ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು

ಡೇಟಿಂಗ್ ಆ್ಯಪ್​ಗಳತ್ತ ಭಾರತೀಯರ ಚಿತ್ತ ಹೆಚ್ಚಿದೆ. ಹಾಗಾದ್ರೆ, ಡೇಟಿಂಗ್ ಆ್ಯಪ್​ಗಳಿಂದ ಉಂಟಾಗಬಹುದಾದ ಪರಿಣಾಮಗಳೇನು.. ಸೈಬರ್ ತಜ್ಞ ಫಣೀಂದರ್, ಮನೋವೈದ್ಯೆ, ಆಪ್ತಸಮಾಲೋಚಕಿ ಸೌಜನ್ಯಾ ವಸಿಷ್ಠ ಮತ್ತು ರಂಗಕರ್ಮಿ ಮಹೇಶ್ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು
Follow us
guruganesh bhat
|

Updated on:Nov 27, 2020 | 6:19 PM

ಡೇಟಿಂಗ್ ಆ್ಯಪ್​ಗಳತ್ತ ಭಾರತೀಯರ ಚಿತ್ತ ಹೆಚ್ಚಿದೆ. ಟಿಂಡರ್, ಬಂಬ್ಲ್, ಕ್ವಾಕ್ ಕ್ವಾಕ್ ಮುಂತಾದ ಡೇಟಿಂಗ್ ಆ್ಯಪ್​ಗಳು ಲಾಕ್​ಡೌನ್​ ನಂತರ ಗಮನಾರ್ಹ ಬೆಳವಣಿಗೆ ಕಂಡಿವೆ. ಆನ್​ಲೈನ್ ಲೋಕದಲ್ಲಿ ಪ್ರೀತಿ ಪ್ರೇಮದತ್ತ ಆಸಕ್ತಿ ವಹಿಸುವವರು ಲಾಕ್​ಡೌನ್ ಪೂರ್ವಕ್ಕಿಂತ ಬರೋಬ್ಬರಿ ಶೇ.140ರಷ್ಟು ಹೆಚ್ಚಾಗಿದ್ದಾರೆ. ಭಾರತದ ಎರಡು, ಮೂರನೇ ಹಂತದ ನಗರಗಳಲ್ಲಿ ಬಳಕೆ ಹೆಚ್ಚಿದೆ ಎಂಬುದು ಅಚ್ಚರಿಯ ವಿಷಯ.

ಹದಿಹರೆಯದ ತರುಣ ತರುಣಿಯರು ವರ್ಚುವಲ್ ಜಗತ್ತಿನಲ್ಲಿ ಪ್ರೀತಿ ಪ್ರೇಮ ಎಂದು ಕಾಲಕ್ಷೇಪ ಮಾಡುತ್ತಿದ್ದಾರೆ. ಭಾರತೀಯ ಸಾಮಾಜಿಕ ಮನಸ್ಥಿತಿ ವಿಧಿಸುವ ಕಟ್ಟುಪಾಡುಗಳ ನಡುವೆ ಡೇಟಿಂಗ್ ಆ್ಯಪ್​ಗಳು ಸ್ವಾತಂತ್ರ್ಯ ಒದಗಿಸಿವೆ ಎಂಬ ಮಾತೂ ಕೇಳಿಬಂದಿದೆ. ಹಾಗಾದ್ರೆ, ಡೇಟಿಂಗ್ ಆ್ಯಪ್​ಗಳಿಂದ ಉಂಟಾಗಬಹುದಾದ ಪರಿಣಾಮಗಳೇನು.. ಈ ಕುರಿತು ಸೈಬರ್ ತಜ್ಞ ಫಣೀಂದರ್, ಮನೋವೈದ್ಯೆ, ಆಪ್ತ ಸಮಾಲೋಚಕಿ ಸೌಜನ್ಯಾ ವಸಿಷ್ಠ ಮತ್ತು ಡೇಟಿಂಗ್ ಆ್ಯಪ್​ ಕುರಿತು ಸಂಶೋಧನೆ ಮಾಡಿರುವ ರಂಗಕರ್ಮಿ ಮಹೇಶ್ ಟಿವಿ9 ಕನ್ನಡ ಫೇಸ್ಬುಕ್ ಲೈವ್​​ (TV9 KANNADA FACEBOOK LIVE)ನಲ್ಲಿ ಅಭಿಪ್ರಾಯ ಹಂಚಿಕೊಂಡರು.

ಒಂದು ತಪ್ಪು ಜೀವನವನ್ನೇ ನುಂಗಬಹುದು.. ಡೇಟಿಂಗ್ ಆ್ಯಪ್​ಗಳಿಂದ ಆಗಬಹುದಾದ ಒಂದೇ ಒಂದು ತಪ್ಪು ಇಡೀ ಜೀವನವನ್ನೇ ನುಂಗಿಹಾಕಬಹುದಾದ ಸಾಧ್ಯತೆಯಿದೆ. ಅಂತಹ ಉದಾಹರಣೆಗಳೂ ಸಾಕಷ್ಟಿವೆ. ಅಪರಿಚಿತರು ಪರಿಚಿತರಾಗುವ, ನಿಧಾನವಾಗಿ ಆಪ್ತರಾಗುವ ಅವಕಾಶವನ್ನು ಡೇಟಿಂಗ್ ಆ್ಯಪ್ ಗಳು ಒದಗಿಸುತ್ತದೆ. ಪರಿಚಯಸ್ಥರ ಬಳಿ ಉತ್ತಮ ಸಂಬಂಧ ಇಟ್ಟುಕೊಳ್ಳಲಾಗದವರು ಹೊಸ ಸಂಬಂಧಗಳಿಗಾಗಿ ಡೇಟಿಂಗ್ ಆ್ಯಪ್​ಗಳನ್ನು ಬಳಸುತ್ತಿದ್ದಾರೆ. ತಪ್ಪು ತಿಳುವಳಿಕೆಯೇ ಕಾರಣ.. ಏಕೆ ಡೇಟಿಂಗ್ ಆ್ಯಪ್​ ಬಳಸುತ್ತೇವೆ ಎಂಬುದು ಮುಖ್ಯ ಎಂದು ವಿವರಿಸುತ್ತಾರೆ ರಂಗಕರ್ಮಿ ಮಹೇಶ್. ಅವರಿಗೆ ಡೇಟಿಂಗ್ ಆ್ಯಪ್​ಗಳಲ್ಲೇ ಸಿಕ್ಕಿ ಮದುವೆಯಾಗಿ ಖುಷಿಯಿಂದ ಬಾಳುತ್ತಿರುವವರ ಪರಿಚಯವಿದೆ. ಉತ್ತಮ ಗೆಳೆಯ ಗೆಳತಿಯಾದವರೂ ತಿಳಿದಿದ್ದಾರೆ. ಮಹೇಶ್ ಪ್ರಕಾರ, ಡೇಟಿಂಗ್ ಆ್ಯಪ್​ಗಳಲ್ಲಿ ಖಾತೆ ನೋಡುತ್ತಿದ್ದಂತೆ ರಚಿಸಿದ ಉದ್ದೇಶ ತಿಳಿಯುತ್ತದಂತೆ. ಬೆಂಗಳೂರಿನಂತ ಮೆಟ್ರೋ ಸಿಟಿಗಳಲ್ಲಿ ಡೇಟಿಂಗ್ ಆ್ಯಪ್ ಬಳಸುವವರಿಗೆ ಈ ಕುರಿತು ಅರಿವಿರುತ್ತದೆ. ಚಿಕ್ಕ ನಗರಗಳಲ್ಲಿ ಹೆಚ್ಚುತ್ತಿರುವ ಬಳಕೆದಾರರಿಗೆ ಈ ತಿಳಿವಳಿಕೆ ಇರದು. ಡೇಟಿಂಗ್ ಆ್ಯಪ್​ಗಳ ದುಷ್ಪರಿಣಾಮವೂ ಅವರಿಗೆ ತಿಳಿಯದು. ಈ ವರ್ಗದ ಬಳಕೆದಾರರ ಜೀವನದ ಮೇಲೆ ಡೇಟಿಂಗ್ ಆ್ಯಪ್​ಗಳು ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ದೈಹಿಕ ಆಸೆ ಪೂರೈಸಿಕೊಳ್ಳಲು ಡೇಟಿಂಗ್ ಆ್ಯಪ್​ಗಳಿವೆ ಎಂದು ತಿಳಿದವರೇ ಹೆಚ್ಚು.. ಹುಡುಗರು ಹೆಚ್ಚಾಗಿ ದೈಹಿಕ ಆಸೆ ಪೂರೈಸಿಕೊಳ್ಳಲು ಡೇಟಿಂಗ್ ಆ್ಯಪ್​ಗಳಿವೆ ಎಂದು ಭಾವಿಸಿದ್ದಾರೆ. ಮೊದಲು ಈ ಅಭಿಪ್ರಾಯ ಬದಲಾಗಬೇಕಿದೆ. ನಕಲಿ ಅಕೌಂಟ್​ಗಳಿಂದ ಹಣ ಸುಲಿದ ಉದಾಹರಣೆಗಳ ಹಲವು. ಯುವತಿಯರು ವೇಶ್ಯಾವಾಟಿಕೆಗೂ ಬಳಸಲ್ಪಟ್ಟ ಉದಾಹರಣೆಗಳು ಸಾಕಷ್ಟಿವೆ.

ಡೇಟಿಂಗ್ ಆ್ಯಪ್​ಗಳು ಎಷ್ಟು ಸೇಫ್? ಸೈಬರ್ ತಜ್ಞ ಫಣೀಂದರ್ ವಿವರಿಸುವಂತೆ, ಡೇಟಿಂಗ್ ಆ್ಯಪ್​ಗಳು ಬಳಕೆದಾರರ ಸಂಪೂರ್ಣ ಚಲನವಲನ ಸಂಗ್ರಹಿಸುತ್ತವೆ. ಯಾವುದೇ ಸಂದರ್ಭದಲ್ಲಿ ಈ ಮಾಹಿತಿ ದುರುಪಯೋಗವಾಗು ವ ಸಾಧ್ಯತೆಗಳಿವೆ. ಆರೋಗ್ಯ ಸೇತುವಿಗೆ ನೀಡುವ ಖಾಸಗಿ ಮಾಹಿತಿ ಕುರಿತೇ ಗಂಭೀರ ಚರ್ಚೆಯಾಗಿದೆ. ಆದರೆ, ಕ್ಷಣಿಕ ಸುಖಕ್ಕಾಗಿ ನಮ್ಮ ಮಾಹಿತಿ ನೀಡಿ ಖಾಸಗಿತನ ಕಳೆದುಕೊಳ್ಳುತ್ತಿದ್ದೇವೆ. ಮುಂದೊಂದು ದಿನ ಯಾವತ್ತೋ ಮಾಡಿದ ವಿಡಿಯೋ ಕಾಲ್, ಚಾಟಿಂಗ್​ ಮಗ್ಗುಲ ಮುಳ್ಳಾಗಬಹುದು. ಅಪರಿಚಿತರು ಹಣ ಸುಲಿಯಬಹುದು.

ಟಿವಿ9 ಕನ್ನಡ ಫೇಸ್ಬುಕ್ ಲೈವ್​ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ (TV9 KANNADA FACEBOOK LIVE) https://fb.watch/20H0MlTsqK/

ಖಿನ್ನತೆಗೂ ನೂಕಬಹುದು ಹುಷಾರ್! ಡೇಟಿಂಗ್ ಆ್ಯಪ್​ನಲ್ಲಿ ಸಂಬಂಧ ಬೆಳೆಸಲು ಕಳಿಸುವ ವಿನಂತಿಗಳು ರಿಜೆಕ್ಟ್ ಆದರೆ, ನನ್ನನ್ನು ಯಾರೂ ಆಯ್ಕೆ ಮಾಡಲ್ಲ ಎಂದು ಖಿನ್ನತೆಗೆ ಒಳಗಾಗುವ ಸಂಭವವಿದೆ. ಡೇಟಿಂಗ್ ಆ್ಯಪ್​ ಬಳಕೆದಾರರು ತಮ್ಮನ್ನು ಇತರರು ಒಪ್ಪಲಿ ಎಂದು ಬಯಸುತ್ತಾರೆ. ಯಾರೂ ನಮ್ಮನ್ನು ಒಪ್ಪದಿದ್ದರೆ ನಿಧಾನವಾಗಿ ಖಿನ್ನತೆಗೆ ಜಾರುತ್ತೇವೆ. ತಮ್ಮ ಮೂಲ ಸ್ವಭಾವವನ್ನು ಕಳೆದುಕೊಳ್ಳುತ್ತಾರೆ. ತಮ್ಮ ಮೇಲೆ ನಂಬಿಕೆ ಕಡಿಮೆಯಾಗುತ್ತದೆ ಎಂದು ವಿವರಿಸುತ್ತಾರೆ ಮನೋವೈದ್ಯೆ, ಆಪ್ತ ಸಮಾಲೋಚಕಿ ಸೌಜನ್ಯಾ ವಸಿಷ್ಠ.

