪ್ರತಾಪ ಸಿಂಹ ಅವರಿಗೆ ಜಗತ್ತಿನ ಇತಿಹಾಸದ ಅರಿವು ಇದಿಯೋ ಇಲ್ಲವೋ ಗೊತ್ತಿಲ್ಲ, ಸಂವಿಧಾನದ ಆಶಯಗಳನ್ನ ಗೌರವಿಸುವ ದೃಷ್ಟಿಯಿಂದ ಮುಖ್ಯಮಂತ್ರಿಗಳು ಇತಿಶ್ರೀ ಹಾಡಬೇಕಿದೆ ಎಂದು ಇನ್ನೂ ಹಲವು ವಿಚಾರಗಳ ಕುರಿತು ಬೇಸರ ವ್ಯಕ್ತಪಡಿಸಿ ಸಿಎಂ ಬೊಮ್ಮಾಯಿ ಅವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ರ ಬರೆದಿದ್ದಾರೆ (Textbook Row).

ಇನ್ನು ಪಠ್ಯ ಪುಸ್ತಕ ಮರು ಪರಿಷ್ಕರಣೆ ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥರ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಗಳಿಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯವಾಗಿ ನಾಡಗೀತೆಗೆ ಅವಮಾನ ಮತ್ತು ರಾಷ್ಟ್ರಕವಿ ಕುವೆಂಪು ಅವರಿಗೆ ರೋಹಿತ್ ಚಕ್ರತೀರ್ಥ ಅವಮಾನ ಮಾಡಿದ್ದಾರೆ ಎಂಬ ವಿಷಯದ ಕುರಿತು ಸ್ಪಷ್ಟನೆ ನೀಡಿದರುವ ಸಚಿವ ಬಿಸಿ ನಾಗೇಶ್ ಅವರು 2017 ರ ಮೆಸೇಜ್ ಅನ್ನು ನಾಡಗೀತೆ ಬಗ್ಗೆ ಇಮಿಟೇಟ್ ಮಾಡಿ ಕೆಟ್ಟದಾಗಿ ಬರೆದಿದ್ದ ಮೆಸೇಜ್ ಪ್ರಕರಣ ಅದು. ಅದನ್ನು ಚಕ್ರತೀರ್ಥ ಫಾರ್ವರ್ಡ್ ಮಾಡಿದ್ದರು. ನಂತರ ಅದರ ವಿರುದ್ಧ ಆಗಿನ ಸರ್ಕಾರ ಕೇಸ್ ಬುಕ್ ಮಾಡಿತ್ತು. ಆ ಕೇಸ್ ತನಿಖೆ ಮಾಡಿದ ಪೊಲೀಸ್ ಅಧಿಕಾರಿ ಬಿ ರಿಪೋರ್ಟ್ ಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಅದು ನಾನು ಬರೆದದ್ದಲ್ಲ ಅಂತ ಚಕ್ರತೀರ್ಥ ಅಂದೇ ಪೊಲೀಸರಿಗೆ ಸ್ಪಷ್ಟನೆ‌ ಕೊಟ್ಟಿದ್ದಾರೆ. 2-3 ಸಾಲ ಪುನಃ ಪುನಃ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ಕೆಲವು ಜನ ಅವಮಾನಿಸಿದ್ದಾರೆ ಅಂತಾ ಚಕ್ರತೀರ್ಥ ಹೇಳಿದ್ದಾರೆ. ನಿನ್ನೆ ಭೇಟಿ ಮಾಡಿದಾಗ ಆದಿಚುಂಚನಗಿರಿ ಸ್ವಾಮೀಜಿಯವರಿಗೂ ಎಲ್ಲ ಮಾಹಿತಿ ತಿಳಿಸಿದ್ದೇನೆ. ಪಠ್ಯ ಪುಸ್ತಕ ಬಗ್ಗೆ ಯಾವುದೇ ಆಕ್ಷೇಪ ಇಲ್ಲ ಅಂತಾ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರೂ ಹೇಳಿದ್ದಾರೆ ಎಂದು ನಾಗೇಶ್ ತಿಳಿಸಿದ್ದಾರೆ.

ಇನ್ನು, ಯಾರು ನಾಡಗೀತೆ ಬಗ್ಗೆ ಒರಿಜಿನಲ್ ಬರೆದಿದ್ದರೋ ಅವರ ತನಿಖೆ ಮಾಡಿ ಕಂಡು ಹಿಡಿಯಿರಿ ಅಂತಾ ಸ್ವಾಮೀಜಿ ಹೇಳಿದ್ದಾರೆ. 2017 ರಲ್ಲಿಯೇ ಅಂದಿನ ಸರ್ಕಾರ ಇದನ್ನು ಕಂಡು ಹಿಡಿದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ! ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಈ ಬಗ್ಗೆ ಮಾತನಾಡಿದ್ದೀನಿ. ಯಾರು ನಾಡಗೀತೆಗೆ ಅವಮಾನ ಮಾಡಿದ್ದಾರೋ ಅವರ ವಿರುದ್ಧ ಕೇಸ್ ಬುಕ್ ಮಾಡಿ, ಕ್ರಮ ಕೈಗೊಳ್ಳಿ ಅಂತಾ ಮನವಿ ಮಾಡಿದ್ಧೇನೆ. 2017 ರಲ್ಲಿ ಅವರದೇ ಸರ್ಕಾರ ಇತ್ತು. ಫೇಸ್ ಬುಕ್ ಪೋಸ್ಟ್ ನ ಎಲ್ಲರೂ ಇಷ್ಟಪಟ್ಟೇ ಮಾಡ್ತಾರೆ ಅಂತಿಲ್ಲ. ನಾನು ಅವಹೇಳನಕಾರಿ ಪೋಸ್ಟ್ ಸಮರ್ಥನೆ ಮಾಡ್ತಿಲ್ಲ. ಅದು ತಪ್ಪು ಅಂತಲೇ ಹೇಳ್ತೀನಿ ಎಂದು ಸಚಿವ ನಾಗೇಶ್ ಹೇಳಿದ್ದಾರೆ.

