ದಾವಣಗೆರೆ: ಸಕ್ಕರೆ ಕಾರ್ಖಾನೆಯ ಹಾರು ಬೂದಿಯಿಂದ ಬೇಸತ್ತ ರೈತನೊಬ್ಬ ಇಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದಲ್ಲಿರುವ ಕಾರ್ಖಾನೆಯ ಧೂಳಿನ ಕಾಟಕ್ಕೆ ಬೇಸತ್ತು ರೈತ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ.
ಚಿಕ್ಕಬಿದರಿನಲ್ಲಿ ರೈತ ಹಾಲೇಶಪ್ಪ AC ಮಮತಾ ಹಾಗೂ DySP ತಾಮ್ರಧ್ವಜ ಸಮ್ಮುಖದಲ್ಲೇ ವಿಷ ಕುಡಿಯಲು ಯತ್ನಿಸಿದ್ದಾನೆ. ಆದರೆ, ಸಮಯಪ್ರಜ್ಞೆ ತೋರಿದ ಪೊಲೀಸರು ಆತನ ಕೈಯಲ್ಲಿದ್ದ ವಿಷದ ಬಾಟಲಿ ಕಸಿದುಕೊಂಡರು.
ಹಾಲೇಶಪ್ಪ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು?
ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಯಿಂದ ಹೊರಬರುತ್ತಿದ್ದ ಹಾರು ಬೂದಿಯ ಉಪಟಳವನ್ನು ನಿಲ್ಲಿಸುವಂತೆ ಸ್ಥಳೀಯರು ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ AC ಮಮತಾ ಮತ್ತು DySP ತಾಮ್ರಧ್ವಜ ಅವರ ಬಳಿ ಮನವಿ ಮಾಡಿದರು.
ಹಾರು ಬೂದಿಯಿಂದ ಸುಮಾರು 20 ವರ್ಷಗಳ ಕಾಲ ನಲುಗಿ ಹೋಗಿದ್ದೇವೆ. ಅಧಿಕಾರಿಗಳು ಬರ್ತಾರೆ, ಹೋಗ್ತಾರೆ. ಆದರೆ, ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಗ್ರಾಮಸ್ಥರು ಗರಂ ಆದರು. ಇದಕ್ಕೆ, ಸ್ಪಂದಿಸಿದ ಅಧಿಕಾರಿಗಳು 20 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ನಡುವೆ, ರೈತ ಹಾಲೇಶಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪತ್ನಿ ಮೇಲೆ ಹಲ್ಲೆಗೈದು ಪತಿ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು