86 ರೂ. ಔಷಧಿಗೆ 4528 ಎಂಆರ್​​​ಪಿ: ರೋಗಿಗಳನ್ನ ಸುಲಿಗೆ ಮಾಡ್ತಿದ್ದ ಆಸ್ಪತ್ರೆ, ಕಂಪನಿಗಳ ಕಳ್ಳಾಟ ಬಯಲು

ಆಸ್ಪತ್ರೆ, ಔಷಧಿ ಅಂಗಡಿಗಳಲ್ಲಿ ಜನ ದರದ ಬಗ್ಗೆ ಪ್ರಶ್ನೆ ಮಾಡಲ್ಲ. ರೋಗ ವಾಸಿ ಆದ್ರೆ ಸಾಕಪ್ಪ ಎಂದು ಹೇಳಿದಷ್ಟು ಹಣ ಕೊಟ್ಟ ಔಷಧಿ ಖರೀದಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಔಷಧ ತಯಾರಿಕಾ ಕಂಪನಿಗಳ ಬಂಡವಾಳವನ್ನು FDA ಬಯಲು ಮಾಡಿದೆ. ಕಡಿಮೆ ದರಕ್ಕೆ ಔಷಧ ಸಿದ್ಧಪಡಿಸಿ ರೋಗಿಗಳಿಗೆ ದುಬಾರಿ MRPಯಲ್ಲಿ ಮಾರಾಟ ಮಾಡುತ್ತಿರುವ ಬಿಗ್ ಸುಲಿಗೆ ಬಯಲಾಗಿದೆ.

86 ರೂ. ಔಷಧಿಗೆ 4528 ಎಂಆರ್​​​ಪಿ: ರೋಗಿಗಳನ್ನ ಸುಲಿಗೆ ಮಾಡ್ತಿದ್ದ ಆಸ್ಪತ್ರೆ, ಕಂಪನಿಗಳ ಕಳ್ಳಾಟ ಬಯಲು
Pharma Companies
Edited By:

Updated on: Sep 27, 2026 | 5:52 PM

ಬೆಂಗಳೂರು,ಸೆಪ್ಟೆಂಬರ್ 27): ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬಿಲ್ ಲೂಟಿ ಕುರಿತು FDA ತನಿಖೆ ನಡೆಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. 86 ರೂಪಾಯಿಗೆ ಖರೀದಿಸಿದ ಔಷಧಿ 4,528 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅಂದರೆ 60 ರಿಂದ 90% ಪಟ್ಟು ಹಣವನ್ನು ರೋಗಿಗಳಿಂದ ಲೂಟಿ ಮಾಡಲಾಗುತ್ತಿದೆ. ಇಂತಹ 254 ಔಷಧ ಕಂಪನಿಗಳ ಕರಾಳ ಮುಖವಾಡವನ್ನು ಆಹಾರ ಮತ್ತು ಔಷಧ ಮಂಡಳಿ ಬಿಚ್ಚಿಟ್ಟಿದೆ.

ಎಂಆರ್ ಪಿ ವರ್ಸಸ್ ಲ್ಯಾಂಡಿಂಗ್ ಕಾಸ್ಟ್

  • 86 ರೂ.ಗೆ ಖರೀದಿಸಿದ ಔಷಧಿಗೆ – 4,528 ರೂ. ಎಂಆರ್ ಪಿ – 52 ಪಟ್ಟು ಹೆಚ್ಚು
  •  160 ರೂ. ಔಷಧಿಗೆ – 7,110 ರೂ. ಎಂ ಆರ್ ಪಿ – 44 ಪಟ್ಟು ಹೆಚ್ಚು
  •  ಸೈಟ್ಯಾಕ್ಸ್ 100MG (ಕ್ಯಾನ್ಸರ್ ಔಷಧ): ಲ್ಯಾಂಡಿಂಗ್ – 342 ರೂ, ಎಂಆರ್ ಪಿ – 3,836 ರೂ – 1021% ಲಾಭ
  •  ನ್ಯೂಕೈನ್ 300MCG: ಲ್ಯಾಂಡಿಂಗ್ – 112 ರೂ, ಎಂಆರ್ ಪಿ – 1,239 ರೂ – 1006% ಲಾಭ
  •  ಬಿವಾಟಾಸ್ 400MG ಇಂಜೆಕ್ಷನ್: ಲ್ಯಾಂಡಿಂಗ್ – 5,850 ರೂ, ಎಂಆರ್ ಪಿ – 62,690 ರೂ – 971% ಲಾಭ
  •  Cosate 3 MIU Inj: Landing – 340 ರೂ, MRP – 3,699 ರೂ – 987% ಲಾಭ

ಅಂದರೆ ಒಂದು ಮಾತ್ರೆಗೆ 100 ರೂ ಗೆ ತಯಾರಿಸಿ 1000 ರೂ ಗೆ ಮಾರಾಟ ಮಾಡಲಾಗ್ತಿದೆ.. ಇದು ಔಷಧದ ನಿಜವಾದ ಖರೀದಿ ದರಕ್ಕೂ ಆಸ್ಪತ್ರೆ ಹಾಕುವ ಬಿಲ್ ಗೂ ಇರುವ ಅಂತರ ಇದೆ.

