ಫೇಸ್ಬುಕ್ ಹಣ ವಂಚನೆ; ಅಧಿಕಾರಿಯ ಮೆಸೇಜ್ ಎಂದು ತಲಾ 18 ಸಾವಿರ ಕಳೆದುಕೊಂಡ ವೈದ್ಯರು

| Updated By: ಆಯೇಷಾ ಬಾನು

Updated on: Jun 11, 2021 | 12:45 PM

ಕೋಲಾರ ಜಿಲ್ಲಾ ಔಷಧ ಗೋದಾಮು ನಿರ್ವಾಹಕ ಅಧಿಕಾರಿ ಶ್ರೀರಾಮ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಸೃಷ್ಟಿಸಿ ತುರ್ತಾಗಿ ಹಣ ಬೇಕೆಂದು ಮನವಿ ಮಾಡಿ ಕಿಡಿಗೇಡಿಗಳು ವಂಚಿಸಿದ್ದಾರೆ. ಡಾ.ರಾಕೇಶ್ ಮತ್ತು ಡಾ.ರೀನಾ ತಲಾ 18,000ರೂ. ವರ್ಗಾಯಿಸಿ ಕಿಡಿಗೇಡಿಗಳ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಂಡಿದ್ದಾರೆ. ಆನ್ಲೈನ್ ದೋಖಾಗೆ ಇಬ್ಬರು ವೈದ್ಯರು ಮೋಸ ಹೋಗಿದ್ದಾರೆ.

ಫೇಸ್ಬುಕ್ ಹಣ ವಂಚನೆ; ಅಧಿಕಾರಿಯ ಮೆಸೇಜ್ ಎಂದು ತಲಾ 18 ಸಾವಿರ ಕಳೆದುಕೊಂಡ ವೈದ್ಯರು
ಪ್ರಾತಿನಿಧಿಕ ಚಿತ್ರ
Follow us on

ಕೋಲಾರ: ನಕಲಿ ಫೇಸ್ಬುಕ್ ಅಕೌಂಟ್ ಸೃಷ್ಟಿಸಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ ನಡುವೆ ಇಬ್ಬರು ವೈದ್ಯರಿಗೆ ವಂಚನೆ ಮಾಡಲಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೈದ್ಯರಿಗೆ ನಂಬಿಸಿ ವಂಚಿಸಿದ್ದಾರೆ.

ಕೋಲಾರ ಜಿಲ್ಲಾ ಔಷಧ ಗೋದಾಮು ನಿರ್ವಾಹಕ ಅಧಿಕಾರಿ ಶ್ರೀರಾಮ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಸೃಷ್ಟಿಸಿ ತುರ್ತಾಗಿ ಹಣ ಬೇಕೆಂದು ಮನವಿ ಮಾಡಿ ಕಿಡಿಗೇಡಿಗಳು ವಂಚಿಸಿದ್ದಾರೆ. ಡಾ.ರಾಕೇಶ್ ಮತ್ತು ಡಾ.ರೀನಾ ತಲಾ 18,000ರೂ. ವರ್ಗಾಯಿಸಿ ಕಿಡಿಗೇಡಿಗಳ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಂಡಿದ್ದಾರೆ. ಆನ್ಲೈನ್ ದೋಖಾಗೆ ಇಬ್ಬರು ವೈದ್ಯರು ಮೋಸ ಹೋಗಿದ್ದಾರೆ.

ಇನ್ನು ಇದೇ ರೀತಿ ಫೇಸ್​ಬುಕ್ ಮೂಲಕ ಹಣ ವಂಚನೆ ಮಾಡುವ ಮಂದಿ ಹೆಚ್ಚಾಗಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಲಾಲಗದ್ದೆ ಹೆಸರಲ್ಲಿ ನಕಲಿ ಫೇಸ್ ಬುಕ್​ ಅಕೌಂಟ್ ಮಾಡಿ ಹಣ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿತ್ತು. ಜಿಲ್ಲಾಧಿಕಾರಿ ಅವರದೇ ನಕಲಿ ಅಕೌಂಟ್​ ಮಾಡಿ ಫೋನ್​ ಪೇ ಮೂಲಕ ಹಣ ಪಾವತಿಸಿ ಎಂಬ ಬೇಡಿಕೆ ಇಟ್ಟಿರುವ ಮಾಹಿತಿ ಸಿಕ್ಕಿತ್ತು.

ಆರೋಪಿಗಳು ಸಂಬಂಧಿಕರ ಅಕೌಂಟಿಗೆ ಹಣ ವರ್ಗಾಯಿಸುವಂತೆ ಮೆಸೇಜ್ ಮಾಡಿದ್ರು. ಅಧಿಕಾರಿಗಳನ್ನೇ ಟಾರ್ಗೆಟ್​ ಮಾಡಿ ಹಣ ವಸೂಲಿ ಮಾಡಲು ಮುಂದಾಗಿದ್ರು. ಇದೇ ರೀತಿ ಕೆಲ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ದೂರು ನೀಡಿದ್ದೇನೆ ಯಾರೂ ಹಣ ಕೊಡಬೇಡಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಫೇಸ್ ಬುಕ್ ಮೂಲಕ ವಿನಂತಿಸಿಕೊಂಡಿದ್ದಾರೆ.

ಈ ಮೊದಲು ಸಚಿವ ಸುರೇಶ್​ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದಿದ್ದರು

ಸಾರ್ವಜನಿಕರ ಹೆಸರಲ್ಲಿ ಫೇಸ್​ಬುಕ್​​ ನಕಲಿ ಖಾತೆಗಳನ್ನು ತೆರೆದಿರುವುದು ಕೇಳಿದ್ದೇವೆ. ಅದಾದಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸುವಂತೆ ಕೆಲ ಅಧಿಕಾರಿಗಳ ಹೆಸರಿನಲ್ಲಿಯೂ ಫೇಸ್​ಬುಕ್​​ ನಕಲಿ ಖಾತೆಗಳನ್ನು ತೆರೆದು ಒಂದಷ್ಟು ದುಡ್ಡು ಮಾಡಿಕೊಂಡಿದ್ದಾರೆ ಖದೀಮರು! ಸಚಿವರ ಹೆಸರಲ್ಲೂ ಫೇಸ್​ಬುಕ್​​ ನಕಲಿ ಖಾತೆಗಳು ತೆರೆಯುವ ಆಟ ಶುರುವಾಗಿತ್ತು. ಯಾವುದೇ ಆತಂಕ, ಭಯವಿಲ್ಲದೇ ಈ ರೀತಿಯ ಕೆಲಸಗಳು ನಡೆಯುತ್ತಿದ್ದು,  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆಯನ್ನು ತೆರೆದಿದ್ದರು. ನಕಲಿ ಖಾತೆಗಳನ್ನು ತೆರೆದು ಸಾಮಾನ್ಯವಾಗಿ ವಂಚಕರು ದುಡ್ಡನ್ನು ಬೇಡಿಕೆ ಇಡುತ್ತಾರೆ. ಅದರಂತೆ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ ತೆರೆದ ಖಾತೆದಾರರು ಇದೇ ರೀತಿಯ ಬೇಡಿಕೆಯನ್ನು ಇಟ್ಟಿರುವುದು ಈ ಹಿಂದೆ ತಿಳಿದುಬಂದಿತ್ತು.

ಇದನ್ನೂ ಓದಿ: ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು

Published On - 12:45 pm, Fri, 11 June 21