ಗಣಿಗಾರಿಕೆಗೆ ಸ್ಫೋಟ ಬಳಕೆ ನಿಯಂತ್ರಣ ಹೇರುವಲ್ಲಿ ನಿರ್ಲಕ್ಷ್ಯ.. ರಾಜ್ಯದ ಹಲವೆಡೆ ಅನುಮತಿ ಇಲ್ದೆ ಸ್ಫೋಟಕ ಬಳಕೆ

ರಾಜ್ಯಾದ್ಯಂತ 209 ಜನ ಗುತ್ತಿಗೆದಾರರಿಂದ ಅನುಮತಿ ಇಲ್ಲದೆ ಸ್ಫೋಟಕಗಳ ಬಳಕೆ ಮಾಡಲಾಗುತ್ತಿದೆ. 21,27,257 ಕಿಲೋ ಗ್ರಾಂನಷ್ಟು ಸ್ಫೋಟಕ ಬಳಸಿದ್ದು ಬಯಲಾಗಿದೆ. ಇಷ್ಟೊಂದ ಪ್ರಮಾಣದ ಸ್ಫೋಟಕಗಳನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಬಳಕೆ ಮಾಡಲಾಗಿದೆಯಂತೆ. ಕಳೆದ 2020ನೇ ಸಾಲಿನಲ್ಲೇ ಈ ಬಗ್ಗೆ ಸಿಎಜಿ ಸರ್ಕಾರಕ್ಕೆ ಎಚ್ಚರಿಸಿತ್ತು.

ಗಣಿಗಾರಿಕೆಗೆ ಸ್ಫೋಟ ಬಳಕೆ ನಿಯಂತ್ರಣ ಹೇರುವಲ್ಲಿ ನಿರ್ಲಕ್ಷ್ಯ.. ರಾಜ್ಯದ ಹಲವೆಡೆ ಅನುಮತಿ ಇಲ್ದೆ ಸ್ಫೋಟಕ ಬಳಕೆ
ಸಾಂದರ್ಭಿಕ ಚಿತ್ರ

Updated on: Jan 24, 2021 | 8:38 AM

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆಗೆ ಅಕ್ರಮವಾಗಿ ಸ್ಫೋಟಕ ಸಾಮಾಗ್ರಿಗಳ ಬಳಕೆ ಮಾಡಲಾಗುತ್ತಿದೆಯಂತೆ. ಜಿಲ್ಲಾಡಳಿತದ ಅನುಮತಿ ಪಡೆಯದೆ ಸ್ಫೋಟಕ ಬಳಸುತ್ತಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಗಣಿ ಇಲಾಖೆ ಮತ್ತು ಡಿಸಿ ಕಚೇರಿ ನಡುವೆ ಸಮನ್ವಯತೆ ಕೊರತೆ ಇದೆಯಾ ಎಂಬ ಪ್ರಶ್ನೆ ಎದ್ದಿದೆ.

ರಾಜ್ಯಾದ್ಯಂತ 209 ಜನ ಗುತ್ತಿಗೆದಾರರಿಂದ ಅನುಮತಿ ಇಲ್ಲದೆ ಸ್ಫೋಟಕಗಳ ಬಳಕೆ ಮಾಡಲಾಗುತ್ತಿದೆ. 21,27,257 ಕಿಲೋ ಗ್ರಾಂನಷ್ಟು ಸ್ಫೋಟಕ ಬಳಸಿದ್ದು ಬಯಲಾಗಿದೆ. ಇಷ್ಟೊಂದ ಪ್ರಮಾಣದ ಸ್ಫೋಟಕಗಳನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಬಳಕೆ ಮಾಡಲಾಗಿದೆಯಂತೆ. ಕಳೆದ 2020ನೇ ಸಾಲಿನಲ್ಲೇ ಈ ಬಗ್ಗೆ ಸಿಎಜಿ ಸರ್ಕಾರಕ್ಕೆ ಎಚ್ಚರಿಸಿತ್ತು.

‘ಸಿಎಜಿ’ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಸತ್ಯ ಬಯಲಾಗಿತ್ತು. ಆದ್ರೆ ಎಚ್ಚೆತ್ತುಕೊಳ್ಳದ ಸರ್ಕಾರ ಅಕ್ರಮ ಸ್ಫೋಟಕ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷ್ಯವಹಿಸಿದೆ. ಸರ್ಕಾರ ಎಚ್ಚೆತ್ತುಕೊಂಡಿದ್ರೆ ಶಿವಮೊಗ್ಗ ಸ್ಫೋಟವನ್ನು ತಪ್ಪಿಸಬಹುದಾಗಿತ್ತು. ಇಂದಿಗೂ ರಾಜ್ಯಾದ್ಯಂತ ಹಲವೆಡೆ ಅನುಮತಿ ಪಡೆಯದೇ ಕಲ್ಲು ಗಣಿಗಾರಿಕೆಗೆ ಸ್ಫೋಟಕ ಸಾಮಾಗ್ರಿಗಳನ್ನು ಬಳಸಲಾಗ್ತಿದೆ. ಈಗಲಾದ್ರು ಸರ್ಕಾರ ನಿದ್ದೆಯಿಂದ ಏಳದಿದ್ದರೆ ಇದೇ ರೀತಿ ಅವಘಡಗಳು ಮರುಕಳಿಸಬಹುದು.

Shivamogga Blast ಶಿವಮೊಗ್ಗದ ಹುಣಸೋಡಿಯಲ್ಲಿನ ವಿಸ್ಫೋಟಕ್ಕೆ ಇದು ಕಾರಣವಾಗಿರಬಹುದಾ?