ಹಾಸನ: ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿದೆ. ಸೆರೆಯಾಗಿರುವ 4 ವರ್ಷದ ಗಂಡು ಚಿರತೆ ನಾಗಪುರಿ ಸಾಮಾಜಿಕ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿನ ಜನರಿಗೆ ಭಾರೀ ಆತಂಕವನ್ನು ಸೃಷ್ಟಿಮಾಡಿತ್ತು.
ಚಿರತೆ ದಾಳಿ ಭೀತಿಯಿಂದ ಬೊಮ್ಮೇನಹಳ್ಳಿ, ದುಮ್ಮೇನಹಳ್ಳಿ, ಆನೆಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದರು. ಯಾವ ಕ್ಷಣದಲ್ಲಿ ಏನಾಗುವುದೂ. ಚಿರತೆ ಯಾವ ಕ್ಷಣದಲ್ಲಾದ್ರೂ ನಮ್ಮ ಮೇಲೆ ದಾಳಿ ಮಾಡಬಹುದೆಂದು ಭಯಭೀತರಾಗಿದ್ದರು.
ಅರಸೀಕೆರೆ ತಾಲೂಕಿನ ಅಗ್ಗುಂದ ಗ್ರಾಮದ ಬಸವರಾಜ್ ಎಂಬುವರ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಚಿರತೆ ಸೆರೆಯಿಂದ ಗ್ರಾಮದ ಜನರಲ್ಲಿನ ಆತಂಕ ಕಡಿಮೆಯಾಗಿದೆ.