ಹೊಸ ಮಾರ್ಗದಲಿ ರೈತ ಚಳವಳಿ.. ಕಿಸಾನ್ ಕಾಂಗ್ರೆಸ್ ಘಟಕದಿಂದ ರಕ್ತ ಚಳವಳಿ!

| Updated By: ಸಾಧು ಶ್ರೀನಾಥ್​

Updated on: Feb 04, 2021 | 3:46 PM

ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ರಕ್ತದಲ್ಲಿ ಪತ್ರ ಬರೆದು ದೇಶದ ಪ್ರಧಾನಿಗೆ ಕಳುಹಿಸಲು ನಿರ್ಧರಿಸಿದ್ದಾರೆ.

ಹೊಸ ಮಾರ್ಗದಲಿ ರೈತ ಚಳವಳಿ.. ಕಿಸಾನ್ ಕಾಂಗ್ರೆಸ್ ಘಟಕದಿಂದ ರಕ್ತ ಚಳವಳಿ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆಬ್ರವರಿ 6 ರಂದು ರೈತರು ತಮ್ಮ ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಲಿದ್ದಾರೆ.

ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕಿಸಾನ್ ಕಾಂಗ್ರೆಸ್ ಘಟಕದಿಂದ ಸಾವಿರಾರು ರೈತರು ತಮ್ಮ ರಕ್ತದಲ್ಲಿ ಪತ್ರ ಬರೆದು ದೇಶದ ಪ್ರಧಾನಿಗೆ ಕಳುಹಿಸಲು ನಿರ್ಧರಿಸಿದ್ದಾರೆ. ಬೆಂಗಳೂರು ಕೇಂದ್ರ ಅಂಚೆ ಕಚೇರಿ ಆವರಣದಲ್ಲೇ ರಕ್ತ ಚಳವಳಿಗೆ ಕರೆ ನೀಡಲಾಗಿದೆ.

Farmers Protest | ವ್ಯಂಗ್ಯವಾಡಿದ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಮಿಯಾ ಖಲೀಫಾ