2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನು ಹೊರ ಹಾಕಿದ ಪಾಪಿ ಪತಿ

|

Updated on: Dec 11, 2019 | 11:43 AM

ಬೆಳಗಾವಿ: 2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನ ಪಾಪಿ ತಂದೆ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ ಎಂಬಾತ 2ನೇ ಹೆಂಡತಿಗಾಗಿ ತನ್ನ ಮೊದಲ ಹೆಂಡತಿ ಸಮೀನಾ ಕೊಲ್ಲಾಪುರೆ ಹಾಗೂ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ. ಕಳೆದ ರಾತ್ರಿಯಿಂದಲೂ ತಾಯಿ ಮಕ್ಕಳು ಚಳಿಯಲ್ಲೇ ರಾತ್ರಿ ಕಳೆದಿದ್ದಾರೆ. ಗಂಡನ ಮನೆ ಬಿಟ್ಟು ಬೇರೆ ಎಲ್ಲಿ ಹೋಗಲಿ ಎಂದು ದಿಕ್ಕು ತೋಚದೆ ಮನೆ ಬಾಗಿಲಲ್ಲೆ ಮೊದಲನೇ […]

2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನು ಹೊರ ಹಾಕಿದ ಪಾಪಿ ಪತಿ
Follow us on

ಬೆಳಗಾವಿ: 2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನ ಪಾಪಿ ತಂದೆ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ ಎಂಬಾತ 2ನೇ ಹೆಂಡತಿಗಾಗಿ ತನ್ನ ಮೊದಲ ಹೆಂಡತಿ ಸಮೀನಾ ಕೊಲ್ಲಾಪುರೆ ಹಾಗೂ ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ.

ಕಳೆದ ರಾತ್ರಿಯಿಂದಲೂ ತಾಯಿ ಮಕ್ಕಳು ಚಳಿಯಲ್ಲೇ ರಾತ್ರಿ ಕಳೆದಿದ್ದಾರೆ. ಗಂಡನ ಮನೆ ಬಿಟ್ಟು ಬೇರೆ ಎಲ್ಲಿ ಹೋಗಲಿ ಎಂದು ದಿಕ್ಕು ತೋಚದೆ ಮನೆ ಬಾಗಿಲಲ್ಲೆ ಮೊದಲನೇ ಹೆಂಡತಿ ಕಾಯುತ್ತಿದ್ದಾಳೆ. ಪೊಲೀಸರು ಬಂದು ಬಾಗಿಲು ತೆರೆ ಎಂದರು ಪಾಪಿ ಪತಿ ಬಾಗಿಲು ತೆರೆಯುತ್ತಿಲ್ಲ. ಅಲ್ಲದೆ ಗಂಡನ ವಿರುದ್ಧ ದೂರು ನೀಡಿದರು ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ.