ತುಮಕೂರಿನ ರಸ್ತೆ ಅಗಲೀಕರಣಕ್ಕೆ ಅಡ್ಡಲಾಗಿದ್ದ ಮರಗಳನ್ನ ಕಡಿಯದೆ ಬೇರೆಡೆಗೆ ಶಿಫ್ಟ್ ಮಾಡುವ ಮಹತ್ವದ ಯೋಜನೆಯನ್ನು ತುಮಕೂರಿನ ಸ್ಮಾರ್ಟ್ ಸಿಟಿ ಮಾಡುತ್ತಿದೆ.
ಇಗಾಗಲೇ ಸರ್ಕಾರದ ಯೋಜನೆಯಂತೆ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡೆಯಬೇಕಿದೆ ಹೀಗಾಗಿ ತುಮಕೂರು ಸ್ಮಾರ್ಟ್ ಸಿಟಿ ರಸ್ತೆ ಅಗಲೀಕರಣಕ್ಕೆ ಕಡೆಯುವ ಮರಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲು ಮುಂದಾಗಿದ್ದು, ಇತರೆ ಸ್ಥಳೀಯ ಸಂಸ್ಥೆಗಳು ಕೂಡ ಕೈಜೋಡಿಸಿವೆ. ಈ ಕಾರ್ಯ ಚಾಲ್ತಿಯಲಿದ್ದು, ನಗರದ ರಾಧಾಕೃಷ್ಣ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಮರಗಳನ್ನು ಬುಡಸಮೇತ ಕಿತ್ತು ಮರು ನಾಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ಮೋದಿ ಕನಸಿನ ಸ್ಮಾರ್ಟ್ ಸಿಟಿ ಯೋಜನೆ ತುಮಕೂರಿನ ಮರಗಳ ಉಳಿವಿಗೆ ನಿಂತಿದೆ.