ಬಸವಣ್ಣ ಪಠ್ಯ ವಿಚಾರದಲ್ಲಿ ಮತ್ತೆ ರಾಜಕೀಯ ಮುನ್ನೆಲೆಗೆ!

ಬಸವಣ್ಣ ಪಠ್ಯ ವಿಚಾರದಲ್ಲಿ ಮತ್ತೆ ರಾಜಕೀಯ ನಡೆಯುತ್ತಿದೆ. ಬಸವಣ್ಣನವರ ಪಠ್ಯಕ್ಕೆ ಅಪಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಮತ್ತು ಸಾಣೇಹಳ್ಳಿ ಶ್ರೀಗಳು ಆರೋಪಿಸಿದ್ದರು. ರೋಹಿತ್ ಚಕ್ರತೀರ್ಥ ಸಮಿತಿ ಬಸವಣ್ಣವರ ಪಠ್ಯ ಬದಲಾವಣೆ ಮಾಡಿದೆ ಎಂದು ಆರೋಪಿಸಲಾಗಿತ್ತು. ಆದರೆ ಅಸಲಿಗೆ ರೋಹಿತ್ ಚಕ್ರತೀರ್ಥ ಸಮಿತಿ ಬಸವಣ್ಣವರ ಪಠ್ಯ ಬದಲಾವಣೆ ಮಾಡಿಯೇ ಇಲ್ಲ. ಇದಕ್ಕೆ ಸಂಬಂಧಿಸಿದ ದಾಖಲಾತಿ ಲಭ್ಯವಿದೆ. ರೋಹಿತ್ ಚಕ್ರತೀರ್ಥ ಸಮಿತಿ ಹೊಸ ಪರಿಷ್ಕರಣೆ ಮಾಡಿಲ್ಲ. 2015-16 ರಲ್ಲಿ ಡಾ. ಮುಡಂಬಡಿತ್ತಾಯ ಸಮಿತಿ ಪಠ್ಯ ಪುಸ್ತಕ ರಚನೆ ಮಾಡಿತ್ತು. ಇದ್ರಲ್ಲಿ ಬಸವಣ್ಣರ ಕುರಿತು ಪಠ್ಯ ಸೇರ್ಪಡೆ ಮಾಡಲಾಗಿತ್ತು. ಬಳಿಕ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಸಮಯದಲ್ಲಿ ಹೊಸ ವಿಚಾರಗಳನ್ನ ಸೇರ್ಪಡೆ ಮಾಡಿದೆ. ಬರಗೂರು ಸಮಿತಿ ರಾಜಕೀಯ ವಿಚಾರಕ್ಕೆ ಬಸವಣ್ಣರ ಬಗ್ಗೆ ಹೊಸ ವಿಚಾರ ಸೇರಿಸಿತ್ತು. ಆದ್ರೆ ರೋಹಿತ್ ಚಕ್ರತೀರ್ಥ ಸಮಿತಿ ಡಾ. ಮುಡಂಬಡಿತ್ತಾಯ ಸಮಿತಿ ರಚನೆಯ ಪಠ್ಯವನ್ನೆ ಸಂಪೂರ್ಣವಾಗಿ ಉಳಿಸಿಕೊಂಡಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ ಹೊಸ ವಿಷಯಕ್ಕೆ ಕೊಕ್ ಕೊಟ್ಟು, ಹಳೆ ಪಠ್ಯವನ್ನೇ ಉಳಿಸಿಕೊಂಡಿದೆ. ಕಾಂಗ್ರೆಸ್ ಅವಧಿಯಲ್ಲಿ ಸೇರಿಸಲಾದ ಅಂಶಗಳನ್ನು ಮಾತ್ರ ಸಮಿತಿ ಕೈಬಿಟ್ಟಿದೆ. ಹಾಗಿದ್ದರೆ ಬಸವಣ್ಣರಿಗೆ ಅಪಮಾನ ಮಾಡಿದ್ದು ಯಾರು? ಬಸವಣ್ಣರ ವಿಚಾರದಲ್ಲೂ ರಾಜಕೀಯ ಮಾಡ್ತಿರೋದು ಯಾರು? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಇದನ್ನು ಓದಿ: ಶಿಮ್ಲಾದಿಂದ ಮರಳುತ್ತಿದ್ದಾಗ ದಾರಿ ಮಧ್ಯೆ ಕಾರು ನಿಲ್ಲಿಸಿ ಬಾಲಕಿ ಚಿತ್ರಿಸಿದ ಅಮ್ಮನ ಪೇಟಿಂಗ್ ಸ್ವೀಕರಿಸಿದ ಪ್ರಧಾನಿ ಮೋದಿ

ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ.ಕೆ ಶಿವಕುಮಾರಗೆ ಸಮನ್ಸ್ ನೀಡಿದ ನ್ಯಾಯಾಲಯ

Published On - 5:30 pm, Tue, 31 May 22