ಗದಗದಲ್ಲಿ ಅಕ್ರಮ ಅನ್ನಭಾಗ್ಯ ಅಕ್ಕಿ ದಾಸ್ತಾನು: ಆಹಾರ ಇಲಾಖೆ ಅಧಿಕಾರಿಗಳಿಂದ ಜಪ್ತಿ

| Updated By: ರಾಜೇಶ್ ದುಗ್ಗುಮನೆ

Updated on: Jan 29, 2021 | 8:03 PM

‘ಅನ್ನಭಾಗ್ಯ’ ಅಕ್ಕಿಯನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದು ಬೆಳಕಿಗೆ ಬಂದಿದ್ದು, 50 ಕೆ.ಜಿಯ 100 ಅಕ್ಕಿ ಮೂಟೆಗಳನ್ನು ಗದಗ ಅಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಗದಗದಲ್ಲಿ ಅಕ್ರಮ ಅನ್ನಭಾಗ್ಯ ಅಕ್ಕಿ ದಾಸ್ತಾನು: ಆಹಾರ ಇಲಾಖೆ ಅಧಿಕಾರಿಗಳಿಂದ ಜಪ್ತಿ
ಸ್ಥಳದ ಪರಿಶೀಲನೆ ನಡೆಸುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು
Follow us on

ಗದಗ: ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿದ್ದ 100 ಪ್ಯಾಕೇಟ್ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಪ್ತಿ ಮಾಡಿದ ಘಟನೆ ಗದಗ ನಗರದ ಟ್ಯಾಗೋರ್ ರೋಡ್​ನಲ್ಲಿರುವ ಮನೆಯಲ್ಲಿ ನಡೆದಿದೆ.

‘ಅನ್ನಭಾಗ್ಯ’ ಅಕ್ಕಿಯನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದು ಬೆಳಕಿಗೆ ಬಂದಿದ್ದು, 50 ಕೆ.ಜಿಯ 100 ಅಕ್ಕಿ ಮೂಟೆಗಳನ್ನು ಗದಗ ಅಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಿದ ಗೋಧಿ, ತೊಗರಿ ಬೆಳೆ, ಹೆಸರು‌ಕಾಳುಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ದಾಸ್ತಾನು ಮಾಡಿದ ಅಕ್ಕಿ ಚೀಲಗಳು

 

ಅನ್ನಕ್ಕೆ ಕನ್ನ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದವರು ಅಂದರ್‌

Published On - 8:03 pm, Fri, 29 January 21