ಇದು ಒಂದೆರಡು ಕಂಪನಿಗಳ ಕಥೆಯಲ್ಲ. ಬರೋಬ್ಬರಿ 254 ಕ್ಯಾನ್ಸರ್ ಔಷಧ ತಯಾರಿಕಾ ಕಂಪನಿಗಳು ಇದೇ ಮಾದರಿಯಲ್ಲಿ ಬಡ ರೋಗಿಗಳನ್ನು ಸುಲಿಗೆ ಮಾಡುತ್ತಿವೆ ಎಂದು FDA ಪತ್ತೆ ಹಚ್ಚಿದೆ.. ಆಸ್ಪತ್ರೆಗಳಲ್ಲಿ ಔಷಧಿ ಮಾತ್ರವಲ್ಲ, ಮೆಡಿಕಲ್ ಡಿವೈಸ್, ಸರ್ಜಿಕಲ್ ಉಪಕರಣಗಳು ಮತ್ತು ಕನ್ಸ್ಯೂಮೆಬಲ್ಸ್ ಗಳಲ್ಲೂ ಇದೇ ಲೂಟಿ ನಡೆಯುತ್ತಿದೆ. ಕಡಿಮೆ ದರಕ್ಕೆ ಕಂಪನಿಗಳಿಂದ ಖರೀದಿಸಿ, ಆಸ್ಪತ್ರೆಗಳಲ್ಲಿ ದೊಡ್ಡ MRP ಆಧಾರದಲ್ಲಿ ರೋಗಿಗಳಿಗೆ ಬಿಲ್ ಹಾಕಲಾಗುತ್ತಿದೆ. ಈ ಬೃಹತ್ ಲೂಟಿಗೆ ಕಡಿವಾಣ ಹಾಕಲು ಕರ್ನಾಟಕ FDA ಆಯುಕ್ತ ಶ್ರೀನಿವಾಸ್ ಕೇಂದ್ರದ ಎನ್ ಪಿಪಿಎ ( ನ್ಯಾಷನಲ್ ಫಾರ್ಮಸೆಟಿಕಲ್ ಪ್ರೈಸಿಂಗ್ ಅಥಾರಿಟಿ) ಗೆ ಪತ್ರ ಬರೆದಿದ್ದಾರೆ.
FDA Exposes 254 Pharma Companies | ಔಷಧ ಬೆಲೆ ಏರಿಕೆ ಲೆಕ್ಕ ಬಯಲು ಮಾಡಿದ ಅಧಿಕಾರಿಗಳು
ಇದೇ ವೇಳೆ ವೆಲ್ ನೆಸ್ ಫಾರೆವರ್ ನಂತಹ ದೊಡ್ಡ ಚೈನ್ ನಲ್ಲೂ ನಕಲಿ ಔಷಧ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಔಷಧ ಪೂರೈಕೆ ಜಾಲದ ಮೇಲೆಯೇ ಅನುಮಾನ ಮೂಡಿದೆ. ಒಂದು ಕಡೆ ನಕಲಿ ಔಷಧ ಮಾರಿದರೆ ಮರ್ಡರ್ ಕೇಸ್ ಎಂಬ ಎಚ್ಚರಿಕೆ, ಮತ್ತೊಂದೆಡೆ ಅಸಲಿ ಔಷಧದ ಹೆಸರಲ್ಲೇ 60 ರಿಂದ 90 ಪಟ್ಟು ಲೂಟಿ ನಡಿತಿದೆ..ಬಡ ರೋಗಿ ಆಸ್ಪತ್ರೆಗೆ ಬಂದರೆ ಆಸ್ತಿಯನ್ನೇ ಮಾರುವ ಸ್ಥಿತಿ ಬಂದಿದೆ. ಸರ್ಕಾರ ಈಗ NPPA ಮೂಲಕ ಈ ದರ ನಿಯಂತ್ರಣಕ್ಕೆ ಮುಂದಾಗದಿದ್ದರೆ, ಆರೋಗ್ಯ ವ್ಯವಸ್ಥೆಯ ಮೇಲೆಯೇ ಜನರಿಗೆ ನಂಬಿಕೆ ಹೊರಟು ಹೋಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us