ಒಂದು ವರ್ಷದ ಹಿಂದೆ ತಾಯಿನಾಯಿ ತನ್ನ ಮರಿಗಳಿಗೆ ಹಾಲುಣಿಸುವ ಸಂದರ್ಭದಲ್ಲಿ ವಿಐಪಿ ಲೇನ್ ನಿಂದ ಬಂದ ಅಂಬ್ಯುಲೆನ್ಸ್ ಗೆ ಸಿಕ್ಕಿ ಅಸುನೀಗಿತ್ತು. ಅಪಘಾತದಲ್ಲಿ ಬದುಕುಳಿದಿದ್ದು ಈ ಗಂಡು ಮರಿ ನಾಯಿಯೊಂದೇ. ಈಗ ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಸೈರನ್ ಹಾಕಿ ವಿಐಪಿ ಲೇನ್ ನಿಂದ ಬರುವ ಎಲ್ಲ ಅಂಬ್ಯುಲೇನ್ಸ್ ವಾಹನಗಳನ್ನೂ ಅಡ್ಡಗಟ್ಟುತ್ತದೆ ಈ ಮರಿ ನಾಯಿ. ಕೇವಲ ಅಂಬ್ಯುಲೆನ್ಸ್ ಅಷ್ಟೆ ಅಲ್ಲ, ಪೋಲಿಸ್ ವಾಹನಬವನ್ನೂ ಅಡ್ಡಗಟ್ಟುತ್ತದೆ ಇದು. ವಿಐಪಿ ಲೇನ್ ನಿಂದ ಸೈರನ್ ಹಾಕಿ ಬರುವ ವಾಹನಗಳ ಮೇಲೆ ಮಾತ್ರ ಎರಗುವ ಈ ನಾಯಿ ಸೈರನ್ ಶಬ್ಧ ಕೀವಿಗೆ ಬೀಳುತ್ತಿದ್ದಂತೆ ಎಲ್ಲೆ ಇದ್ದರೂ ಓಡೋಡಿ ಬಂದು ಅಂಬ್ಯುಲೆನ್ಸ್ ವಾಹನಕ್ಕೆ ಅಡ್ಡಗಟ್ಟಿ ತನ್ನ ಸೇಡಿನ್ನು ತೀರಿಸಿಕೊಳ್ಳಲು ಹವಣಿಸುತ್ತದೆ ಈ ನಾಯಿ.
ನಾಯಿಯ ಕರುಣ ರೋದನಕ್ಕೆ ಮೌನವಾಗಿ ಮಿಡಿಯುವ ಹಟ್ಟಿಕೇರಿ ಟೋಲ್ ಗೇಟ್ ಸಿಬ್ಬಂದಿ:
ಸೈರನ್ ಹಾಕಿ ಬಂದಿರುವ ವಾಹನವೇ ತನ್ನ ತಾಯಿಯನ್ನ ಅಪಘಾತಕ್ಕೀಡು ಮಾಡಿ, ಸಾವಿಗೆ ಕಾರಣವಾಗಿದೆ ಎಂದು ತಿಳಿದು ಪ್ರತಿ ಅಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನದ ಮೇಲೆ ಎರಗುವ ನಾಯಿಯ ಜ್ಞಾಪಕ ಶಕ್ತಿಗೆ ಇಲ್ಲಿನ ಹಟ್ಟಿಕೇರಿ ಟೋಲ್ ಗೇಟ್ ಸಿಬ್ಬಂದಿ ಮೌನವಾಗಿ ಮಿಡಿಯುತ್ತಾರೆ. ಕಳೆದ ಏಳೆಂಟು ತಿಂಗಳಿಂದ ನಾಯಿ ಬೆಳೆಯುತ್ತಾ ಬರುತ್ತಿದ್ದಂತೆ ಅದರ ಸೇಡು ಕುಗ್ಗುವ ಬದಲು ಇನ್ನಷ್ಟು ಮತ್ತಷ್ಟು ಬೆಳೆಯುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ ಟೋಲ್ ಸಿಬ್ಬಂದಿಯ ಜತೆ ಈ ಮರಿನಾಯಿ ಅನೋನ್ಯವಾಗಿದೆ. ತಾಯಿ ನಾಯಿಯ ಸಾವಿನ ಸಂದರ್ಭವನ್ನು ಕಣ್ಣಾರೆ ಕಂಡಿರುವ ಈ ಸಿಬ್ಬಂದಿ, ಮರಿ ನಾಯಿಯನ್ನು ಅನ್ನ ನೀರು ನೀಡಿ ಆಪ್ಯಾಯತೆಯಿಂದ ಪೋಷಿಸುತ್ತಿದ್ದಾರೆ.
ಶ್ವಾನದ ಸೇಡಿನ ಹಿಂದಿದೆ ಕಣ್ಣೀರ ಕಥೆ..! ಸೈರನ್ ಹಾಕಿ ಬರೋ ವಾಹನಗಳೇ ಈ ನಾಯಿ ಟಾರ್ಗೆಟ್ |
ಇದನ್ನೂ ಓದಿ:
Viral Video: 28 ಹೆಂಡತಿಯರು, 135 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವೃದ್ಧ; ವಿಡಿಯೋ ವೈರಲ್!