ಯಾದಗಿರಿ: ಮಗ (ತೇಜು) ಮಾಡಿದ ತಪ್ಪಿಗೆ ತಂದೆಯನ್ನು (ಧಾರು ರಾಠೋಡ್) ಸಾಲಗಾರರು ಕಿಡ್ನಾಪ್ ಮಾಡಿರುವ ಘಟನೆ ಶಹಾಪುರ ತಾಲೂಕಿನ ತಾಂಡಾದಲ್ಲಿ ನಡೆದಿದೆ. ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದರೂ ಗಮನ ಹರಿಸಿಲ್ಲ ಎಂದು ಭೀಮರಾಯನಗುಡಿ ಠಾಣೆ ಪೊಲೀಸರ ವಿರುದ್ಧ ಧಾರು ಪತ್ನಿ ತಿಪ್ಪಬಾಯಿ ಆರೋಪಿಸಿದ್ದಾರೆ.
ಮಗ ತೇಜು ಸಾಲಗಾರರ ಬಳಿ 25 ಸಾವಿರ ರೂ ಸಾಲ ಪಡೆದಿದ್ದರು. ಹಣ ಪಾವತಿಸದ ಕಾರಣ ತಂದೆಯನ್ನು ಕಿಡ್ನಾಪ್ ಮಾಡಿ, ಬಡ್ಡಿ ಸೇರಿ 1.20 ಲಕ್ಷ ರೂ. ವಾಪಸ್ ನೀಡುವಂತೆ ಸಾಲಗಾರರು ಕಿರುಕುಳ ನೀಡುತ್ತಿದ್ದಾರೆ. 3 ತಿಂಗಳ ಹಿಂದೆ ಧಾರು ಕಿಡ್ನಾಪ್ ಆಗಿದ್ದಾರೆ. ಸಂತೋಷ್ ಗ್ಯಾಂಗ್ ಅವರನ್ನು ಅಪಹರಣ ಮಾಡಿದೆ. ಈ ಕುರಿತಂತೆ ಪೊಲೀಸರು ಯಾವುದೇ ಗಮನ ಹರಿಸಿಲ್ಲ. ಗಂಡನನ್ನು ಹುಡುಕಿಕೊಡಿ ಎಂದು ಧಾರು ಪತ್ನಿ ತಿಪ್ಪಬಾಯಿ ಎಸ್ಪಿ ಮೊರೆ ಹೋಗಿದ್ದಾರೆ.
ಕಿಡ್ನಾಪ್-ಕೊಲೆ ಯತ್ನ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ KAS ಸುಧಾ ಪತಿ: ಪ್ರಕರಣ ಯಾವುದು ಗೊತ್ತಾ!?