ರಾಜ್ಯಕ್ಕೆ ಕಾದಿದೆಯಂತೆ 12 ದಿನಗಳ ಗಂಡಾಂತರ.. ಕೊರೊನಾ ಬಗ್ಗೆ ತಜ್ಞರಿಂದ ಎಚ್ಚರಿಕೆ
ರಾಜ್ಯದಲ್ಲಿ ಕೊರೊನಾ ಹೆಚ್ಚಾಗುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇವತ್ತಿನಿಂದ ಸಿಕ್ಕಾಪಟ್ಟೇ ಡೇಂಜರಸ್ ಟೈಂ ಶುರುವಾಗಲಿದ್ದು ರಾಜ್ಯಕ್ಕೆ ಕಾದಿದೆಯಂತೆ 12 ದಿನಗಳ ಗಂಡಾಂತರ.
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣಿಸದೆ ಎಲ್ಲೆಡೆ ಹರಡಿದೆ. ಈಗ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇವತ್ತಿನಿಂದ ಸಿಕ್ಕಾಪಟ್ಟೇ ಡೇಂಜರಸ್ ಟೈಂ ಶುರುವಾಗಲಿದ್ದು ರಾಜ್ಯಕ್ಕೆ ಕಾದಿದೆಯಂತೆ 12 ದಿನಗಳ ಗಂಡಾಂತರ.
ಹೌದು ಮುಂದಿನ 12 ದಿನಗಳಲ್ಲಿ ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗಲಿದೆಯಂತೆ. ಡಿಸೆಂಬರ್ 20ರಿಂದ 2021ರ ಜನವರಿ 2ರವರೆಗೆ ಡೇಂಜರ್ ಟೈಂ ಅಂತೆ. ಕ್ರಿಸ್‌ಮಸ್, ಹೊಸವರ್ಷದ ಸಂಭ್ರಮಾಚರಣೆ ಮತ್ತು ವೀಕೆಂಡ್ ಮಸ್ತಿಯಿಂದ ಎಡವಟ್ಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಸಮಯದಲ್ಲಿ ನಿರ್ಲಕ್ಷಿಸದಂತೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಲ್ಲವಾದರೆ ಮುಂದೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತೆ.
ನಿಮ್ಮ ಮೋಜು ಮಸ್ತಿಗೆ ಕೊರೊನಾ ಅಡ್ಡಿ: ಇನ್ನು ನಾವು ಕೊರೊನಾ ಇಲ್ಲವೆಂದು ಹೆಚ್ಚು ಜನ ಜಮಾವಣೆಯಾಗಬಾರದು. ಮೋಜು ಮಸ್ತಿ ಸೋಗಿನಲ್ಲಿ ಕೊರೊನಾ ಮರೆಯಬಾರದು. ದೈಹಿಕ ಅಂತರ, ಮಾಸ್ಕ್ ಬಗ್ಗೆ ನಿರ್ಲಕ್ಷ್ಯವಹಿಸಬಾರದು. ನಿರ್ಲಕ್ಷ್ಯವಹಿಸಿದರೆ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ವರ್ಷಾಂತ್ಯದಲ್ಲಿ 2ನೇ ಅಲೆ ಭೀತಿ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ತಜ್ಞರು 12 ದಿನಗಳ ಡೆಡ್‌ಲೈನ್ ನೀಡಿದ್ದಾರೆ.
ಕೊರೊನಾ ಕೋಟ್ಯಧಿಪತಿ! ಭಾರತದಲ್ಲಿ ಕೊವಿಡ್ನ ಕೋಟಿ ಹೆಜ್ಜೆಗಳು.. ಆತಂಕಕ್ಕಿಂತ ಅಚ್ಚರಿಯೇ ಜಾಸ್ತಿ!