ಕಳ್ಳರು ಯಾವಾಗ ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ ಎಂಬ ಭಯದಲ್ಲಿ ಬೆಳೆಗಾರ!

|

Updated on: Dec 02, 2019 | 12:06 PM

ಗದಗ: ಈರುಳ್ಳಿಗೆ ಈಗ ಬಂಗಾರದ ಬೆಲೆ ಬಂದ್ಬಿಟ್ಟಿದೆ. ಇದೀಗ ಬೆಳೆದಿರೋ ಅಷ್ಟೋ ಇಷ್ಟೋ ಈರುಳ್ಳಿಯನ್ನ ಕಾಪಾಡಿಕೊಳ್ಳೋಕೆ ರೈತರು ಹರಸಾಹಸ ಪಡುವಂತ ಪರಿಸ್ಥಿತಿ ಉಂಟಾಗಿದೆ. ರಾತ್ರಿಯಲ್ಲಾ ಈರುಳ್ಳಿಯನ್ನು ಕಾಯುವಂತಾಗಿದೆ. ಕಾಲಾಯ ತಸ್ಮೈ ನಮಃ ಅನ್ನೋದು ಇದಕ್ಕೆನೇ. ರಸ್ತೆಗೆ ಈರುಳ್ಳಿಯನ್ನ ಸುರಿದಿದ್ದು ಒಂದು ಕಾಲವಾದ್ರೆ, ಈಗ ನೋಡಿ ರಾತ್ರಿಯೆಲ್ಲ ಈರುಳ್ಳಿ ಬೆಳೆ ಕಾವಲು ನಿಲ್ಲುವಂತಾಗಿರೋದು ಮತ್ತೊಂದು ಕಾಲ. ಯಾವ ಹೊತ್ತಿನಲ್ಲಿ ಖದೀಮರು ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ. ಭೂಮಿ ಒಳಗಿರೋ ಬಂಗಾರವನ್ನ ಕಿತ್ತೊಯ್ತಾರೋ ಅಂತ ಟಾರ್ಚ್​ ಹಿಡಿದು ಕಾಯ್ತಿದ್ದಾರೆ. ಈರುಳ್ಳಿಗೆ […]

ಕಳ್ಳರು ಯಾವಾಗ ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ ಎಂಬ ಭಯದಲ್ಲಿ ಬೆಳೆಗಾರ!
Follow us on

ಗದಗ: ಈರುಳ್ಳಿಗೆ ಈಗ ಬಂಗಾರದ ಬೆಲೆ ಬಂದ್ಬಿಟ್ಟಿದೆ. ಇದೀಗ ಬೆಳೆದಿರೋ ಅಷ್ಟೋ ಇಷ್ಟೋ ಈರುಳ್ಳಿಯನ್ನ ಕಾಪಾಡಿಕೊಳ್ಳೋಕೆ ರೈತರು ಹರಸಾಹಸ ಪಡುವಂತ ಪರಿಸ್ಥಿತಿ ಉಂಟಾಗಿದೆ. ರಾತ್ರಿಯಲ್ಲಾ ಈರುಳ್ಳಿಯನ್ನು ಕಾಯುವಂತಾಗಿದೆ.

ಕಾಲಾಯ ತಸ್ಮೈ ನಮಃ ಅನ್ನೋದು ಇದಕ್ಕೆನೇ. ರಸ್ತೆಗೆ ಈರುಳ್ಳಿಯನ್ನ ಸುರಿದಿದ್ದು ಒಂದು ಕಾಲವಾದ್ರೆ, ಈಗ ನೋಡಿ ರಾತ್ರಿಯೆಲ್ಲ ಈರುಳ್ಳಿ ಬೆಳೆ ಕಾವಲು ನಿಲ್ಲುವಂತಾಗಿರೋದು ಮತ್ತೊಂದು ಕಾಲ. ಯಾವ ಹೊತ್ತಿನಲ್ಲಿ ಖದೀಮರು ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ. ಭೂಮಿ ಒಳಗಿರೋ ಬಂಗಾರವನ್ನ ಕಿತ್ತೊಯ್ತಾರೋ ಅಂತ ಟಾರ್ಚ್​ ಹಿಡಿದು ಕಾಯ್ತಿದ್ದಾರೆ.

ಈರುಳ್ಳಿಗೆ ಚಿನ್ನದ ರೇಟ್​​ ಬಂದಿದೆ. ಕ್ವಿಂಟಾಲ್​​​​ ಈರುಳ್ಳಿ ರೇಟ್​​​​ 6ರಿಂದ 10 ಸಾವಿರ ಆಗಿದ್ದು, ರೈತರು ಫುಲ್​ ಖುಷ್​ ಆಗಿದ್ದಾರೆ. ಆದ್ರೆ, ಬಂಗಾರದಂತಹ ಈರುಳ್ಳಿ ಮೇಲೆ ಕಳ್ಳರ ಕಣ್​​ ಬಿದ್ದಿದ್ದು, ಈರುಳ್ಳಿ ಕಾಪಾಡಿಕೊಳ್ಳಲು ಗದಗದ ಲಕ್ಕುಂಡಿ ಗ್ರಾಮದಲ್ಲಿ ರೈತರು ಹೊಲವನ್ನ ಕಾಯುತ್ತಿದ್ದಾರೆ. ಸರದಿಯಂತೆ ರಾತ್ರಿಯಿಡೀ ಈರುಳ್ಳಿ ಬೆಳೆಯನ್ನ ಕಾದು, ಫಸಲನ್ನ ಉಳಿಸಿಕೊಳ್ತಿದ್ದಾರೆ. ಟಾರ್ಚು, ದೊಣ್ಣೆ ಹಿಡಿದು ಕಾವಲಿಗೆ ನಿಂತಿದ್ದಾರೆ.

ಗದಗ ರೈತರಿಗೆ ಕಳ್ಳರ ಚಿಂತೆಯಾದರೆ, ಚಿತ್ರದುರ್ಗದಲ್ಲಿ ಈರುಳ್ಳಿ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯಾಕಂದ್ರೆ, ಅತಿವೃಷ್ಟಿಯ ನಡುವೆ ಭಿತ್ತಿರೋ ಅಲ್ಪಸ್ವಲ್ಪ ಈರುಳ್ಳಿಗೆ ನುಸಿರೋಗ ತಟ್ಟಿದೆ. ಹೀಗಾಗಿ, ಈ ಹೊತ್ತಿಗೆ ಕೈಗೆ ಬರಬೇಕಿದ್ದ ಈರುಳ್ಳಿ ನೆಲಕಚ್ಚಿದೆ.