ಅಕಾಲಿಕ‌ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಏರಿಕೆ; ಗ್ರಾಹಕರಿಗೆ ಶಾಕ್

ಅಕಾಲಿಕ‌ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಏರಿಕೆ; ಗ್ರಾಹಕರಿಗೆ ಶಾಕ್
ಸಾಂದರ್ಭಿಕ ಚಿತ್ರ

ಮಳೆ ಹಿನ್ನೆಲೆ ತರಕಾರಿ ಬೆಳೆ ಬೆಳೆಯಲು ಸಮಸ್ಯೆಯಾಗುತ್ತಿದೆ. ಇನ್ನು ಕೆಲವೆಡೆ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೊಲ, ಗದ್ದೆಗಳು ಕೆರೆಯಂತಾಗುತ್ತಿವೆ. ಹೀಗಾಗಿ ಬೆಳೆ ಬೆಳೆಯಲು ಸಮಸ್ಯೆಯಾಗಿದ್ದು ತರಕಾರಿ, ಹಣ್ಣುಗಳ ಬೆಲೆ ಹೆಚ್ಚಾಗುತ್ತಿದೆ. ಮಾರುಕಟ್ಟೆಗೆ ತರಕಾರಿಗಳು ಹೆಚ್ಚಾಗಿ ಬರದ ಕಾರಣ ಬೆಲೆ‌ ಏರಿಕೆಯಾಗಿದೆ.

TV9kannada Web Team

| Edited By: Ayesha Banu

May 11, 2022 | 2:46 PM

ಬೆಂಗಳೂರು: ಅಕಾಲಿಕ‌ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದೆ. 15 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಒಂದೇ ವಾರದಲ್ಲಿ 80 ರೂಗೆ ಏರಿಕೆಯಾಗಿದೆ. ಬೀನ್ಸ್, ಸೋಪ್ಪುಗಳು ಸೇರಿದಂತೆ ಇತರ ತರಕಾರಿಗಳ ಬೆಲೆಯೂ ಏರಿಕೆ ಕಂಡಿದೆ. ಹೀಗೆ ಮಳೆ ಮುಂದುವರೆದರೆ ತರಕಾರಿಗಳ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯಾತೆ ಇದೆ ಎನ್ನಲಾಗುತ್ತಿದೆ. ಮಳೆ ಹಿನ್ನೆಲೆ ತರಕಾರಿ ಬೆಳೆ ಬೆಳೆಯಲು ಸಮಸ್ಯೆಯಾಗುತ್ತಿದೆ. ಇನ್ನು ಕೆಲವೆಡೆ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೊಲ, ಗದ್ದೆಗಳು ಕೆರೆಯಂತಾಗುತ್ತಿವೆ. ಹೀಗಾಗಿ ಬೆಳೆ ಬೆಳೆಯಲು ಸಮಸ್ಯೆಯಾಗಿದ್ದು ತರಕಾರಿ, ಹಣ್ಣುಗಳ ಬೆಲೆ ಹೆಚ್ಚಾಗುತ್ತಿದೆ. ಮಾರುಕಟ್ಟೆಗೆ ತರಕಾರಿಗಳು ಹೆಚ್ಚಾಗಿ ಬರದ ಕಾರಣ ಬೆಲೆ‌ ಏರಿಕೆಯಾಗಿದೆ. ತರಕಾರಿ‌ ಬೆಲೆ ಕೇಳಿ ಗ್ರಾಹಕರು ಬಾಯ್ ಮೇಲೆ ಬೆರಳು ಇಟ್ಟುಕೊಳ್ಳುವಂತಾಗಿದೆ. ಹೀಗೆ ಬೆಲೆ ಏರಿಕೆ ಮುಂದುವರೆದರೆ ಜೀವನ ಹೇಗೆ ಮಾಡೋದು ಅಂತ ಗ್ರಾಹಕರು ಪ್ರಶ್ನೆ ಮಾಡಿದ್ದಾರೆ.