ಮಧ್ಯವಯಸ್ಕರು ಮನೆಯಲ್ಲಿ ಸಿಗದ ಸಂತೋಷವನ್ನು ಡೇಟಿಂಗ್ ಆ್ಯಪ್​ನಲ್ಲಿ ಹುಡುಕುತ್ತಾರೆ. ಪರಿಚಿತರ ಬಳಿ ಮನಸ್ಸಿನ ತುಮುಲ ಹೇಳಿಕೊಳ್ಳಲಾಗದೇ ಈ ಆ್ಯಪ್​ಗಳಲ್ಲಿ ಸಂಬಂಧ ಹುಡುಕುತ್ತಾರೆ. ಇಂತಹ ಬಳಕೆದಾರರ ಬಳಿ ಹಣ ಸುಲಿಗೆ ಮಾಡುವ ಉದಾಹರಣೆಗಳು ಹೆಚ್ಚಿವೆ. ಈ ಮಂದಿ ಮೋಸ ಹೋದರೂ ಪ್ರಕರಣ ದಾಖಲಿಸಲ್ಲ! 18 ವರ್ಷ ಒಳಗಿನವರಂತೂ ಡೇಟಿಂಗ್ ಆ್ಯಪ್ ಬಳಸುವು ಸ್ಪಷ್ಟ ಕಾನೂನು ಉಲ್ಲಂಘನೆ.

ತಜ್ಞರು ಸೂಚಿಸುವ ಪರಿಹಾರವೇನು? ಡೇಟಿಂಗ್ ಆ್ಯಪ್​ಗಳ ಮೇಲೆ ಅತಿ ಅವಲಂಬನೆ ಬೇಡ. ನೇರವಾಗಿ ಪರಿಚಯವಿರುವವರ ಜೊತೆಯೇ ಸಂಬಂಧ ವೃದ್ಧಿಸಿಕೊಳ್ಳಿ. ಕುಳಿತು ಮಾತನಾಡಿ. ಮಕ್ಕಳ ಜೊತೆ ಮುಕ್ತವಾಗಿ ಸಂವಾದ ಮಾಡಿ. ಡೇಟಿಂಗ್ ಆ್ಯಪ್ ಬಳಸುತ್ತೀರೆಂದರೆ ಉದ್ದೇಶ ಸ್ಪಷ್ಟಪಡಿಸಿಕೊಳ್ಳಿ. ಧ್ಯಾನ ಮಾಡಿ. ನಿಮ್ಮ ಜೊತೆ ನೀವು ಮಾತಾಡಿ. ನಿಮ್ಮನ್ನು ನೀವು ಪ್ರೀತಿಸಿ..ನಿಮಗೆ ನಿಮಗಿಂತ ಒಳ್ಳೆಯ ಆಪ್ತರು ಬೇರೆ ಯಾರೂ ಇಲ್ಲ..

ಇದನ್ನೂ ಓದಿ: ನೆಟ್ ಲೋಕದಲ್ಲಿ ಪ್ರೀತಿ ಪ್ರೇಮ ಪ್ರಣಯ.. ವರ್ಚುವಲ್ ಡೇಟಿಂಗ್​ನತ್ತ ಹೆಚ್ಚಿದ ಒಲವು

Published On - 5:51 pm, Fri, 27 November 20

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು