ಮಡಿಕೇರಿ: ಕೊರೊನಾ ಸೋಂಕಿತ ವೃದ್ಧೆಯನ್ನು ಆಕೆಯ ಮನೆಗೆ ಬಿಡದೆ ಅರ್ಧ ದಾರಿಗೆ ನಿಲ್ಲಿಸಿ ಚಾಲಕ ಹಿಂತಿರುಗಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ. ಮಡಿಕೇರಿ ಕೊವಿಡ್ ಆಸ್ಪತ್ರೆಯಿಂದ ನಿನ್ನೆ ಸಂಜೆ ( ಮೇ 23) ಡಿಸ್ಚಾರ್ಜ್ ಆಗಿದ್ದರು. ಕುಟುಂಬಸ್ಥರಿಗೆ ಮಾಹಿತಿ ನೀಡದೆ ವೃದ್ಧೆ ಡಿಸ್ಚಾರ್ಜ್ ಆಗಿದ್ದರು. ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದ ವೃದ್ಧೆಯನ್ನು ಆಕೆಯ ಮನೆಗೆ ತಲುಪಿಸಬೇಕಿತ್ತು. ಆದರೆ ಆ್ಯಂಬುಲೆನ್ಸ್ ಚಾಲಕ ಆಕೆಯ ಮನೆಯವರಗೆ ಬಿಡದೆ ಅರ್ಧ ದಾರಿಗೆ ಇಳಿಸಿ ಹೋಗಿದ್ದಾನೆ. ಈ ಬಗ್ಗೆ ವೃದ್ಧೆಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಕೊವಿಡ್ ಆಸ್ಪತ್ರೆಯಿಂದ 60 ವರ್ಷದ ಪೊನ್ನಮ್ಮ ಕಳೆದ 14 ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದು ನಿನ್ನೆ ಸಂಜೆ ಡಿಸ್ಚಾರ್ಜ್ ಆಗಿದ್ದರು. ಪೊನ್ನಮ್ಮ ಸೋಮವಾರಪೇಟೆ ತಾಲೂಕಿನ ಕಿರಗಂದೂರು ನಿವಾಸಿ. ಆದರೆ ಅಂಬ್ಯುಲೆನ್ಸ್ ಚಾಲಕ ಸಂಜೆ 5.30 ಗಂಟೆಗೆ ಐಗೂರು ಗ್ರಾಮಕ್ಕೆ ಬಿಟ್ಟು ಹೋಗಿದ್ದಾನೆ. ಐಗೂರಿನಿಂದ ಕಿರಗಂದೂರಿಗೆ 2 ಕಿಲೋಮೀಟರ್ ಇದೆ. ಹೀಗಾಗಿ ತನ್ನ ಮನೆಗೆ ಹೋಗಲು ವೃದ್ಧೆ ಪರದಾಟ ಪಟ್ಟಿದ್ದಾಳೆ. ಇದರಿಂದ ಚಾಲಕನ ಅಜಾಗರೂಕತೆಗೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕೊವಿಡ್ ಆಸ್ಪತ್ರೆ ಮಾಧ್ಯಮ ವಕ್ತಾರ ಡಾ.ಕುಶ್ವಂತ್, ಈ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಆಸ್ಪತ್ರೆ ನಿರ್ಲಕ್ಷ್ಯದಿಂದ ಕೊರೊನಾ ಹೆಚ್ಚಳ
ಬಳ್ಳಾರಿ: ಆಸ್ಪತ್ರೆಯೊಳಗೆ ಸೋಂಕಿತರ ಜೊತೆಗೆ ಕುಟುಂಬಸ್ಥರೂ ಪ್ರವೇಶ ಮಾಡುವುತ್ತಿರುವುರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೊವಿಡ್ ಆಸ್ಪತ್ರೆಯಲ್ಲಿ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಆದರೆ ಯಾರು ಈ ಬಗ್ಗೆ ಗಮನಹರಿಸುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ
ಕೊಪ್ಪಳದಲ್ಲಿ ಸರಳ ವಿವಾಹ; ಮದುವೆಗೆ ಸಾಕ್ಷಿ ದೇವರು ಮತ್ತು ವರನ ಒಬ್ಬ ಬಂಧು ಮಾತ್ರ
ಕೋಲಾರದಲ್ಲಿ ಮತ್ತೆ ಕಾಣಿಸಿಕೊಂಡಿದೆ ಕಾಲುಬಾಯಿ ರೋಗ; ಜಾನುವಾರುಗಳ ರಕ್ಷಣೆ ಮಾಡುವಂತೆ ರೈತರ ಆಗ್ರಹ
(Families of Old age expressed outrage about ambulance driver at madikeri)
Published On - 11:54 am, Mon, 24 May 21