ಇದೇ ಮೊದಲ ಬಾರಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ 1.53 ಕೋಟಿ ರೂ. ಸಂಗ್ರಹ
ಎರಡೂವರೆ ಕೆಜಿ ಬಂಗಾರ ಮತ್ತು 4,200 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ. ಕಳೆದ ಜನವರಿಯಿಂದ ಪ್ರತಿದಿನ ಕನಿಷ್ಠ 10 ಸಾವಿರ ಭಕ್ತರು ಆಗಮಿಸುತ್ತಿದ್ದಾರೆ.
ಉಡುಪಿ: ಕೊರೊನಾ (Coronavirus) ನಿರ್ಬಂಧಗಳ ಸಡಿಲಿಕೆ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ (Kollur Mookambika Temple) ಭಕ್ತರ ಸಂಖ್ಯೆ ಏರಿಕ ಕಾಣುತ್ತಿದೆ. ಮೇ 10ರಂದು ಕಾಣಿಕೆ ಹುಂಡಿಯ ಎಣಿಕೆ ನಡೆದಿದ್ದು, ದಾಖಲೆಯ 1,53,41,923 ರೂ. ಸಂಗ್ರಹವಾಗಿದೆ. ಎರಡೂವರೆ ಕೆಜಿ ಬಂಗಾರ ಮತ್ತು 4,200 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ. ಕಳೆದ ಜನವರಿಯಿಂದ ಪ್ರತಿದಿನ ಕನಿಷ್ಠ 10 ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ಇಷ್ಟು ಪ್ರಮಾಣದ ಹಣ ಸಂಗ್ರಹವಾಗಿರುವುದು ಇದೇ – ಮೊದಲ ಬಾರಿಯಾಗಿದೆ. ಸಾಮಾನ್ಯವಾಗಿ ಪ್ರತೀ ತಿಂಗಳು ಎಣಿಕೆ ನಡೆಯುತ್ತಿದ್ದು, ಸರಾಸರಿ 65 ಲಕ್ಷ ರೂ.ಸಂಗ್ರಹವಾಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆಯಲ್ಲಿ 1.39 ಕೋಟಿ ರೂ. ಸಂಗ್ರಹವಾಗಿತ್ತು. ಎಣಿಕೆ ವೇಳೆ ದೇವಳದ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ
Namitha Pregnant: ತಾಯಿ ಆಗ್ತಿದ್ದಾರೆ ನಮಿತಾ: ಫೋಟೋ ಮೂಲಕ ಖುಷಿಯ ಸಮಾಚಾರ ತಿಳಿಸಿದ ಸ್ಟಾರ್ ನಟಿ
ಡಾ ಶಿವರಾಜ್ ಪಾಟೀಲ್ VS ಎಸ್ಆರ್ ರೆಡ್ಡಿ: ರಾಯಚೂರು ಶಾಸಕರ ವಿರುದ್ಧ ನಾರಾಯಣಪೇಟ್ ಶಾಸಕ ವಾಗ್ದಾಳಿ