ACB Raid ಟಿಪಿಒ ಜಯರಾಜ್ ಮನೆಯಲ್ಲಿ ಭಾರೀ ಆಸ್ತಿ ಪತ್ತೆ, ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್ ಮೇಲೂ ದಾಳಿ
ಮಂಗಳೂರು ಮಹಾನಗರ ಪಾಲಿಕೆ ಟಿಪಿಒ ಜಯರಾಜ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಸುಮಾರು 3ರಿಂದ 4 ಕೋಟಿಯಷ್ಟು ಆಸ್ತಿ ಪತ್ತೆಯಾಗಿದೆ. ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್ ಮೇಲೂ ದಾಳಿ ನಡೆದಿದೆ.
ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಗಳಿಸಿರುವ ಆರೋಪ ಹಿನ್ನೆಲೆಯಲ್ಲಿ ಇಂದು ರಾಜ್ಯದ 7 ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪೈಕಿ ಮಂಗಳೂರು ಮಹಾನಗರ ಪಾಲಿಕೆ ಟಿಪಿಒ ಜಯರಾಜ್ ಕೂಡ ಒಬ್ಬರು. ಇವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಸುಮಾರು 3ರಿಂದ 4 ಕೋಟಿಯಷ್ಟು ಆಸ್ತಿ ಪತ್ತೆಯಾಗಿದೆ. ಹಾಗೂ 8 ಲಕ್ಷ ರೂಪಾಯಿ ನಗದು ಸಿಕ್ಕಿದೆ.
ಮೈಸೂರಿನಲ್ಲಿ ಒಂದು, ಮಂಗಳೂರಿನಲ್ಲಿ 2 ಸೈಟ್, ಮತ್ತು ಕೇಂದ್ರಾಡಳಿತ ಪ್ರದೇಶ ಮಾಹೆಯ ಪತ್ನಿ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೆ ಕೇರಳದ ಕೊಚ್ಚಿನ್‌ನಲ್ಲಿರುವ ಬ್ಯಾಂಕ್‌ನಲ್ಲಿ 1 ಕೋಟಿ ಠೇವಣಿ ಇಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಕೊಚ್ಚಿನ್‌ನ ಬ್ಯಾಂಕ್‌ಗೆ ಎಸಿಬಿ ಅಧಿಕಾರಿಗಳ ಭೇಟಿ ನೀಡಲಿದ್ದು ಅಲ್ಲಿನ ಲಾಕರ್ ಓಪನ್ ಮಾಡಲಿದ್ದಾರೆ.
ಕೇರಳದಲ್ಲಿರುವ ಪತ್ನಿ ಕ್ವಾರ್ಟರ್ಸ್ ಮೇಲೂ ಎಸಿಬಿ ದಾಳಿ ನಡೆಸಿದೆ. ಜಂಟಿ ನಿರ್ದೇಶಕ ಜಯರಾಜ್ ಪತ್ನಿ ಡಾ.ಜಯಶ್ರೀ ಕೂಡ ಸರ್ಕಾರಿ ಉದ್ಯೋಗಿ. ಇವರು ಕೇರಳದಲ್ಲಿ ಸರ್ಕಾರಿ ವೈದ್ಯೆಯಾಗಿದ್ದಾರೆ. ಕಳೆದ 12 ವರ್ಷದಿಂದ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪ, ರಾಜ್ಯದ 7 ಅಧಿಕಾರಿಗಳ ಮನೆಗಳ ಮೇಲೆ ACB ರೇಡ್
Published On - 11:51 am, Tue, 2 February 21