ಹಾಸನ: 80 ಅಡಿ ಪಾಳು ಬಾವಿಗೆ ಬದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ

| Updated By: ರಶ್ಮಿ ಕಲ್ಲಕಟ್ಟ

Updated on: Feb 07, 2021 | 11:05 AM

ಶುಕ್ರವಾರ ರಾತ್ರಿ ಬಾವಿಕಟ್ಟೆ ಮೇಲೆ ಕುಳಿತಿದ್ದಾಗ ಆಯತಪ್ಪಿ ಮೋಹನ್​ಕುಮಾರ್ (42) ಎಂಬುವವರು 80 ಅಡಿ ಆಳದ ಪಾಳುಬಾವಿಗೆ ಬಿದ್ದಿದ್ದರು.

ಹಾಸನ: 80 ಅಡಿ ಪಾಳು ಬಾವಿಗೆ ಬದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ
ಪಾಳು ಬಾವಿ, ಚಿಕಿತ್ಸೆ ಪಡೆಯುತ್ತಿರುವ ಮೋಹನ್​ಕುಮಾರ್
Follow us on

ಹಾಸನ: 80 ಅಡಿ ಆಳದ ಪಾಳು ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕ ದಳ ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ನಾರಾಯಣಘಟ್ಟೆಹಳ್ಳಿಯಲ್ಲಿ ಸಂಭವಿಸಿದೆ.

ಶುಕ್ರವಾರ ರಾತ್ರಿ ಬಾವಿಕಟ್ಟೆ ಮೇಲೆ ಕುಳಿತಿದ್ದಾಗ ಆಯತಪ್ಪಿ ಮೋಹನ್​ಕುಮಾರ್ (42) ಎಂಬುವವರು 80 ಅಡಿ ಆಳದ ಪಾಳುಬಾವಿಗೆ ಬಿದ್ದಿದ್ದರು. ಬಾವಿಯಿಂದ ಮೇಲೆ ಬರಲು ರಾತ್ರಿಯಿಡಿ ಒದ್ದಾಡುತ್ತಿದ್ದರು. ಶನಿವಾರ ಬೆಳಗ್ಗೆ ಬಾವಿ ಸಮೀಪ ನರಳಾಟದ ಸದ್ದು ಕೇಳಿ ಗಮನಿಸಿದ ಗ್ರಾಮಸ್ಥರು ಅಗ್ನಿ ಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ಮಾಡಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಪಾಳುಬಾವಿಗೆ ಬಿದ್ದ ವ್ಯಕ್ತಿಗೆ ಎರಡು ಕಾಲು ಮುರಿದು ಗಂಭೀರ ಗಾಯವಾಗಿದೆ. ಸದ್ಯ ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ: ಆಟವಾಡುತ್ತಿದ್ದಾಗ ಅಡಿಕೆ ನುಂಗಿ 1 ವರ್ಷದ ಮಗು ಸಾವು