ಮೈಸೂರು: ಹೈಕೋರ್ಟ್ ಸೂಚನೆಯ ಮೇರೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸಂಬಂಧಿ ಪ್ರೊ. ಕೆ ಎಸ್ ರಂಗಪ್ಪ ಸೇರಿದಂತೆ 3 ವಿಶ್ರಾಂತ ಕುಲಪತಿಗಳ ವಿರುದ್ಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
ಕೆಎಸ್ಒಯು ವಿಶ್ರಾಂತ ಕುಲಪತಿಗಳಾದ ಪ್ರೊ.K.S.ರಂಗಪ್ಪ, ಪ್ರೊ. ಸುಧಾರಾವ್, ಪ್ರೊ. ಕೃಷ್ಣನ್ ವಿರುದ್ಧ FIR ದಾಖಲಾಗಿದೆ. ಕೋರ್ಸ್ ವಿಚಾರದಲ್ಲಿ ಮಾನ್ಯತೆಯೇ ಇಲ್ಲದ ಸಂಸ್ಥೆಗಳ ಜತೆ KSOU ಒಪ್ಪಂದ ಮಾಡಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ವಂಚಿಸಿದ ಆರೋಪದಲ್ಲಿ FIR ದಾಖಲಾಗಿದೆ.
ಪ್ರೊ.ಭಕ್ತವತ್ಸಲಂ ತನಿಖಾ ಸಮಿತಿ ವರದಿಯಲ್ಲಿ ಈ ಮೂವರೂ ವಿಸಿಗಳ ಅಧಿಕಾರಾವಧಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ವರದಿ ಆಧಾರದಲ್ಲಿ FIR ದಾಖಲು ಮಾಡಲಾಗಿದೆ.
Published On - 6:11 pm, Sat, 21 December 19