ಮೈಸೂರು: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ಎಕರೆ ಜಮೀನು; ಹತ್ತಾರು ಲಕ್ಷ ರೂ ಸಾಲ
3.10 ಎಕರೆ ಜಮೀನು ಹೊಂದಿದ್ದ ಕೃಷ್ಣೇಗೌಡ ಎಂಬ ರೈತ ತಂಬಾಕು ಜೋಳ ಮತ್ತು ರಾಗಿ ಬೆಳೆ ಬೆಳೆದಿದ್ದರು. ಹನಗೋಡು ಬ್ಯಾಂಕಿನಲ್ಲಿ 4 ಲಕ್ಷ, ಒಡವೆ ಸಾಲ 1.54 ಲಕ್ಷ ಹಾಗೂ 4 ಲಕ್ಷ ಕೈಸಾಲ ಸಾಲ ಮಾಡಿದ್ದರು. ಕಳೆದ ವರ್ಷ ಅತಿಯಾದ ಮಳೆಯಿಂದ ಹಾಗು ಈ ಬಾರಿ ಕೊರೊನಾ ಹಿನ್ನೆಲೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿದ್ದ ರೈತ ಸಾಲ ತೀರಿಸಲು ಸಾಧ್ಯವಾಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೈಕೊಟ್ಟ ಹಿಂಗಾರು ಬೆಳೆ: ಸಾಲಬಾಧೆಯಿಂದ ರೈತ ಆತ್ಮಹತ್ಯೆ