ದಾವಣಗೆರೆ: ಸಾಲಬಾಧೆಯಿಂದಾಗಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ. ಶೇಖರಪ್ಪ(56) ಮೃತ ರೈತ ಎಂದು ಮೂಲಗಳು ತಿಳಿಸಿವೆ.
ಜಮೀನು ನಿರ್ವಹಣೆಗಾಗಿ ಶೇಖರಪ್ಪ ಕೆನರಾ ಬ್ಯಾಂಕ್ ಸ್ಥಳೀಯ ಸಹಕಾರ ಸಂಘದಲ್ಲಿ 8 ಲಕ್ಷ ರೂಪಾಯಿ ಸಾಲ ಮಾಡಿದ್ದ. ಸೂಕ್ತ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲಾಗದೆ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.
ಬೆಂಕಿ ಹಚ್ಚಿಕೊಂಡು ರೈತನ ಆತ್ಮಹತ್ಯೆ
Published On - 9:23 am, Sun, 20 December 20