ಇಂದಿನ ತರಕಾರಿಗಳ‌ ಬೆಲೆ ಹೇಗಿದೆ? ಬೀನ್ಸ್ -80 ರೂ ಕ್ಯಾರೆಟ್ -80 ರೂ ಬಿಟ್ ರೋಟ್ -30ರೂ ಕ್ಯಾಪ್ಸಿಕಮ್ -60 ರೂ ನವಿಲುಕೋಸು -40 ರೂ ಬೆಂಡೆಕಾಯಿ -30 ರೂ ಶುಂಟಿ -80 ರೂ ಮೆಣಸಿನಕಾಯಿ -80ರೂ ಟೋಮಾಟೋ -80ರೂ ಮೂಲಂಗಿ -30ರೂ ಈರುಳ್ಳಿ -20ರೂ ಬದನೆಕಾಯಿ -40 ರೂ ಕೊತ್ತಂಬರಿ ಸೊಪ್ಪು -40ರೂ

ಇಂದಿನ ಹಣ್ಣುಗಳ‌ ಬೆಲೆ ಹೇಗಿದೆ? ಸೇಬು ಕೆಜಿಗೆ -160 ರೂ ದಾಳಿಂಬೆ ಕೆಜಿಗೆ -300 ರೂ ದಾಕ್ಷಿ ಕೆಜಿಗೆ -100 ರೂ ಮಾವಿನ ಹಣ್ಣು -120 ರೂ ಕಿತ್ತಲೆ -120 ರೂ ಅಪೋಟ -70 ರೂ ಬಾಳೆಹಣ್ಣು -70 ರೂ ಸೀಬೆಹಣ್ಣು -60 ರೂ ಮೊಸಂಬಿ -100 ರೂ ಪೈನಪಲ್ -40 ರೂ ಇನ್ನು ಒಂದು ತಿಂಗಳು ತರಕಾರಿ ಬೆಲೆ ಹೆಚ್ಚಾಗುವ ಸಾಧ್ಯಾತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಲಿಂಬೆ ಬೆಳೆ ಉಳಿಸಿಕೊಳ್ಳಲು ರೈತರ ಹರ ಸಾಹಸ ಇನ್ನು ವಿಜಯಪುರದಲ್ಲಿ ಲಿಂಬೆ ಬೆಳೆ ಉಳಿಸಲು ಬೆಳೆಗಾರರು ಹರ ಸಾಹಸ ಪಡುತ್ತಿದ್ದಾರೆ. ಇಂಡಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ರೈತರು ಲಿಂಬೆ ತೋಟಕ್ಕೆ ಟ್ಯಾಂಕರ್ ಮೂಲಕ ನೀರು ಬಿಡುತ್ತಿದ್ದಾರೆ. ಕೆಲವು ಕಿಲೋ ಮೀಟರ್ ದೂರ ಸಾಗಿ ಅಲ್ಲಿಂದ ಟ್ಯಾಂಕರ್ ಮೂಲಕ ನೀರು ತಂದು ಹಾಕುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 1000 ರಿಂದ 1500 ರೂಪಾಯಿ ಖರ್ಚು ಆಗುತ್ತಿದೆ. ನೂರಾರು ಲಿಂಬೆ ಗಿಡಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವಂತ ಪರಿಸ್ಥಿತಿ ಎದುರಾಗಿದೆ. ಸಾಲಸೋಲ ಮಾಡಿ ಲಿಂಬೆ ಬೆಳೆಗಳನ್ನ ಉಳಿಸಿಕೊಳ್ಳೋಕೆ ಲಿಂಬೆ ಬೆಳೆಗಾರರು ಹೋರಾಡುತ್ತಿದ್ದಾರೆ. ಬೇಸಿಗೆಯಲ್ಲಿ ಲಿಂಬೆ ಒಣಗಿ ಹೋದರೆ ಎಲ್ಲಾ ಬೆಳೆ ನಾಶವಾಗೋ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಲಿಂಬೆ ಅಭಿವೃದ್ದಿ ಮಂಡಳಿ ಜಿಲ್ಲೆಯಲ್ಲಿ ಇದ್ದೂ ಇಲ್ಲದಂತಾಗಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ಟ್ಯಾಂಕರ್ ಮೂಲಕ ನೀರು ಹಾಕುತ್ತಿರೋ ರೈತರ ನೆರವಿಗೆ ಲಿಂಬೆ ಅಭಿವೃದ್ದಿ ಮಂಡಳಿ, ತೋಟಗಾರಿಕಾ ಇಲಾಖೆ ಹಾಗೂ ಸರ್ಕಾರ ಸಹಾಯ ಮಾಡಬೇಕೆಂದು ಆಗ್ರಹಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada